For Quick Alerts
  ALLOW NOTIFICATIONS  
  For Daily Alerts

  ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ಬಂತು ಬಿಗ್ ಸರ್ಪ್ರೈಸ್!

  |

  ಅಭಿಮಾನಿಗಳಿಂದ ನಟ ರಾಕ್ಷಸ ಅಂತಲೇ ಕರೆಸಿಕೊಳ್ಳುವ ನಟ ಡಾಲಿ ಧನಂಜಯ್‌ಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಸಾಲು ಸಾಲು ಸಿನಿಮಾಗಳಲ್ಲಿ ಧನಂಜಯ್ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟ. ಪ್ರತಿ ಸಿನಿಮಾದಲ್ಲೂ ಹೊಸ ಪಾತ್ರದ ಮೂಲಕ ಧನಂಜಯ್ ಅಬ್ಬರಿಸುತ್ತಾರೆ.

  ಈ ಬಾರಿ ಧನಂಜಯ್ ತಮ್ಮ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಹಟ್ಟುಹಬ್ಬವನ್ನು ನಟ ಧನಂಜಯ್ ತಮ್ಮ ಅಭಿಮಾನಿಗಳ ಜೊತೆಗೆ ಆಚರಿಸುತ್ತಿಲ್ಲ. ಪುನೀತ್ ರಾಜ್‌ಕುಮಾರ್ ನಿಧನದ ಕಾರಣ ಧನಂಜಯ್ ಸಂಭ್ರಮಾಚರಣೆ ಮಾಡೋದು ಬೇಡ ಎಂದು ಅಭಿಮಾನಿಗಳಿಗೆ ಕರೆಕೊಟ್ಟಿದ್ದಾರೆ.

  ಓಟಿಟಿಗೆ ಲಗ್ಗೆ ಇಟ್ಟ ಶಿವಣ್ಣ, ಧನಂಜಯ್ ಅಭಿನಯದ 'ಬೈರಾಗಿ': ವೂಟ್ ಸೆಲೆಕ್ಟ್‌ ಪ್ರೀಮಿಯರ್ಓಟಿಟಿಗೆ ಲಗ್ಗೆ ಇಟ್ಟ ಶಿವಣ್ಣ, ಧನಂಜಯ್ ಅಭಿನಯದ 'ಬೈರಾಗಿ': ವೂಟ್ ಸೆಲೆಕ್ಟ್‌ ಪ್ರೀಮಿಯರ್

  ಹಾಗಂತ ತಮ್ಮ ಅಭಿಮಾನಿಗಳಿಗೆ ಧನಂಜಯ್ ನಿರಾಸೆ ಉಂಟು ಮಾಡಿಲ್ಲ. ಯಾಕೆಂದರೆ ಧನಂಜಯ್ ಸಿನಿಮಾಗಳ ಅಪ್ಡೇಟ್ ಹೊರ ಬಂದಿದೆ. ಧನಂಜಯ್ ನಟನೆಯ ಮುಂದಿನ ಸಿನಿಮಾ 'ಹೆಡ್ ಬುಷ್' ಹಾಡೊಂದು ರಿಲೀಸ್ ಆಗಿದೆ. ಇದರ ಜೊತೆಗೆ 'ಹೊಯ್ಸಳ' ಚಿತ್ರದ ಹೊಸ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇನ್ನು ಕೆಆರ್‌ಜಿಯ 'ಉತ್ತರಕಾಂಡ' ಸಿನಿಮಾ ಪೋಸ್ಟರ್ ಕೂಡ ರಿಲೀಸ್ ಆಗಿದೆ.

  ಇದೆಲ್ಲಾ ಒಂದು ಕಡೆ ಆದರೆ, ನಟ ಧನಂಜಯ್ ಹುಟ್ಟುಹಬ್ಬಕ್ಕೆ ಶುಭಾಷಯದ ಮಹಾಪುರವೇ ಹರಿದು ಬಂದಿದೆ. ನಟಿ ರಮ್ಯಾ, ಅಮೃತಾ ಅಯ್ಯಂಗಾರ್, ನೀನಾಂ ಸತೀಶ್, ರಾಮ್ ಗೋಪಾಲ್ ವರ್ಮಾ, ಸಪ್ತಮಿ, ಸಿಂಪಲ್ ಸುನಿ, ಸೇರಿದಂತೆ ಹಲವು ಶುಭ ಕೋರಿದ್ದಾರೆ. ವಿಶೇಷ ಅಂದ್ರೆ ಕಾಪಿನಾಡು ಚಂದು ಕೂಡ ಧನಂಜಯ್‌ಗೆ ಹಾಡಿನ ಮೂಲಕ ಶುಭಕೋರಿದ್ದಾರೆ.

  'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!

  2013 ರಲ್ಲಿ ತೆರೆಕಂಡ 'ಡೈರೆಕ್ಟರ್ ಸ್ಪೆಷಲ್' ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ನಟ ಧನಂಜಯ್. ಇವರ ನಟನೆಯ ಕಿರುಚಿತ್ರ 'ಜಯನಗರ 4th ಬ್ಲಾಕ್'ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಮುಂದೆ 'ರಾಟೆ', 'ಬಾಕ್ಸರ್', 'ಜೆಸ್ಸಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಧನಂಜಯ್ ಐತಿಹಾಸಿಕ ಚಿತ್ರ 'ಅಲ್ಲಮ'ಕ್ಕಾಗಿ ಫಿಲ್ಮ ಫೇರ್ ವಿಮರ್ಶಕರ ಅತ್ತ್ಯುತ್ತಮ ನಟ ಪ್ರಶಸ್ತಿ ಪಡೆದರು.

  Actor Dhananjay Celebrating 36th Birthday, Dhananjay New Film Posters Release

  2018 ರಲ್ಲಿ ತೆರೆಕಂಡ ದುನಿಯಾ ಸೂರಿ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ 'ಟಗರು' ಚಿತ್ರದಲ್ಲಿ ಡಾಲಿಯಾಗಿ ಖಳನಟನ ಪಾತ್ರದಲ್ಲಿ ಮಿಂಚಿದರು. ಈ ಚಿತ್ರದಲ್ಲಿನ ಇವರ ಅಭಿನಯಕ್ಕೆ ಪ್ರೇಕ್ಷಕರು ಸಂಪೂರ್ಣವಾಗಿ ಫಿದಾ ಆದರು. ಬಳಿಕ ರಾಮಗೋಪಾಲ್ ವರ್ಮಾ ನಿರ್ಮಾಣದ ಕನ್ನಡ ಮತ್ತು ತೆಲಗು ಭಾಷಾ ಚಿತ್ರ 'ಭೈರವಗೀತಾ' ಚಿತ್ರದಲ್ಲಿ ನಾಯಕನಾಗಿ ಅರ್ಭಟಿಸಿರುವ ಧನಂಜಯ್, 'ಯಜಮಾನ', ಯುವರತ್ನ, ಪುಷ್ಪ ಚಿತ್ರದಲ್ಲಿ ನಟಿಸಿದ್ದಾರೆ.

  Recommended Video

  Dhananjay | ಕಾಳೇನಹಳ್ಳಿ ಧನಂಜಯ ನಟರಾಕ್ಷಸ ಆಗಿದ್ಹೇಗೆ..? | Head Bush | Filmibeat Kannada
  English summary
  Actor Dhananjay Celebrating 36th Birthday, Dhananjay New Film Posters Release, Know More,
  Tuesday, August 23, 2022, 17:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X