'ಮಂಕಿ ಸೀನ' ಎಂದು ಹೆಸರು ಬಲಾಯಿಸಿಕೊಂಡ ಸ್ಪೆಷಲ್ ಸ್ಟಾರ್ ಧನಂಜಯ್

ಸ್ಯಾಂಡಲ್ ವುಡ್ ನ ಸ್ಪೆಷಲ್ ಸ್ಟಾರ್ ಧನಂಜಯ್ ಡಾಲಿ ಹೆಸರಿನ ಮೂಲಕ ಖ್ಯಾತಿಗಳಿಸಿದ್ದಾರೆ. ಟಗರು ಸಿನಿಮಾ ನಂತರ ಧನಂಜಯ್ ಡಾಲಿ ಆಗಿ ಸಖತ್ ಖ್ಯಾತಿಗಳಿಸಿದ್ದರು. ಧನಂಜಯ್ ಎನ್ನುವುದಕ್ಕಿಂತ ಡಾಲಿ ಎಂದರೆ ಥಟ್ ಅಂತ ಗೊತ್ತಾಗುತ್ತೆ.

Recommended Video

Popcorn Monkey Tiger : ಮಂಕಿ ಸೀನನಿಗೆ ಸಾಥ್ ನೀಡಿದ ಪುಷ್ಕರ್ ಫಿಲ್ಮ್ಸ್ | PMT | Daali Dhananjaya | Suri

ಧನಂಜಯ್ ಈಗ ಮತ್ತೆ ಹೆಸರು ಬದಲಾಯಿಸಿಕೊಂಡಿದ್ದಾರೆ. ಹೌದು, ಡಾಲಿ ಈಗ ಮಂಕಿ ಸೀನ ಆಗಿದ್ದಾರೆ. ಟ್ವಿಟ್ಟರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಡಾಲಿ, ಮಂಕಿ ಸೀನ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ.

ಈ ಚಿತ್ರದಲ್ಲಿ ಡಾಲಿ ಮಂಕಿ ಸೀನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪಾತ್ರದ ಹೆಸರನ್ನೆ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಳಸಿದ್ದಾರೆ. ಚಿತ್ರಕ್ಕೆ ಪ್ರಮೋಷನ್ ಮಾಡುವ ಉದ್ದೇಶದಿಂದ ಮಂಕಿ ಸೀನನ ಹೆಸರನ್ನು ಎಲ್ಲಾ ಕಡೆ ಬಳಸುವ ಮೂಲಕ ಸಿನಿಮಾ ಪ್ರಮೋಟ್ ಮಾಡುತ್ತಿದ್ದಾರೆ. ಡಾಲಿ ಪಾತ್ರದ ಹಾಗೆ ಈ ಮಂಕಿ ಸೀನನ ಪಾತ್ರವು ಫೇಮಸ್ ಆಗುತ್ತಾ, ಡಾಲಿ ಹೋಗಿ ಮಂಕಿ ಸೀನ ಆಗುತ್ತಾರಾ ಧನಂಜಯ್ ಎನ್ನುವುದು ಕುತೂಹಲ ಮೂಡಿಸಿದೆ.

 Actor Dhananjay Has Been Changed His Name Monkey Seena

ಈಗಾಗಲೆ ರಿಲೀಸ್ ಆಗಿರುವ ಫಸ್ಟ್ ಲುಕ್ ಮತ್ತು ಟೀಸರ್ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಧನಂಜಯ್ ಭಯಾನಕ ಲುಕ್ ಗೆ ಮಾಸ್ ಪ್ರಿಯರು ಫಿದಾ ಆಗಿದ್ದಾರೆ. ಪುಟ್ಟ ಟೀಸರ್ ಒಂದು ಸಖತ್ ಭಯಾನಕವಾಗಿದೆ ಎಂದರೆ ಇನ್ನು ಸಿನಿಮಾ ಹೇಗಿರಲಿದೆ ಎನ್ನುವುದು ಪ್ರೇಕ್ಷಕರ ಕುತೂಹಲ.

ಸುಕ್ಕ ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಇದೆ ತಿಂಗಳು 21ಕ್ಕೆ ಶಿವರಾತ್ರಿಯದಿನ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ನಿವೇದಿತಾ, ಅಮೃತಾ ಮತ್ತು ಸಪ್ತಮಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada Actor Dhananjay has been changed his name Monkey Seena. This is the character name of the movie Pop corn Monkey Tiger.
Read more about: dhananjay ಧನಂಜಯ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X