ಧನಂಜಯ್ 'ಹೆಡ್ ಬುಶ್' ವಿವಾದ ತಾತ್ಕಾಲಿಕ: ರಿಲೀಸ್ ಡೇಟ್ ಫಿಕ್ಸ್!

ನಟ ಧನಂಜಯ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಕೂಡ ಸಿನಿಮಾ ಮಾಡುತ್ತಿದ್ದಾರೆ. ನಟನೆಯ ಜೊತೆಗೆ ಡಾಲಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. 'ಹೆಡ್ ಬುಶ್' ಚಿತ್ರದ ಮೂಲಕ ನಿರ್ಮಾಪಕ ಎನಿಸಿಕೊಳ್ಳುತ್ತಿದ್ದಾರೆ.

'ಹೆಡ್ ಬುಶ್' ಸಿನಿಮಾದ ಹಲವು ದಿನಗಳ ಹಿಂದೆಯೇ ಸೆಟ್ಟೇರಿದೆ. ಇತ್ತೀಚೆಗೆ ಚಿತ್ರದ ವಿವಾದದಿಂದ ಹೆಚ್ಚು ಸುದ್ದಿಯಾಗಿತ್ತು. ಆದರೀಗ ಚಿತ್ರದ ಹೊಸ ಅಪ್ಟೇಟ್ ಬಂದಿದೆ. ಇದು ಡಾಲಿ ಅಭಿಮಾನಿಗಳಿಗೆ ಖುಷಿಯಾದ ವಿಚಾರ. ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಿದೆ.

ಡಾಲಿಯನ್ನು ಬೆಂಗಳೂರಿನ ಮಾಜಿ ಡಾನ್ ಜಯರಾಜ್ ರೂಪದಲ್ಲಿ ನೋಡಲು ಇನ್ನು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಸಿನಿಮಾ ಬಹುತೇಕ ಮುಗಿದಿದ್ದು, ರಿಲೀಸ್ ದಿನಾಂಕ ಪ್ರಕಟವಾಗಿದೆ. ಇದರ ಜೊತೆಗೆ ಹೊಸ ಪೋಸ್ಟರ್ ಕೂಡ ರಿಲೀಸ್ ಆಗಿದೆ.

'ಹೆಡ್ ಬುಷ್' ವಿವಾದಕ್ಕೆ ತೆರೆ ಬಿತ್ತಾ?

'ಹೆಡ್ ಬುಷ್' ವಿವಾದಕ್ಕೆ ತೆರೆ ಬಿತ್ತಾ?

ನಟ ಧನಂಜಯ್ 'ಹೆಡ್ ಬುಷ್' ಸಿನಿಮಾ ಆರಂಭ ಆದಾಗಿನಿಂದಲೂ, ಈ ಚಿತ್ರ ಬೆಂಗಳೂರಿನ ಮೊದಲ ಅಂಡರ್‌ವರ್ಲ್ಡ್ ಡಾನ್ ಜಯರಾಜ್ ಜೀವನ ಆಧಾರಿತ ಸಿನಿಮಾ ಎಂದು ಹೇಳಲಾಗಿದೆ. ಆದರೂ ಕೂಡ ಮೊದಲಿಂದ ಸುಮ್ಮನೆ ಇದ್ದ ಜಯರಾಜ್ ಪುತ್ರ ಅಜಿತ್ ಜಯರಾಜ್ ಇದ್ದಕ್ಕಿದ್ದ ಹಾಗೆ ಸಿನಿಮಾದ ವಿರುದ್ಧ ತಿರುಗಿ ಬಿದ್ದಿದ್ದರು. ತಮ್ಮ ತಂದೆಯ ಚರಿತ್ರೆ ಮೇಲಿನ ಈ ಚಿತ್ರವನ್ನು ನಿಲ್ಲಿಸಿ ಎಂದು ಹೋರಾಟಕ್ಕಿಳಿದು ಇಟ್ಟರು.

ಜಯರಾಜ್ ಪುತ್ರನಿಂದ 'ಹೆಡ್ ಬುಷ್'ಗೆ ವಿರೋಧ!

ಜಯರಾಜ್ ಪುತ್ರನಿಂದ 'ಹೆಡ್ ಬುಷ್'ಗೆ ವಿರೋಧ!

ಇತ್ತೀಚೆಗೆ ಅಜಿತ್ ಜಯರಾಜ್ 'ಹೆಡ್ ಬುಷ್' ಚಿತ್ರತಂಡದ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. 'ಹೆಡ್ ಬುಷ್' ಸಿನಿಮಾ ನಿಲ್ಲಿಸುವಂತೆ ಆಗ್ರಹಿಸಿದ್ದರು. ಇದರ ಕುರಿತಾಗಿ ಕಥೆ ಬರೆದ ಅಗ್ನಿ ಶ್ರೀಧರ್, ಮತ್ತು ನಟ ಧನಂಜಯ್ ಪ್ರತಿಕ್ರಿಯೆ ನೀಡಿದ್ದರು. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ವಿವಾದ ಈಗ ತಣ್ಣಗಾಗಿದೆ. ಹಾಗಾಗಿ ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಿದೆ.

ಅಕ್ಟೋಬರ್ 21ಕ್ಕೆ 'ಹೆಡ್ ಬುಷ್' ರಿಲೀಸ್!

ಅಕ್ಟೋಬರ್ 21ಕ್ಕೆ 'ಹೆಡ್ ಬುಷ್' ರಿಲೀಸ್!

ವಿವಾದಗಳು ತಣ್ಣಗಾದ ಬಳಿಕ 'ಹೆಡ್ ಬುಷ್' ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಿದೆ. ಅಕ್ಟೋಬರ್ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಹೊಸ ಪೋಸ್ಟರ್‌ನಲ್ಲಿ ಧನಂಜಯ್ ಹೊಸ ಲುಕ್ ರಿವೀಲ್ ಆಗಿದೆ. ಸಿಗರೇಟ್ ಸೇದುತ್ತಾ, ಧನಂಜಯ್, ಜಯರಾಜ್ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಅಜಿತ್ ಜಯರಾಜ್ ಅಸ್ತು ಎಂದರೆ?

ಅಜಿತ್ ಜಯರಾಜ್ ಅಸ್ತು ಎಂದರೆ?

ಅಜಿತ್ ಜಯರಾಜ್ ಮತ್ತು 'ಹೆಡ್ ಬುಷ್' ಚಿತ್ರದ ನಡುಗೆ ಭೂಗಿಲೆದ್ದಿದ್ದ ವಿವಾದ ಸದ್ಯಕ್ಕೆ ತಣ್ಣಗಾಗಿದೆ. ಬಹುಶಃ ಚಿತ್ರತಂಡ ಅಜಿತ್ ಮಾತುಕತೆಯ ಮೂಲಕ ಎಲ್ಲವನ್ನು ಬಗೆಹರಿಸಿಕೊಂಡಂತಿದೆ. ಹಾಗಾಗಿ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲು ಚಿತ್ರತಂಡಕ್ಕೆ ಸಾಧ್ಯವಾಗಿದೆ. ಇನ್ನು ಸಿನಿಮಾ ಬಂದ ಮೇಲೆ ಜಯರಾಜ್ ಪಾತ್ರ ಹೇಗೆ ಅಬ್ಬರಿಸಲಿದೆ ಎನ್ನುವುದು ಗೊತ್ತಾಗಲಿದೆ.

More from Filmibeat

English summary
Dhananjay's Head Bush Movie Release On October 21st, Is Ajith Jayaraj silent On controversy,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X