For Quick Alerts
  ALLOW NOTIFICATIONS  
  For Daily Alerts

  'ಪಾಪ್ ಕಾರ್ನ್ ಮಂಕಿ ಟೈಗರ್' ಟೀಸರ್: ಭಯಹುಟ್ಟಿಸುತ್ತೆ ನಟರಾಕ್ಷಸ ಧನಂಜಯ್ ಅವತಾರ

  |

  ನಿರ್ದೇಶಕ ಸುಕ್ಕಾ ಸೂರಿ ಮತ್ತು ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ ಕಾಂಬಿನೇಷನ್ ನ ಬಹುನಿರೀಕ್ಷೆಯ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು.

  ಭಯಂಕರವಾಗಿದೆ ಡಾಲಿ ಅಭಿನಯದ ಪಾಪ್ ಕಾರ್ನ್, ಮಂಕಿ, ಟೈಗರ್ ಟೀಸರ್

  ಅಭಿಮಾನಿಗಳ ನಿರೀಕ್ಷೆಗೂ ಮೀರಿದೆ ಧನಂಜಯ್ ಮಂಕಿ ಟೈಗರ್ ಅವತಾರ. 'ಟಗರು' ಡಾಲಿಗಿಂತ ಭಯಾನಕವಾಗಿದೆ ಈ 'ಪಾಪ್ ಕಾರ್ನ್ ಮಂಕಿ ಟೈಗರ್'. ಟೀಸರ್ ಪ್ರಾರಂಭದಲ್ಲೆ ಪ್ರೇಕ್ಷಕರಿಗೆ ರಕ್ತದ ದರ್ಶನವಾಗುತ್ತೆ. ನಿರ್ದೇಶಕ ಸೂರಿಯ 'ರಾ' ಫ್ಲೇವರ್ ಈ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ನೋಡಲು ಸಖತ್ ಭಯಂಕರವಾಗಿದ್ದು ನಟ ಧನಂಜಯ್ ನಟರಾಕ್ಷಸ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

  ಎಲ್ಲೆಲ್ಲೂ ಕಾಣ್ತಿದೆ ಡಾಲಿ ಧನಂಜಯ್ ಬರೆದ ಕವನಎಲ್ಲೆಲ್ಲೂ ಕಾಣ್ತಿದೆ ಡಾಲಿ ಧನಂಜಯ್ ಬರೆದ ಕವನ

  ಕೊಲೆ, ರಕ್ತ, ಹುಡುಗಿ ಕ್ರೈಮ್ ಗಳ ಮದ್ಯ ಪುಟ್ಟ ಮಗು ಟೀಸರ್ ನ ಹೈಲೆಟ್ಸ್. ಆಕ್ಷನ್, ಕ್ರೈಮ್ ಬೇಸ್ಡ್ ಸಿನಿಮಾ ವೀಕ್ಷಕರಿಗೆ ಟೀಸರ್ ಹಬ್ಬದೂಟವಾಗಿದೆ. ಟೀಸರ್ ನಲ್ಲಿಯೆ ಈ ಪರಿ ಅಬ್ಬರಿಸಿರುವ ಧನಂಜಯ್, ಇನ್ನು ಸಿನಿಮಾ ಪೂರ್ತಿ ಹೇಗಿರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

  ಪೋಸ್ಟರ್ ಮೂಲಕವೆ ಭಯಹುಟ್ಟಿಸಿದ್ದ ಸಿನಿಮಾ ಈಗ ಟೀಸರ್ ಮತ್ತಷ್ಟು ಭಯಂಕರವಾಗಿದೆ. ಅಂದ್ಹಾಗೆ 'ಪಾಪ್ ಕಾರ್ನ್ ಮಂಕಿ ಟೈಗರ್' ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಚಿತ್ರಕ್ಕೆ ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟಗರು ನಂತರ ಸೂರಿ, ಚರಣ್ ಮತ್ತು ಧನಂಜಯ್ ಮತ್ತೆ ಒಂದಾಗಿದ್ದಾರೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮಂದೆ ಬಂದಿರುವ 'ಪಾಪ್ ಕಾರ್ನ್ ಮಂಕಿ ಟೈಗರ್' ಸಧ್ಯದಲ್ಲೇ ತೆರೆಗೆ ಬರಲಿದೆ.

  English summary
  Kannada Actor Dhananjay starrer Popcorn Monkey Tiger teaser released. This movie is directed by Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X