ಮುಂದಿನ 3 ತಿಂಗಳು ಡಾಲಿ ಧನಂಜಯ್ ಸಿನಿಮಾಗಳದ್ದೇ ಹಬ್ಬ!

By Bhagya.s

ನಟ ಧನಂಜಯ್ ಸದ್ಯಕ್ಕೆ ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟ. ಕನ್ನಡದಲ್ಲಿ ಮಾತ್ರವಲ್ಲ, ಪರಭಾಷಾ ಸಿನಿಮಾರಂಗದಲ್ಲೂ ಕೂಡ ನಟ ಧನಂಜಯ್‌ಗೆ ಬೇಡಿಕೆ ಹೆಚ್ಚಾಗಿದೆ. ಡಾಲಿ ರೂಪದಲ್ಲಿ ಬಂದು ಧನಂಜಯ್ ಹೇಗೆ ಅಬ್ಬರಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಂದು ಶುರುವಾದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ನಟ ಧನಂಜಯ್ ಕೇವಲ ನಾಯಕ ನಟನಾಗಿ ಯಾವುದೋ ಒಂದು ರೀತಿಯ ಸಿನಿಮಾಗಳಿಗೆ ಸೀಮಿತವಾಗಿಲ್ಲ. ಬದಲಿಗೆ ನಾನಾ ಬಗೆಯ ಪಾತ್ರಗಳನ್ನು ಪ್ರಯೋಗ ಮಾಡುತ್ತಾರೆ ನಟ ಧನಂಜಯ್. ಧನಂಜಯ್ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದರೆ ಅದು ಅವರ ಬೇರೆ ಸಿನಿಮಾಗಳಿಗಿಂತ ವಿಭಿನ್ನವಾಗಿಯೇ ಇರುತ್ತೆ.

ಈಗಾಗಲೆ ಆ ರೀತಿಯ ಹಲವಾರು ಪಾತ್ರಗಳ ಮೂಲಕ ಹೀರೊ ಆಗಿ, ವಿಲನ್ ವಿಲನ್ ಆಗಿ, ವಿಶೇಷ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಯಾವುದೇ ರೀತಿಯ ಪಾತ್ರ ಮಾಡಿದರೂ ಕೂಡ ನಟ ಧನಂಜಯ್ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಸದ್ಯಕ್ಕೆ ಧನಂಜಯ್ ಅಭಿನಯದ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಯಾವೆಲ್ಲಾ ಚಿತ್ರಗಳು ರಿಲೀಸ್ ಆಗಲಿವೆ ಎನ್ನುವುದನ್ನು ಮುಂದೆ ಓದಿ...

ಮುಂದಿನ 3 ತಿಂಗಳು ಧನಂಜಯ್ ಸಿನಿಮೋತ್ಸವ!

ಮುಂದಿನ 3 ತಿಂಗಳು ಧನಂಜಯ್ ಸಿನಿಮೋತ್ಸವ!

ನಟ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಒಂದೊಂದೇ ಸಿನಿಮಾಗಳನ್ನು ಮಾಡಿ ಮುಸುತ್ತಿದ್ದಾರೆ. ಸದ್ಯ ಧನಂಜಯ್ ಅಭಿನಯದ ಬಹುತೇಕ ಸಿನಿಮಾಗಳು ಮುಗಿದಿದ್ದು, ರಿಲೀಸ್‌ಗೆ ರೆಡಿಯಾಗುತ್ತಿವೆ. ಈಗಾಗಲೇ ಕೆಲವು ಸಿನಿಮಾಗಳ ರಿಲೀಸ್ ಡೇಟ್ ಕೂಡ ಪ್ರಕಟವಾಗಿದೆ. ಮುಂದಿನ ಮೂರು ತಿಂಗಳು ಸತತವಾಗಿ ನಟ ಧನಂಜಯ್ ಬೆಳ್ಳಿತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಯಾವ ಸಿನಿಮಾ ಯಾವಾಗ ರಿಲೀಸ್ ಎನ್ನುವ ಡಿಟೈಲ್ಸ್ ಮುಂದೆ ಓದಿ...

ಆಗಸ್ಟ್‌ನಲ್ಲಿ 'ಮಾನ್ಸೂನ್ ರಾಗ'!

ಆಗಸ್ಟ್‌ನಲ್ಲಿ 'ಮಾನ್ಸೂನ್ ರಾಗ'!

'ಬಡವ ರಾಸ್ಕಲ್', '21 ಹವರ್ಸ್' ಸಿನಿಮಾದ ನಂತರ ರಿಲೀಸ್‌ಗೆ ರೆಡಿಯಾಗಿರುವ ಧನಂಜಯ್ ಮುಂದಿನ ಚಿತ್ರ 'ಮಾನ್ಸೂನ್ ರಾಗ'. ಈ ಸಿನಿಮಾ ಕೂಡ ವಿಭಿನ್ನ ಟೀಸರ್ ಮೂಲಕ ಗಮನ ಸೆಳೆದಿದೆ. ಒಂದು ಕಡೆ ರಫ್ ಅಂಡ್ ಟಫ್ ಆಗಿ ಕಾಣಿಸಿಕೊಂಡ ಧನಂಜಯ್ ಮತ್ತೊಂದು ಕಡೆ ಸಿಕ್ಕಾಪಟ್ಟೆ ಸಾಫ್ಟು. ಇದು ಟೀಸರ್ ಕೊಟ್ಟಿರುವ ಸುಳಿವು. ಇದು ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದೆ ಎನ್ನುವುದನ್ನು ಚಿತ್ರದ ಟೈಟಲ್‌ನಿಂದ ಊಹಿಸಬಹುದು. ಧನಂಜಯ್ ಜೊತೆಗೆ ರಚಿತಾ ರಾಮ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಂದ್ಹಾಗೆ ಆಗಸ್ಟ್ 19ಕ್ಕೆ 'ಮಾನ್ಸೂನ್ ರಾಗ' ಸಿನಿಮಾ ರಿಲೀಸ್ ಆಗುತ್ತಿದೆ.

ಸೆಪ್ಟೆಂಬರ್‌ನಲ್ಲಿ 'ಜಮಾಲಿ ಗುಡ್ಡ'!

ಸೆಪ್ಟೆಂಬರ್‌ನಲ್ಲಿ 'ಜಮಾಲಿ ಗುಡ್ಡ'!

ನಟ ಧನಂಜಯ್ ಅಭಿನಯದ ಸಿನಿಮಾಗಳಲ್ಲಿ, ರಿಲೀಸ್‌ಗೆ ರೆಡಿಯಾಗಿರುವ ಚಿತ್ರಗಳಲ್ಲಿ 'ಜಮಾಲಿ ಗುಡ್ಡ' ಸಿನಿಮಾ ಕೂಡ ಒಂದು. 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ' ಎನ್ನುವುದು ಚಿತ್ರದ ಪೂರ್ಣ ಶೀರ್ಷಿಕೆ. ಈ ಸಿನಿಮಾ ಟೈಟಲ್‌ನಿಂದಲೇ ಗಮನ ಸೆಳೆದಿದೆ. ಧನಂಜಯ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಇದೇ ವರ್ಷ ಸೆಪ್ಟೆಂಬರ್ 9ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.

ಅಕ್ಟೋಬರ್‌ನಲ್ಲಿ 'ಹೆಡ್ ಬುಷ್' ಆಟ!

ಅಕ್ಟೋಬರ್‌ನಲ್ಲಿ 'ಹೆಡ್ ಬುಷ್' ಆಟ!

ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಹೆಡ್ ಬುಷ್' ಸಿನಿಮಾ ಕೂಡ ಒಂದು. ಈ ಸಿನಿಮಾ ಅಂಡರ್‌ವರ್ಲ್ಡ್ ಕಥೆ ಹೇಳಲು ಬರ್ತಿದೆ. ಅಗ್ನಿ ಶ್ರೀಧರ್ ಬರವಣಿಗೆಯ ನೈಜ ಘಟನೆ ಆಧಾರಿತ ಸಿನಿಮಾ ಇದು. ಧನಂಜಯ್ ಮಾಜಿ ಡಾನ್ ಜಯರಾಜ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈ ಚಿತ್ರಕ್ಕಾಗಿ ಧನಂಜಯ್ ತಮ್ಮ ಸಂಪೂರ್ಣ ಲುಕ್ ಕೂಡ ಬದಲಾಯಿಸಿಕೊಂಡಿದ್ದು, ಪೋಸ್ಟರ್ ಮತ್ತು ಟೀಸರ್‌ನಲ್ಲಿ ಅದ್ಭುತ ಎನಿಸುತ್ತಾರೆ. ಅಕ್ಟೋಬರ್ 21ಕ್ಕೆ ಈ ಚಿತ್ರ ತೆರೆಕಾಣಲಿದೆ. ಧನಂಜಯ್ ಜೊತೆಗೆ ನಟಿ ಪಾಯಲ್ ರಜ್‌ಪೂತ್, ನಟ ಯೋಗಿ, ವಸಿಷ್ಠ ಸಿಂಹ, ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Actor Dhananjay Upcoming Release Movie List Is Here, 3 Movie release Date Fixed, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X