ಸುತ್ತೂರು ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್ ನೀಡಿದ ನಟ ಧನಂಜಯ್
ರಾಜ್ಯದ ಹಲವು ಕಡೆ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಸುದ್ದಿಗಳು ವರದಿಯಾಗಿರುವುದು ತಿಳಿದಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಬಗ್ಗೆ ನಟ ಧನಂಜಯ್ ವಿರೋಧ ಇದೆ.
ಸರ್ಕಾರಿ ಶಾಲೆಗಳಿಗೆ ಸೂಕ್ತ ಅನುಕೂಲ ಮಾಡಿಕೊಡಬೇಕು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು, ಒಳ್ಳೆಯ ಶಿಕ್ಷಣ ಸಿಗಲಿದೆ ಎಂಬ ಭರವಸೆ ಮೂಡಿಸಿದರೆ ವಿದ್ಯಾರ್ಥಿಗಳ ಪೋಷಕರು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡ್ತಾರೆ ಎಂದು ಧನಂಜಯ್ ಹಲವು ಬಾರಿ ಹೇಳಿದ್ದಾರೆ.
ಇದೀಗ, ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೊಜೆಕ್ಟರ್ ಅನುಕೂಲವನ್ನು ಮಾಡಿಕೊಡುವ ಮೂಲಕ ಡಾಲಿ ಧನಂಜಯ್ ಸಹಾಯಕ್ಕೆ ನಿಂತಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೊಜೆಕ್ಟರ್ ನೆರವು ನೀಡಲಾಗಿದೆ. ಧನಂಜಯ್ ಅವರಿಂದ ಪ್ರೊಜೆಕ್ಟರ್ ಸಿಕ್ಕಿದೆ ಎಂಬ ಖುಷಿಯನ್ನು ವಿದ್ಯಾರ್ಥಿಗಳು ಹಾಗೂ ಶಾಲೆಯ ಆಡಳಿತ ಮಂಡಳಿ ವ್ಯಕ್ತಪಡಿಸಿದ್ದು, ಪ್ರೀತಿಯಿಂದ ಧನ್ಯವಾದ ತಿಳಿಸಿದೆ.
ಇನ್ನು ಧನಂಜಯ್ ಅಭಿನಯಿಸಿರುವ ಸಿನಿಮಾಗಳು ಬಿಡುಗಡೆ ಸಜ್ಜಾಗಿದೆ. ಪುನೀತ್ ರಾಜ್ ಕುಮಾರ್ ಜೊತೆ ಯುವರತ್ನ ಸಿನಿಮಾದಲ್ಲಿ ನಟಿಸಿದ್ದಾರೆ. ಏಪ್ರಿಲ್ 1 ರಂದು ಈ ಚಿತ್ರ ತೆರೆಗೆ ಬರ್ತಿದೆ. ಅದಾದ ಬಳಿಕ ದುನಿಯಾ ವಿಜಯ್ ಜೊತೆ ಸಲಗ ಸಿನಿಮಾ ಮಾಡಿದ್ದಾರೆ. ಆ ಚಿತ್ರ ಏಪ್ರಿಲ್ 15 ರಂದು ರಿಲೀಸ್ ಆಗುತ್ತಿದೆ.
ಈ ಚಿತ್ರಗಳ ಜೊತೆ ಡಾನ್ ಜಯರಾಜ್ ಬಯೋಪಿಕ್ ಹೆಡ್ ಬುಷ್, ಬಡವ ರಾಸ್ಕಲ್, ರತ್ನನ್ ಪರಪಂಚ ಹಾಗೂ ತೆಲುಗಿನ ಪುಷ್ಪ ಸಿನಿಮಾದಲ್ಲೂ ಧನಂಜಯ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











