ಲಾಕ್ ಡೌನ್ ನಡುವೆ ಹಸೆಮಣೆ ಏರಿದ ಸ್ಯಾಂಡಲ್ ವುಡ್ ಜೋಡಿ

ಕೊರೊನಾ ಲಾಕ್ ಡೌನ್ ನಿಂದ ಜನತೆ ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾವನ್ನು ಮಟ್ಟಹಾಕಲೆ ಬೇಕೆಂದು ಪಣ ತೊಟ್ಟಿರುವ ಜನರು ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಈ ಸಮಯದಲ್ಲಿ ನಡೆಯಬೇಕಿದ್ದ ಸಾಕಷ್ಟು ಮದುವೆಗಳು ಮುಂದಕ್ಕೆ ಹೋಗಿದೆ.

ಆದರೆ ಕೆಲವರು ಲಾಕ್ ಡೌನ್ ನಡುವೆಯೂ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಇತ್ತೀಚಿಗಷ್ಟೆ ಸ್ಯಾಂಡಲ್ ವುಡ್ ನ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಹೊಂಬಣ್ಣ ಸಿನಿಮಾ ಖ್ಯಾತಿಯ ನಟ ಧನುಗೌಡ ಬಹುಕಾಲದ ಗೆಳತಿ ಮತ್ತು ನೆನಪುಗಳು ಚಿತ್ರದ ಖ್ಯಾತಿಯ ರಾಣಿ ಅವರ ಜೊತೆ ಲಾಕ್ ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Actor Dhanu Gowda Tie The Knot With His Love Raani

ಏಪ್ರಿಲ್ 10ರಂದು ಶಿವಮೊಗ್ಗದಲ್ಲಿ ನಡೆದ ಇವರ ಮದುವೆಗೆ ತೀರ ಆತ್ಮೀಯರು ಮಾತ್ರ ಭಾಗಿಯಾಗಿದ್ದರು. ಈ ಮೊದಲು ಇಬ್ಬರ ಮದುವೆ ದಾವಣಗೆರೆಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲು ನಿರ್ಧರಿಸಿದ್ದರು. ಆದರೆ ಲಾಕ್ ಡೌನ್ ಕಾರಣ ಶಿವಮೊಗ್ಗದಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ.

Actor Dhanu Gowda Tie The Knot With His Love Raani

ನಟ ಧನುಗೌಡ ಕನಕಪುರ ಮೂಲಕ ಸಾತನೂರಿನವರು. ಪತ್ನಿ ರಾಣಿ ರಾಣೆಬೆನ್ನೂರಿನ ರಟ್ಟೆಹಳ್ಳಿಯವರು. ಇಬ್ಬರು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೂ ಮನೆಯವರ ಒಪ್ಪಿಗೆ ಸಿಕ್ಕ ಬಳಿಕ ಹಸೆಮಣೆ ಏರಿದ್ದಾರೆ.

More from Filmibeat

English summary
Hombanna fame Actor Dhanu Gowda tie the knot with his love Raani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X