twitter
    For Quick Alerts
    ALLOW NOTIFICATIONS  
    For Daily Alerts

    ಸತೀಶ್ ಸಿನಿಮಾಗೆ ಸಿಕ್ಕಿತು ಧನುಷ್ ಬೆಂಬಲ

    |

    ನಟ ಸತೀಶ್ ನೀನಾಸಂ ಇದೀಗ ತಮಿಳಿನಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ. ಅಲ್ಲಿ ಅವರಿಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದ್ದು, ಧೈರ್ಯ ಮಾಡಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರ ಜೊತೆಗೆ ಈಗ ಅವರ ಇನ್ನೊಂದು ಸಿನಿಮಾಗೆ ತಮಿಳು ನಟನ ಸಾಥ್ ಸಿಕ್ಕಿದೆ.

    ಸತೀಶ್ ನಟನೆಯ ಕನ್ನಡ ಚಿತ್ರ 'ಚಂಬಲ್'ಗೆ ಈಗ ಕಾಲಿವುಡ್ ನಟ ಧನುಷ್ ಸಾಥ್ ನೀಡುತ್ತಿದ್ದಾರೆ. ಧನುಷ್ ಇಂದು ಸಂಜೆ 4 ಗಂಟೆಗೆ ಚಿತ್ರದ ಟೀಸರ್ ಅನ್ನು ಚೆನ್ನೈ ನಲ್ಲಿ ರಿಲೀಸ್ ಮಾಡಲಿದ್ದಾರೆ. ಸತೀಶ್ ಅವರ ಫೇಸ್ ಬುಕ್ ಖಾತೆಯಲ್ಲಿ ಲೈವ್ ಬರುವ ಮೂಲಕ ಟೀಸರ್ ರಿಲೀಸ್ ಆಗುತ್ತಿದೆ.

    ಸತೀಶ್ ನೀನಾಸಂ ಮೊದಲ ಫೋಟೋಶೂಟ್ ಫೋಟೋ ಇದು ಸತೀಶ್ ನೀನಾಸಂ ಮೊದಲ ಫೋಟೋಶೂಟ್ ಫೋಟೋ ಇದು

    ಈ ಹಿಂದೆ ಕನ್ನಡದ 'ವಜ್ರಕಾಯ' ಸಿನಿಮಾಗೆ ಹಾಡು ಹಾಡಿದ ಧನುಷ್ ಈಗ 'ಚಂಬಲ್' ಸಿನಿಮಾಗೆ ಸಹಾಯ ಮಾಡಿದ್ದಾರೆ. ಇದು ಚಿತ್ರತಂಡಕ್ಕೂ ಸಂತಸ ತಂದಿದೆ. ಈ ಮೂಲಕ ತಮಿಳಿನಲ್ಲಿಯೂ ಸಿನಿಮಾ ಸದ್ದು ಮಾಡಲು ಶುರು ಮಾಡುತ್ತಿದೆ.

    actor dhanush will be releasing chambal kannada movie teaser

    ಅಂದು ಅವರ ಸಿನಿಮಾ ನೋಡಲು ಕ್ಯೂನಲ್ಲಿದ್ದರು, ಇಂದು ಅವರ ಪಕ್ಕದಲ್ಲೇ ಕಟೌಟ್.! ಅಂದು ಅವರ ಸಿನಿಮಾ ನೋಡಲು ಕ್ಯೂನಲ್ಲಿದ್ದರು, ಇಂದು ಅವರ ಪಕ್ಕದಲ್ಲೇ ಕಟೌಟ್.!

    'ಚಂಬಲ್' ಸಿನಿಮಾದ ಮೇಲೆ ಚಿತ್ರತಂಡಕ್ಕೂ ಹೆಚ್ಚಿನ ನಿರೀಕ್ಷೆ ಇದೆ. 'ಸವಾರಿ', 'ಪೃಥ್ವಿ' ಖ್ಯಾತಿಯ ಜೀಕಬ್ ವರ್ಗೀಸ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಟೀಸರ್ ನಲ್ಲಿ ನಟ ಪುನೀತ್ ರಾಜ್ ಕುಮಾರ್ ಹಿನ್ನೆಲೆ ಧ್ವನಿ ಇದೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ.

    English summary
    Tollywood actor Dhanush will be releasing 'Chambal' kannada movie teaser.
    Wednesday, December 19, 2018, 9:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X