ತಮಿಳುನಾಡಿನಲ್ಲಿ 'ಕೆಜಿಎಫ್' v/s 'ಮಾರಿ 2' ಏನಂತಾರೆ ಧನುಷ್?
Recommended Video

ಇವತ್ತು ಬುಧವಾರ, ಇನ್ನು ಎರಡು ದಿನ ಕಳೆದರೆ 'ಕೆಜಿಎಫ್' ಎಂಬ ಮಹಾ ಸಿನಿಮಾ ಚಿತ್ರಮಂದಿರಕ್ಕೆ ಕಾಲಿಡಲಿದೆ. ಈಗಾಗಲೇ ಅನೇಕ ಚಿತ್ರಮಂದಿರಗಳ ಮುಂದೆ ಕಟ್ ಔಟ್ ನಿಂತಿದೆ, ಆಚರಣೆ ಶುರುವಾಗಿದೆ.
'ಕೆಜಿಎಫ್' ಸಿನಿಮಾದ ಬಿಡುಗಡೆಯ ದಿನವೇ ಬೇರೆ ಬೇರೆ ಭಾಷೆಯ ಕೆಲವು ಸಿನಿಮಾಗಳು ರಿಲೀಸ್ ಆಗುತ್ತಿದೆ. ಇವುಗಳಲ್ಲಿ ಕಾಲಿವುಡ್ ನ 'ಮಾರಿ 2' ಸಿನಿಮಾ ಪ್ರಮುಖವಾಗಿದೆ. ತಮಿಳಿನಾಡಿನಲ್ಲಿ 'ಕೆಜಿಎಫ್' v/s 'ಮಾರಿ 2' ಎಂಬ ಚಾಲೆಂಜ್ ಶುರುವಾಗಿದೆ.
ಹೀಗಿರುವಾಗ 'ಮಾರಿ 2' ಸಿನಿಮಾದ ನಟ ಧನುಷ್ 'ಕೆಜಿಎಫ್' ಬಗ್ಗೆ ಮಾತನಾಡಿದ್ದಾರೆ. ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಯಶ್ ಬಗ್ಗೆ ಕೇಳಿದ ಪ್ರಶ್ನೆಗೆ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಸಿನಿಮಾಗೆ ಶುಭ ಹಾರೈಸಿದ್ದಾರೆ. ಮುಂದೆ ಓದಿ...

ಸಿನಿಮಾಗೆ ಒಳ್ಳೆದಾಗಲಿ ಎಂದ ಧನುಷ್
ಇತ್ತೀಚಿಗಷ್ಟೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಧನುಷ್ ''ಕನ್ನಡ ನಟ ಯಶ್ ಅವರು ಮೊದಲ ಬಾರಿಗೆ ತಮಿಳಿನಲ್ಲಿ ನಟಿಸಿದ್ದಾರೆ. ಅವರ 'ಕೆಜಿಎಫ್' ಡಿಸೆಂಬರ್ 21ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಆ ಸಿನಿಮಾಗೆ ಒಳ್ಳೆದಾಗಲಿ.'' ಎಂದು ಶುಭಾಶಯ ತಿಳಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗೆ ಮನಸಾರೆ ವಿಶ್ ಮಾಡಿದ್ದಾರೆ.

ಟ್ರೇಲರ್ ಇಷ್ಟ ಆಗಿದೆ
ಈ ವೇಳೆ ಮಾತನಾಡಿರುವ ಧನುಷ್ ನನಗೆ 'ಕೆಜಿಎಫ್' ಸಿನಿಮಾದ ಟ್ರೇಲರ್ ತುಂಬ ಇಷ್ಟ ಆಗಿದೆ. ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಎಂದು ಹೇಳಿದ್ದಾರೆ. ಇಡೀ ಭಾರತವೇ ಮೆಚ್ಚಿಕೊಂಡಿರುವ ಈ ಸಿನಿಮಾವನ್ನು ಧನುಷ್ ಕೂಡ ಇಷ್ಟ ಪಟ್ಟಿದ್ದಾರೆ. 'ಮಾರಿ 2' ಮಟ್ಟಿಗೆಯೇ ಈ ಸಿನಿಮಾವೂ ಕಾಲಿವುಡ್ ನಲ್ಲಿ ಹವಾ ಸೃಷ್ಟಿ ಮಾಡಿದೆ.

ಡೈಲಾಗ್ ಬಗ್ಗೆ ಸುದ್ದಿಯಾಗಿತ್ತು
''ಇಫ್ ಯೂ ಥಿಂಕ್ ಬ್ಯಾಡ್.. ಐ ಯಾಮ್ ಯುವರ್ ಡ್ಯಾಡ್' ಎಂಬ ಡೈಲಾಗ್ ಬಗ್ಗೆ ಬಹಳ ಸುದ್ದಿಯಾಗಿತ್ತು. ಕಾರಣ 'ಕೆಜಿಎಫ್' ಸಿನಿಮಾದ ಈ ಡೈಲಾಗ್ ಅನ್ನು ಧನುಷ್ 'ಮಾರಿ 2' ಸಿನಿಮಾದಲ್ಲಿ ಹೇಳಿದ್ದರು. ಈ ಬಗ್ಗೆ ಮಾತನಾಡಿದ್ದ ಯಶ್ ಇದು ಕಾಕತಾಳೀಯ ಅಷ್ಟೇ ಎಂದು ತಿಳಿಸಿದರು.

ನಟ ವಿಶಾಲ್ ಹಂಚಿಕೆ
ತಮಿಳುನಾಡಿನಲ್ಲಿಯೂ 'ಕೆಜಿಎಫ್' ಸಿನಿಮಾಗೆ ದೊಡ್ಡ ಕ್ರೇಜ್ ಇದೆ. ನಟ ವಿಶಾಲ್ ಅಲ್ಲಿ ಈ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ಕಾಲಿವುಡ್ ಪ್ರೇಕ್ಷಕರು ಮಾತ್ರವಲ್ಲದೆ ನಟ ಆರ್ಯ ಸೇರಿದಂತೆ ಕೆಲವು ಕಾಲಿವುಡ್ ನಟರು ಸಿನಿಮಾ ಬಗ್ಗೆ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಸಿನಿಮಾದ ಕ್ರೇಜ್ ಮುಗಿಲು ಮುಟ್ಟಿದೆ.


Click it and Unblock the Notifications











