ಸಂಕ್ರಾಂತಿ ಹಬ್ಬದಂದು ಕಬ್ಬು ಕದ್ದು ತಿಂದ ಸ್ಯಾಂಡಲ್ ವುಡ್ ನಟ

By Pavithra

ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ಇದೇ ಸರಿಯಾದ ಸಮಯ ಅಂತ ನಟರೊಬ್ಬರು ಕಬ್ಬು ಕಳ್ಳತನ ಮಾಡಿದ್ದಾರೆ. ಅರೆ ಇವರಿಗ್ಯಾಕೆ ಇಂತ ಬುದ್ದಿ ಬಂತು ಅಂತ ಆಶ್ವರ್ಯ ಪಡಬೇಡಿ. ಹಳ್ಳಿಗಳಲ್ಲಿ ಹಬ್ಬಗಳ ಸಂದರ್ಭದಲ್ಲಿ ಅಕ್ಕ ಪಕ್ಕದ ತೊಟದಲ್ಲಿ ಕಬ್ಬು ಕಿತ್ತು ತಿನ್ನೋದು ಸರ್ವೇ ಸಾಮಾನ್ಯ.

ಅಷ್ಟಕ್ಕೂ ಈ ಕಬ್ಬು ಕದ್ದವರು ಯಾರು ಗೊತ್ತಾ ರಾಮ ರಾಮ ರೇ ಚಿತ್ರದಲ್ಲಿ ಅಭಿನಯಿಸಿದ ನಟ ಧರ್ಮಣ್ಣ. ಚಿತ್ರೀಕರಣದ ಬಿಡುವಿನಲ್ಲಿ ನಟ ಧರ್ಮಣ್ಣ ತಮ್ಮ ಊರಿನಲ್ಲಿ ಹಬ್ಬದ ಆಚರಣೆ ಮಾಡುತ್ತಿದ್ದಾರೆ.

Actor Dharmanna celebrate Sankranti festival in his native

"ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಫ್ರೆಂಡ್ಸ್ ಜೊತೆ ದೇವಿರಮ್ಮನ ಬೆಟ್ಟ ಮತ್ತೆ ಹೊಸಪೇಟೆ ಸಂತೆ, ಹಾಗೂ ಅನ್ನದಾತರ ಹೊಲದಲ್ಲಿ ಕದ್ದ ಕಬ್ಬಿನ ಸಿಹಿ ಚೆನ್ನಾಗಿದೆ" ಎಂದು ಧರ್ಮಣ್ಣ ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ಹಾಗೆಯೇ ಅಭಿಮಾನಿಗಳಿಗೆ ಹಬ್ಬದ ಶುಭಾಶಯವನ್ನೂ ತಿಳಿಸಿದ್ದಾರೆ.

Actor Dharmanna celebrate Sankranti festival in his native

ರಾಮ ರಾಮ ರೇ ಸಿನಿಮಾದ ನಂತರ ಧರ್ಮಣ್ಣ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಅಂಜನಿಪುತ್ರ, ಮುಗಳು ನಗೆಯ ಚಿತ್ರದಲ್ಲಿ ಧರ್ಮಣ್ಣ ಅಭಿನಯಿಸಿದ್ದು ಸದ್ಯ ಕಾಣದಂತೆ ಮಾಯವಾದನು, ಸ್ಟ್ರೈಕರ್, ಲಖನೌ ಟು ಬೆಂಗಳೂರು, ಲಂಬೋದರ, ಅಳಿದು ಉಳಿದು, ಪ್ರದೇಶ ಸಮಾಚಾರ ಹಾಗೂ ಐ ಯಾಮ್ ಪ್ರಗ್ನೆಂಟ್ ಚಿತ್ರಗಳಲ್ಲಿ ಧರ್ಮಣ್ಣ ಅವರ ಅಭಿನಯವಿದೆ.

More from Filmibeat

English summary
Kannada actor actor Dharmanna Celebrated Sankranti festival in his native. Dharmanna wrote about this on his Facebook page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X