'ಕ್ರಾಂತಿ' ಕಲೆಕ್ಷನ್ 100 ಕೋಟಿ ಆಗಿಲ್ಲ ಎನ್ನುವವರಿಗೆ ನಟ ಧರ್ಮಣ್ಣ ತಿರುಗೇಟು

ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ 3ನೇ ವಾರದತ್ತ ಮುನ್ನುಗ್ಗುತ್ತಿದೆ. ಸಿನಿಮಾ 5 ದಿನಕ್ಕೆ 100 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿತ್ತು. ಸಕ್ಸಸ್ ಮೀಟ್ ಮಾಡಿ ಸಂಭ್ರಮಿಸಿದೆ. ಆದರೆ ಕೆಲವರು ಮಾತ್ರ 'ಕ್ರಾಂತಿ' ಸಕ್ಸಸ್ ಬಗ್ಗೆ ಚಕಾರ ಎತ್ತಿದ್ದಾರೆ. ಸಿನಿಮಾ ಇಷ್ಟೆಲ್ಲಾ ಕಲೆಕ್ಷನ್ ಮಾಡೋಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ಹಾಸ್ಯ ನಟ ಧರ್ಮಣ್ಣ ಕಡೂರ್ ಪ್ರತಿಕ್ರಿಯಿಸಿದ್ದಾರೆ.

Actor Dharmannas Reaction On Darshan Starrer Kranti Crossing 100 Crores At Box Office

ಗಣರಾಜ್ಯೋತ್ಸವ ಸಂಭ್ರಮದಲ್ಲಿ ತೆರೆಕಂಡ 'ಕ್ರಾಂತಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದರ್ಶನ್ ನಟನೆ ಹಾಗೂ ಸಿನಿಮಾದಲ್ಲಿರುವ ಸಂದೇಶ ಪ್ರೇಕ್ಷಕರ ಮನಗೆದ್ದಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್‌ಗೂ ಕಲೆಕ್ಷನ್‌ಗೂ ಸಂಬಂಧವೇ ಇಲ್ಲ ಎನ್ನುವಂತೆ ಸಿನಿಮಾ ಮುನ್ನುಗ್ಗುತ್ತಿದೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್‌ನಿಂದ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಓಪನಿಂಗ್ ಕೂಡ ಸಿಕ್ಕಿತ್ತು. ಇನ್ನು ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡಿದವರಿಗೆ ನಟ ದರ್ಶನ್ ಸಕ್ಸಸ್ ಮೀಟ್‌ನಲ್ಲಿ ತಿರುಗೇಟು ನೀಡಿದ್ದರು. ಕೆಲವರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಅಷ್ಟು ಗಳಿಸಿಲ್ಲ. ಚಿತ್ರತಂಡ 109 ಕೋಟಿ ಕೇಕ್ ಕಟ್ ಮಾಡಿದ್ದು ಹಾಸ್ಯಾಸ್ಪದ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Actor Dharmannas Reaction On Darshan Starrer Kranti Crossing 100 Crores At Box Office

'ಕ್ರಾಂತಿ' ಸಿನಿಮಾ 100 ಕೋಟಿ ಗಳಿಸಿಲ್ಲ ಎನ್ನುವವರಿಗೆ ಹಾಸ್ಯ ನಟ ಧರ್ಮಣ್ಣ ತಿರುಗೇಟು ನೀಡಿದ್ದಾರೆ. ಧರ್ಮಣ್ಣ 'ಕ್ರಾಂತಿ' ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದಾರೆ. "ಕ್ರಾಂತಿ ಕನ್ನಡಿಗರ ಸಿನಿಮಾ. ಕನ್ನಡ ಶಾಲೆಗಳ ಬಗ್ಗೆ ಇರುವುದರಿಂದ ಅದು ಕನ್ನಡಿಗರ ಆಸ್ತಿ. ನಾಲ್ಕೈದು ದಿನಕ್ಕೆ 109 ಕೋಟಿ ಗಳಿಸಿದೆ. ಈಗ ಇನ್ನಷ್ಟು ಗಳಿಕೆ ಕಂಡಿದೆ. ಒಬ್ಬರು ನಡೆದುಕೊಂಡು ಹೋಗುತ್ತಿದ್ದರೆ ಕೆಲವರು ಒಳ್ಳೆಯದು ಹೇಳ್ತಾರೆ, ಕೆಟ್ಟದು ಹೇಳುವವರು ಇರ್ತಾರೆ. ಅಷ್ಟು ಕಲೆಕ್ಷನ್ ಮಾಡಿಲ್ಲ ಎನ್ನುವುದನ್ನು ನೀವು ಸಾಕ್ಷಿ ಕೊಡಿ. ಆಗಿದೆ ಎನ್ನುವುದಕ್ಕೆ ನಿರ್ಮಾಪಕರು ಹೇಳಿದ್ದಾರೆ ಅಲ್ಲವೇ, ಸಕ್ಸಸ್ ಮೀಟ್ ಮಾಡಿದ್ದಾರೆ ಅಲ್ವೇ, ಆಗಿಲ್ಲ ಎನ್ನುವವರು ಇದ್ದರೆ ಸಾಕ್ಷಿ ಕೊಡಿ, ನೋಡಣ, ತಪ್ಪಿದ್ದರೆ ಸ್ವೀಕಾರ ಮಾಡೋಣ, ಸರಿ ಇದ್ದರೆ ವಾದ ಮಾಡೋಣ ಎಂದು ಧರ್ಮಣ್ಣ ಮಾಧ್ಯಮಗಳಿಗೆ ಹೇಳಿದ್ದಾರೆ.

Actor Dharmannas Reaction On Darshan Starrer Kranti Crossing 100 Crores At Box Office

"ಬುಧವಾರ ಸ್ನೇಹಿತರು ಕಡೂರಿಗೆ ಕರೆದರು. ನಾನು ಒಂದು ವಿಡಿಯೋ ಮಾಡಿ ಹಾಕಿದ್ದೆ. ಮಧ್ಯಾಹ್ನ ಫುಲ್ ಆಗಿತ್ತು. ಬೇರೆ ಬೇರೆ ಊರುಗಳಿಂದ ಸಾಕಷ್ಟು ಜನ ನಮ್ಮೂರಲ್ಲೂ ಹೌಸ್‌ಫುಲ್ ಆಗಿದೆ ಎಂದು ವಿಡಿಯೋ ಮಾಡಿ ಕಳುಹಿಸಿದ್ದರು. ವಿಡಿಯೋ ಸುಳ್ಳು ಹೇಳುತ್ತಾ? ನಾನು ಹೋಗಿ ಮಾಡಿರೋದು ಸುಳ್ಳಾ ಹಾಗಾದ್ರೆ? ನಾವು ಸತ್ಯ ಹೇಳಿದ್ದೇವೆ. ನಿಮ್ಮ ಬಳಿ ಸತ್ಯ ಇದ್ದರೆ ಹೇಳಿ" ಎಂದು ಕೇಳಿದ್ದಾರೆ.

More from Filmibeat

English summary
Actor Dharmanna's Reaction On Darshan Starrer Kranti Crossing 100 Crores At Box Office. Dharmanna Played Special Role in Kranti Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X