'ಮಾರ್ಟಿನ್'ಗಾಗಿ ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಪಡೆದ ಸಂಭಾವನೆ ರಿವೀಲ್

ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಾಕ್ಕಿದ 'ಮಾರ್ಟಿನ್' ಸಿನಿಮಾ ಅಂತೂ ಇಂತೂ ತೆರೆಗೆ ಬಂದಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಂದಾಜು 75 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ.

'ಕೃಷ್ಣನ್ ಲವ್‌ ಸ್ಟೋರಿ', 'ಬಚ್ಚನ್', 'ಲವ್ ಇನ್ ಮಂಡ್ಯ', 'ಕೃಷ್ಣ ರುಕ್ಕು', 'ಸಿಂಗ', 'ಬ್ರಹ್ಮಚಾರಿ' ಸಿನಿಮಾಗಳ ಬಳಿಕ ಉದಯ್ ಕೆ ಮೆಹ್ತಾ ಮಾರ್ಟಿನ್ ಚಿತ್ರ ನಿರ್ಮಿಸಿದ್ದಾರೆ. ಅವರ ಬ್ಯಾನರ್‌ನಲ್ಲೇ ಬಹಳ ಅದ್ಧೂರಿ ಸಿನಿಮಾ ಇದು. ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದರಿಂದ ಮೊದಲಿನಿಂದಲೂ ನಿರೀಕ್ಷೆ ಮೂಡಿತ್ತು. ಕಥೆಯ ಮೇಲೆ ನಂಬಿಕೆ ಇಟ್ಟು ನಿರ್ಮಾಪಕರು ಕೋಟಿ ಕೋಟಿ ಹಣ ಸುರಿದಿದ್ದರು.

Actor Dhruva sarja and director AP Arjun Remuneration For Martin film

35 ರಿಂದ 40 ಕೋಟಿ ರೂ. ಬಜೆಟ್‌ನಲ್ಲಿ 'ಮಾರ್ಟಿನ್' ಸಿನಿಮಾ ಮಾಡುವ ಪ್ರಯತ್ನ ನಡೆದಿತ್ತು. ಬಳಿಕ ನೋಡ ನೋಡುತ್ತಲೇ ಎರಡಷ್ಟು ಎರಡುಪಟ್ಟು ಹೆಚ್ಚಾಗಿತ್ತು. ಆದರೆ ಯಾವುದೇ ವಿಚಾರದಲ್ಲೂ ರಾಜಿಯಾಗದೇ ನಿರ್ಮಾಪಕರು ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾ ನೋಡಿದ ಸಾಕಷ್ಟು ಜನ ಮೇಕಿಂಗ್, ವಿಷ್ಯುವಲ್ಸ್ ಬಗ್ಗೆ ಮಾತನಾಡುತ್ತಿದ್ದಾರೆ.

ಧ್ರುವ ಸರ್ಜಾ ಪರ್ಫಾರ್ಮನ್ಸ್ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 240 ದಿನಗಳ ಕಾಲ ಚಿತ್ರವನ್ನು ಎಪಿ ಅರ್ಜುನ್ ಸೆರೆ ಹಿಡಿದಿದ್ದರು. ಅಂದಾಜು 6 ಕೋಟಿ ಬಜೆಟ್‌ನಲ್ಲಿ 'ಮಾರ್ಟಿನ್ ಆಂಥೆಮ್' ಸಾಂಗ್ ಅನ್ನು 17 ದಿನಗಳ ಕಾಲ ಸೆರೆಹಿಡಿಯಲಾಗಿತ್ತು. 600 ಮಂದಿ ಡ್ಯಾನ್ಸರ್ಸ್ ಈ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟರಮಟ್ಟಿಗೆ ಚಿತ್ರದ ಪ್ರತಿ ಫ್ರೇಮ್ ಬಗ್ಗೆಯೂ ಚಿತ್ರತಂಡ ತಲೆ ಕೆಡಿಸಿಕೊಂಡಿತ್ತು. ನಿರ್ಮಾಪಕರು ನೀರಿನಂತೆ ಹಣ ಸುರಿದಿದ್ದರು. ಧ್ರುವ ಸರ್ಜಾ ಕೂಡ 'ಮಾರ್ಟಿನ್' ಚಿತ್ರಕ್ಕಾಗಿ ಬಹಳ ಶ್ರಮಿಸಿದ್ದಾರೆ.

Actor Dhruva sarja and director AP Arjun Remuneration For Martin film

ಧ್ರುವ ಸರ್ಜಾ ಬೆಂಬಲದ ಬಗ್ಗೆ ಉದಯ್‌ ಕೆ ಮೆಹ್ತಾ ಪದೇ ಪದೆ ಮಾತನಾಡುತ್ತಲೇ ಇದ್ದರು. ನಿರ್ದೇಶಕ ಎಪಿ ಅರ್ಜುನ್ ಜೊತೆ ಹಿಂದಿ ನಿರ್ಮಾಪಕರು ಕಿರಿಕ್ ಮಾಡಿಕೊಂಡಿದ್ದರು. ಈಗ ಅದು ತಣ್ಣಗಾಗಿದೆ. ಇನ್ನು ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಚಿತ್ರಕ್ಕಾಗಿ ಭರ್ಜರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ' ಚಿತ್ರದ ಮೂಲಕ ಧ್ರುವ ಹೀರೊ ಆಗಿ ಎಂಟ್ರಿ ಕೊಟ್ಟಿದ್ದರು.

'ಅದ್ಧೂರಿ' ಚಿತ್ರಕ್ಕೆ ಧ್ರುವ ಸರ್ಜಾ 51 ಸಾವಿರ ರೂ. ಸಂಭಾವನೆ ಪಡೆದಿದ್ದರು. ಇದೀಗ 'ಮಾರ್ಟಿನ್' ಚಿತ್ರಕ್ಕಾಗಿ 10 ಕೋಟಿ ರೂ.ಗೂ ಅಧಿಕ ಮೊತ್ತ ಜೇಬಿಗಿಳಿಸಿದ್ದಾರೆ ಎನ್ನಲಾಗ್ತಿದೆ. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಸಂದರ್ಶನದಲ್ಲಿ ಸದ್ಯ ತಾವು ಚಿತ್ರವೊಂದಕ್ಕೆ 12 ಕೋಟಿ ರೂ. ಸಂಭಾವನೆ ಪಡೆಯುವುದಾಗಿ ಧ್ರುವ ಸರ್ಜಾ ಹೇಳಿದ್ದರು.

ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ನಟ ಧ್ರುವ ಸರ್ಜಾ "ನಾನು 'ಅದ್ಧೂರಿ' ಚಿತ್ರಕ್ಕೆ 51 ಸಾವಿರ ಸಂಭಾವನೆ ಪಡೆದಿದ್ದೆ. 5 ಹಾಗೂ 1 ಅಂಕಿ ಸೇರಿಸಿದರೆ 6 ಅಂತ. ಇದೀಗ 'ಮಾರ್ಟಿನ್' ಚಿತ್ರಕ್ಕಾಗಿ ಕೂಡ ಒಂದು ಅಮೌಂಟ್ ತಗೊಂಡಿದ್ದೀನಿ. ಆ ಅಂಕಿಗಳನ್ನು ಸೇರಿಸಿದರೆ ಒಟ್ಟು 6 ಆಗುತ್ತದೆ ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದರು.

'ಮಾರ್ಟಿನ್' ಚಿತ್ರಕ್ಕಾಗಿ ನಿರ್ದೇಶಕ ಎಪಿ ಅರ್ಜುನ್ ಒಂದೂವರೆ ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ ಚಿತ್ರದಲ್ಲಿ ಕೆಲಸ ಮಾಡಿರುವ ಕಲಾವಿದರು, ತಂತ್ರಜ್ಞರು ಎಲ್ಲರೂ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆದುಕೊಂಡಿರುವುದು ಗೊತ್ತಾಗುತ್ತಿದೆ. ಅಂದಹಾಗೆ ಚಿತ್ರದಲ್ಲಿ ಧ್ರುವ ಸರ್ಜಾ ಮಾರ್ಟಿನ್ ಸಕ್ಸೇನಾ ಹಾಗೂ ಅರ್ಜುನ್ ಎನ್ನುವ ಎರಡು ಪಾತ್ರಗಳಲ್ಲಿ ದರ್ಬಾರ್ ನಡೆಸಿದ್ದಾರೆ. ಚಿತ್ರ ಮೊದಲ 2 ದಿನಕ್ಕೆ 22.5 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ.

More from Filmibeat

English summary
Martin cast salary revealed: Here's how much Dhruva sarja and AP arjun was paid;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X