ಗಣೇಶ ಚತುರ್ಥಿಯಂದು ಗಂಡು ಮಗುವನ್ನು ಮನೆಗೆ ಬರಮಾಡಿಕೊಂಡ ನಟ ಧ್ರುವ ಸರ್ಜಾ ದಂಪತಿ
ದೇಶದೆಲ್ಲೆಡೆ ಇಂದು (ಸೆಪ್ಟೆಂಬರ್ 18) ಗಣೇಶ ಚತುರ್ಥಿ ಸಂಭ್ರಮದಲ್ಲಿದ್ದಾರೆ. ಈ ವೇಳೆ ಸರ್ಜಾ ಕುಟುಂಬ ದುಪ್ಪಟ್ಟು ಖುಷಿಯಲ್ಲಿದೆ. ಹೌದು, ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾಗೆ ಹಬ್ಬದ ದಿನದಂದು ಗಂಡು ಮಗು ಜನಿಸಿದೆ. ಗಣೇಶ ಹಬ್ಬಕ್ಕೆ ಮನೆಗೆ ಮಗರಾಯ ಬಂದಿರುವುದಕ್ಕೆ ಇಡೀ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ತಮ್ಮ ಪತ್ನಿಗೆ ಮಗು ಜನಿಸಿರುವ ಬಗ್ಗೆ ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆದಿತ್ತು. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಈಗ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ.

ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. "ಮತ್ತೊಮ್ಮೆ ಮಗುವಿನ ತಂದೆಯಾಗಿದ್ದೇನೆ. ನಾರ್ಮಲ್ ಡಿಲೆವರಿ ಆಗಿದೆ" ಎಂದು ಧ್ರುವ ಸರ್ಜಾಸ್ಟೇಟಸ್ ಹಾಕಿಕೊಂಡಿದ್ದಾರೆ. ಇದರ ನಂತರ ಗುರು ರಾಘವೇಂದರ ರಾಯರ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಮೊನ್ನೆಯಷ್ಟೇ ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು ಧ್ರುವ ಸರ್ಜಾ. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಸೀಮಂತ ಕಾರ್ಯಕ್ರಮದಲ್ಲಿ ಚಿರು ಸರ್ಜಾ ಫೋಟೋವನ್ನ ಫೋನ್‌ನಲ್ಲಿ ಧ್ರುವ ಪುತ್ರಿ ನೋಡುತ್ತಿರುವುದು ಜನರ ಗಮನ ಸೆಳೆದಿತ್ತು.
ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಳೆದ ವರ್ಷ ಅಕ್ಟೋಬರ್ 2ರಂದು ಧ್ರುವ ಸರ್ಜಾ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಈಗ ಅವರು ಗಂಡು ಮಗುವಿನ ತಂದೆ ಆಗಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನ ಸೀಮಂತ ಕಾರ್ಯ ನಡೆದಿತ್ತು, ಗಣೇಶ ಚರುರ್ಥಿಯಂದು ಮುದ್ದು ಮಗುವಿನ ಆಗಮನವಾಗಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾ ಬಿಡುಗಡೆ ಸಜ್ಜಾಗಿದ್ದಾರೆ. ಇನ್ನೊಂದು ನಿರ್ಮಾಣದ ಹಂತದಲ್ಲಿದೆ. ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಬಿಡುಗಡೆಯಾಗಬೇಕಿದೆ. ಹಾಗೇ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ನಿರ್ಮಾಣ ಹಂತದಲ್ಲಿದೆ.


Click it and Unblock the Notifications











