ಸೆಲ್ಫ್ ರೆಸ್ಪೆಕ್ಟ್ ಪ್ರಶ್ನೆ, ಎಲ್ಲ ಹೇಳಿಕೊಂಡ್ರೆ ಚೀಪ್ ಎನಿಸಿಬಿಡುತ್ತೆ; ಧ್ರುವ ಸರ್ಜಾ

ಕನ್ನಡ ದರ್ಶನ್ ಹಾಗೂ ಧ್ರುವ ಸರ್ಜಾ ಕನ್ನಡ ಚಿತ್ರರಂಗದ ಇಬ್ಬರೂ ಸ್ಟಾರ್ ಕಲಾವಿದರು. ಇಬ್ಬರಿಗೂ ಅವರದ್ದೇ ಆದ ಅಭಿಮಾನಿ ಬಳಗವಿದೆ. ಹಿಂದೆ ಧ್ರುವ ಬೆಂಬಲಕ್ಕೆ ದರ್ಶನ್ ಸಹ ನಿಂತಿದ್ದರು. ಇಡೀ ಸರ್ಜಾ ಕುಟುಂಬದ ಜೊತೆಗೆ ದಾಸನಿಗೆ ಒಳ್ಳೆ ಬಾಂಧವ್ಯ ಇತ್ತು.

ಇದ್ದಕ್ಕಿದಂತೆ ದಿಢೀರನೆ ದರ್ಶನ್ ಹಾಗೂ ಧ್ರುವ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಏನಾಯ್ತು ಎನ್ನುವುದು ಗೊತ್ತಿಲ್ಲ. ಆದರೆ ಧ್ರುವ ಸರ್ಜಾ ಅಂತಹ ಕಾಯ್ದುಕೊಳ್ಳಲು ಆರಂಭಿಸಿದರು. ಚಿತ್ರರಂಗದಿಂದ ನಡೆದ ಕಾವೇರಿ ಹೋರಾಟದ ವೇದಿಕೆಯಲ್ಲಿ ಧ್ರುವ ಹಾವಭಾವದಲ್ಲಿ ಇದು ಬಹಿರಂಗವಾಗಿತ್ತು. ಬಳಿಕ ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದರು.

Actor Dhruva Sarja reacts on misunderstanding with actor Darshan

ಹುಟ್ಟುಹಬ್ಬದ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ದರ್ಶನ್ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಧ್ರುವ ಮಾತನಾಡಿದ್ದರು. ಅವರು ನಮ್ಮ ಸೀರಿಯರ್, ಅವರಿಗೆ ಮರ್ಯಾದೆ ಕೊಡುತ್ತೇವೆ. ಆದರೆ ನನಗೆ ಅವರ ಬಳಿ ಒಂದೆರಡು ಪ್ರಶ್ನೆಗಳನ್ನು ಕೇಳಬೇಕಿದೆ. ಅದಕ್ಕೆ ಸ್ಪಷ್ಟನೆ ಸಿಗದೇ ಮನಸ್ಸಿನಲ್ಲಿ ಒಂಧು ಹೊರಗಡೆ ಒಂದು ತೋರಿಸಲು ನನಗೆ ಇಷ್ಟವಿಲ್ಲ ಎಂದು ಧ್ರುವ ಹೇಳಿದ್ದರು.

ನಮಗೂ ಸೆಲ್ಫ್‌ ರೆಸ್ಪೆಕ್ಟ್ ಇರುತ್ತದೆ. ಈ ಬೆಳವಣಿಗೆಗಳ ಬಳಿಕ ಕೆಲವರು ಫೇಕ್ ಸೋಶಿಯಲ್ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿ ಏನೇನೋ ಮೆಸೇಜ್ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಿ ಎಂದು ಧ್ರುವ ಸರ್ಜಾ ಎಚ್ಚರಿಕೆ ಕೊಟ್ಟಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ಈ ಕುರಿತ ಪ್ರಶ್ನೆಗಳಿಗೆ ಧ್ರುವ ಪ್ರತಿಕ್ರಿಯಿಸಿದ್ದರು. ಎಲ್ಲರಿಗೂ ಒಳ್ಳೆದಾಗಲಿ ಎಂದಿದ್ದರು.

ದರ್ಶನ್ ಹಾಗೂ ಧ್ರುವ ಸರ್ಜಾ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವೇನು ಎನ್ನುವುದು ರಿವೀಲ್ ಆಗಿರಲಿಲ್ಲ. 'ಪ್ರೇಮ ಬರಹ' ಚಿತ್ರದ ವಿತರಣೆ ಹಕ್ಕನ್ನು ತುಗುದೀಪ ಸಂಸ್ಥೆ ಕೊಂಡುಕೊಂಡಿತ್ತು. ಈ ಚಿತ್ರದ ರಿಲೀಸ್ ವಿಚಾರದಲ್ಲೇ ಸರ್ಜಾ ಫ್ಯಾಮಿಲಿ ಜೊತೆಗೆ ದರ್ಶನ್‌ಗೆ ಭಿನ್ನಾಭಿಪ್ರಾಯ ಮೂಡಿರಬಹುದು ಎನ್ನುವುದು ಕೆಲವಾರ ವಾದ. ಗೌರೀಶ್ ಅಕ್ಕಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮತ್ತೊಮ್ಮೆ ಈ ಬಗ್ಗೆ ಧ್ರುವಗೆ ನೇರ ಪ್ರಶ್ನೆ ಎದುರಾಗಿದೆ.

ದರ್ಶನ್ ಹಾಗೂ ನನ್ನ ಭಿನ್ನಾಭಿಪ್ರಾಯದ ಬಗ್ಗೆ ಏನನ್ನು ಹೇಳಲು ಇಷ್ಟಪಡಲ್ಲ. ಹೇಳುವಂತಿದ್ದರೆ ಅವತ್ತೇ ಹೇಳುತ್ತಿದ್ದೆ ಎಂದು ಧ್ರುವ ಪ್ರತಿಕ್ರಿಯಿಸಿದ್ದಾರೆ. ಇದು ಸೆಲ್ಫ್‌ ರೆಸ್ಪೆಕ್ಟ್ ವಿಚಾರ ಅಷ್ಟೆ. ಯಾರ ಅನುಪಸ್ಥಿತಿಯಲ್ಲಿ ನಾನು ಅವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಅಂತಹ ವ್ಯಕ್ತಿತ್ವ ನನ್ನದಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದು ಧ್ರುವ ವಿವರಿಸಿದ್ದಾರೆ.

ಸೆಲ್ಫ್ ರೆಸ್ಪೆಕ್ಟ್ ಕಾರಣಕ್ಕೆ ಇಷ್ಟೆಲ್ಲಾ ಎನ್ನುವುದನ್ನು ನಾನು ಅವತ್ತೇ ಹೇಳಿದ್ದೀನಿ. ಎಲ್ಲರಿಗೂ ಸೆಲ್ಫ್‌ ರೆಸ್ಪೆಕ್ಟ್ ಮುಖ್ಯ ಅಲ್ಲವೇ? ನಾನು ಯಾವುದೇ ವಿಚಾರವನ್ನು ಬಹಿರಂಗಪಡಿಸಲು ಇಷ್ಟಪಡಲ್ಲ. ಅದನ್ನು ತೋರಿಕೆಗೆ ಕೇಳಿಕೊಂಡರೆ ಒಂದು ಅರ್ಥದಲ್ಲಿ ಚೀಪ್ ಆಗಿಬಿಡುತ್ತದೆ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಅಭಿಮಾನಿಗಳ ನಡುವಿನ ತಿಕ್ಕಾಟದ ಬಗ್ಗೆ ಮಾತನಾಡಿರುವ ಧ್ರುವ "ಯಾರು ಆರಂಭಿಸಿದರೋ ಅವರೇ ನಿಲ್ಲಿಸಬೇಕು" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇತ್ತೀಚೆಗೆ ದರ್ಶನ್ ಹಾಗು ಧ್ರುವ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪ, ಕೆಟ್ಟದಾಗಿ ಟ್ರೋಲ್ ಮಾಡುವ ವಿಕೃತಿ ಶುರುವಾಗಿದೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕೆಲವರು ಸುಖಾಸುಮ್ಮನೆ ಬೆಂಕಿ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಮತ್ತೊಂದು ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಧ್ರುವ ಮಾತನಾಡಿದ್ದರು. ಫ್ಯಾಮಿಲಿ, ಹೆಣ್ಣು ಮಕ್ಕಳ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದರು.

More from Filmibeat

English summary
Martin Actor Dhruva sarja opens up on Fan war;
Read more about: darshan dhruva sarja fan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X