For Quick Alerts
  ALLOW NOTIFICATIONS  
  For Daily Alerts

  ರೀಮೇಕ್ ಗೆ ಕೈಹಾಕಿದರೆ ಸ್ವಮೇಕ್ ಕಿಂಗ್ ಧ್ರುವ ಸರ್ಜಾ?

  By ಜೀವನರಸಿಕ
  |

  ಧ್ರುವ ಸರ್ಜಾ ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್. ಸದ್ಯದ ಹಾಟ್ ಫೇವರಿಟ್ ನಟರಲ್ಲೊಬ್ಬರು. ಧ್ರುವ ಅಭಿನಯದ ಮೂರನೇ ಸಿನಿಮಾ ಯಾವುದು ಅನ್ನೋದು ಸದ್ಯಕ್ಕೆ ಸುದ್ದಿಯಾಗಿಲ್ಲ. ಎಲ್ಲರಿಗೂ ತಿಳಿದಂತೆ ಮುಂದಿನ ಸಿನಿಮಾ ಆಗ್ಬೇಕಿದ್ದದ್ದು ಸಿಂಪಲ್ ಸುನಿ ನಿರ್ದೇಶನದ 'ಪಂಟ'.

  'ಪಂಟ' ಸಿನಿಮಾ ನಿರ್ಮಾಣ ಮಾಡೋಕೆ ಕಾಲ್ ಶೀಟ್ ಪಡ್ಕೊಂಡಿದ್ದಿದ್ದು ಕೆ ಪಿ ಶ್ರೀಕಾಂತ್. ಆದರೆ 'ಪಂಟ'ನಿಗೆ ಕೈ ಕೊಡೋ ಜೊತೆಗೆ ಈಗ ನಂದಕಿಶೋರ್ ನಿರ್ದೇಶನದಲ್ಲಿ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಧ್ರುವ ಸರ್ಜಾ. [ನಿರ್ಮಾಪಕರ ಪಾಲಿಗೆ ನಿಲುಕದ ನಕ್ಷತ್ರವಾದ ಧ್ರುವ ಸರ್ಜಾ]

  ತೆಲುಗಿನಲ್ಲಿ 2011ರಲ್ಲಿ ರಿಲೀಸಾಗಿ ಸೂಪರ್ ಡೂಪರ್ ಹಿಟ್ಟಾಗಿದ್ದ 'ಕಂದಿರೀಗ' (ಕಣಜದ ಹುಳು) ಸಿನಿಮಾವನ್ನ ನಂದಕಿಶೋರ್ ನಿರ್ದೇಶಿಸ್ತಿದ್ರೆ ಗಂಗಾಧರ್ ನಿರ್ಮಾಣದಲ್ಲಿ ಧ್ರುವ ಸರ್ಜಾ ನಟಿಸೋಕೆ ರೆಡಿಯಾಗ್ತಿದ್ದಾರೆ. ಧ್ರುವ ಸರ್ಜಾ ಯಾಕೆ ಕಾಣಿಸಿಕೊಳ್ತಿಲ್ಲವಲ್ಲ ಅಂತ ಕಾಯ್ತಿದ್ದೋರಿಗೆ ಮತ್ತಷ್ಟು ಕಟ್ಟುಮಸ್ತಾದ ದೇಹದೊಂದಿಗೆ ಧ್ರುವ ಸದ್ಯದಲ್ಲೇ ಪ್ರತ್ಯಕ್ಷರಾಗಲಿದ್ದಾರೆ.

  ಸದ್ಯ 'ರನ್ನ' ಸಿನಿಮಾ ಮುಗಿಸಿರೋ ನಂದಕಿಶೋರ್, ಕಂದಿರೀಗ ರೀಮೇಕ್ ಶುರುಮಾಡಲಿದ್ದಾರೆ. ಎರಡು ಸ್ವಮೇಕ್ ಸಿನಿಮಾ ಮಾಡಿ ಗೆದ್ದ ಧ್ರುವ ಸರ್ಜಾ ಮೂರನೇಯದ್ದನ್ನ ಗೆದ್ದು ಹ್ಯಾಟ್ರಿಕ್ ಹೀರೋ ಆಗ್ಬೇಕು ಅನ್ನೋ ಹುಚ್ಚಿಗೆ ಬಿದ್ದು ಸಂತೋಷ್ ಶ್ರೀನಿವಾಸ್ ನಿರ್ದೇಶನದ ಚಿತ್ರವನ್ನ ರೀಮೇಕ್ ಮಾಡ್ತಿದ್ದಾರಾ ಗೊತ್ತಿಲ್ಲ.

  ಅದ್ದೂರಿ ಹಾಗೂ ಬಹದ್ದೂರ್‍ ಚಿತ್ರಗಳ ಮೂಲ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟ ನಟ ಧ್ರುವ ಸರ್ಜಾ. ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಮುಂದಿನ ಸಿನಿಮಾ ಗೆದ್ರೂ ಹ್ಯಾಟ್ರಿಕ್ ಹೀರೋ ಆಗಿ ಉಳಿಯೋದು ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಮಾತ್ರ.

  English summary
  After two swamake movies now actor Dhruva Sarja is going to be remade Telugu romantic comedy film Kandireega. The movie is directed by 'Victory' fame Nanda Kishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X