twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಅಭಿಮಾನಿಯಾದ ನಟ ಪ್ರಮೋದ್, ಈಗೋ ಬೇಡ ಎಂದ ಧ್ರುವ ಸರ್ಜಾ!

    |

    ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಾಯಕ ನಟ ಪ್ರಮೋದ್ ನಾಯಕನಾಗಿ ನಟಿಸ್ತಿರುವ ಹೊಸ ಚಿತ್ರ 'ಬಾಂಡ್ ರವಿ'. ಈ ಚಿತ್ರ ಸದ್ಯ ಸೆಟ್ಟೇರಿದೆ. ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ಪ್ರ‌ಮೋದ್ ನಾಯಕನಾಗಿ ಮತ್ತೊಮ್ಮೆ ಅಬ್ಬರಿಸಲಿದ್ದಾರೆ.

    'ಬಾಂಡ್ ರವಿ' ಸಿನಿಮಾಗೆ ನಟ ಧ್ರುವ ಹಾಗೂ ವಿನೋದ್ ಪ್ರಭಾಕರ್ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಧ್ರುವ ಹಾಗೂ ವಿನೋದ್, ಪ್ರಮೋದ್ ಬೆನ್ನು ತಟ್ಟಿ ಇಡೀ ಸಿನಿಮಾ ಟೀಂಗೆ ಶುಭಾಶಯ ತಿಳಿಸಿದ್ದರು. ಇದೇ ವೇಳೆ ನಟ ಧ್ರುವ 'ಈಗೋ ಬಿಟ್ಟು, ನಮ್ಮಲ್ಲಿರುವ ಪ್ರತಿಭೆಗಳೆಗೆ ಬೆನ್ನು ತಟ್ಟ ಬೇಕು, ಬೆಳೆಸಬೇಕು ಎಂದಿದ್ದಾರೆ'. ವಿನೋದ್ ಪ್ರಭಾಕರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ,‌‌ ಧ್ರುವ ಸರ್ಜಾ ಕ್ಯಾಮೆರಾ ಚಾಲನೆ ನೀಡಿದರು.‌

    ದರ್ಶನ್‌ಗೆ ಹೇಳಿದ್ದ ಕಥೆ ಧ್ರುವಗೆ ಮಾಡುತ್ತಿದ್ದಾರಾ ಜೋಗಿ ಪ್ರೇಮ್? ಈ ಚಿತ್ರಕ್ಕಿದೆ ಭೂಗತಲೋಕದ ನಂಟುದರ್ಶನ್‌ಗೆ ಹೇಳಿದ್ದ ಕಥೆ ಧ್ರುವಗೆ ಮಾಡುತ್ತಿದ್ದಾರಾ ಜೋಗಿ ಪ್ರೇಮ್? ಈ ಚಿತ್ರಕ್ಕಿದೆ ಭೂಗತಲೋಕದ ನಂಟು

    ಪ್ರಮೋದ್ ಚಿತ್ರದಲ್ಲಿ ತಮ್ಮ ಪಾತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಮಾತನಾಡಿದ್ದು, "ನಾನು ಅಪ್ಪು ಸರ್ ಅಭಿಮಾನಿಯಾಗಿ ಬಾಂಡ್ ರವಿ ಸಿನಿಮಾದಲ್ಲಿ ನಟಿಸ್ತಿದ್ದೇನೆ. ಅಣ್ಣಾ ಬಾಂಡ್ ಸಿನಿಮಾದಲ್ಲಿ ಅಪ್ಪು ಸರ್ ಮಿಂಚಿದ್ದ ಬಾಂಡ್ ರವಿ ಪಾತ್ರದ ರೀತಿ ಇರುತ್ತದೆ. ಹೀಗಾಗಿ ಅಪ್ಪು ಸರ್ ಮ್ಯಾನರಿಸಂ, ಆಕ್ಟಿಂಗ್ ಖದರ್ ಅನ್ನು ನೋಡಿ‌ ಕಲಿಯುತ್ತಿದ್ದೇನೆ". ಎಂದರು.

    Actor Dhruva Sarja Warning To Not Encourage Ego

    'ಮಾಯಾಕನ್ನಡಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ನಾಯಕಿಯಾಗಿ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಜೊತೆಗೆ ಚಿತ್ರದಲ್ಲಿ ಕಾಮಿಡಿ ಕಿಲಾಡಿ ಕಲಾವಿದರು ಸೇರಿದಂತೆ, ಸಾಕಷ್ಟು ಕಲಾವಿದರು ಚಿತ್ರದಲ್ಲಿ ಇದ್ದಾರೆ. ಕಳೆದ‌ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಯುಗಾದಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು.

    'ಮಾರ್ಟಿನ್' ಅಡ್ಡಾದಲ್ಲಿ ನಡೀತಿರೋದೇನು: ಧ್ರುವ ಸರ್ಜಾ ಲುಕ್ ಬದಲಿಸಿದ್ದು ಯಾಕ?'ಮಾರ್ಟಿನ್' ಅಡ್ಡಾದಲ್ಲಿ ನಡೀತಿರೋದೇನು: ಧ್ರುವ ಸರ್ಜಾ ಲುಕ್ ಬದಲಿಸಿದ್ದು ಯಾಕ?

    ಅಂದಹಾಗೇ 'ಬಾಂಡ್ ರವಿ' ಕಮರ್ಷಿಯಲ್, ಎಮೋಷನಲ್, ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದು. ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ & ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಗಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

    Actor Dhruva Sarja Warning To Not Encourage Ego

    ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ ಸುತ್ತಮುತ್ತ ಐವತ್ತು ದಿನಗಳ ಕಾಲ ಶೂಟಿಂಗ್ ಮಾಡಲು ಚಿತ್ರತಂಡ ಯೋಜನೆ ಮಾಡಿಕೊಂಡಿದೆ.

    English summary
    Actor Dhruva Sarja Warning To Not Encourage Ego, Rather Than Encourage Talents,
    Friday, April 8, 2022, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X