For Quick Alerts
  ALLOW NOTIFICATIONS  
  For Daily Alerts

  ಜೀವದ ಗೆಳೆಯ ಉದಯ್ ಕುಟುಂಬಕ್ಕೆ ಮದುವೆ ಆಮಂತ್ರಣ ನೀಡಿದ ಧ್ರುವ ಸರ್ಜಾ

  |
  ಮಿಸ್ ಯೂ ಮಚ್ಚಾ ಅಂದ್ರು ಧ್ರುವ ಸರ್ಜಾ | FILMIBEAT KANNADA

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದೆ ತಿಂಗಳು 24ಕ್ಕೆ ಧ್ರುವ ಸರ್ಜಾ, ಗೆಳತಿ ಪ್ರೇರಣ ಶಂಕರ್ ಜೊತೆ ಹಸೆಮಣೆ ಏರುತ್ತಿದ್ದಾರೆ. ತನ್ನ ಮದುವೆ ಸಮಾರಂಭಕ್ಕೆ ಧ್ರುವ ಚಿತ್ರರಂಗದ ಗಣ್ಯರು, ಕುಟುಂಬದವರು ಮತ್ತು ಸ್ನೇಹಿತರಿಗೆ ಮದುವೆ ಆಮಂತ್ರಣ ನೀಡುತ್ತಿದ್ದಾರೆ. ಖುದ್ದು ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಆಹ್ವಾನ ನೀಡುತ್ತಿದ್ದಾರೆ.

  ಇತ್ತೀಚಿಗೆ ಧ್ರುವ ಜೀವದ ಗೆಳೆಯ ಉದಯ್ ಮನೆಗೆ ಹೋಗಿ ಉದಯ್ ಕುಟುಂಬದವರಿಗೆ ಮದುವೆ ಆಹ್ವಾನ ನೀಡಿದ್ದಾರೆ. ಸ್ನೇಹಿತರು ಬಿಟ್ಟು ಹೋದರು, ಆ ಜೀವದ ಸ್ನೇಹಿತರನ್ನು ಧ್ರುವ ಮರೆತಿಲ್ಲ. ಉದಯ್ ಮನೆಗೆ ತೆರಳಿರುವ ಧ್ರುವ, ಉದಯ್ ತಾಯಿ ಮತ್ತು ಸಹೋದರಿಗೆ ಮದುವೆ ಆಮಂತ್ರಣ ನೀಡಿದ್ದಾರೆ.

  ಸ್ನೇಹಿತ ಬಿಟ್ಟು ಹೋದರು, ಸ್ನೇಹವನ್ನು ಮರೆಯದ ಧ್ರುವ ಸರ್ಜಾ: ನೆನಪಾಯ್ತು ಆ 'ಕರಾಳ ದಿನ'!ಸ್ನೇಹಿತ ಬಿಟ್ಟು ಹೋದರು, ಸ್ನೇಹವನ್ನು ಮರೆಯದ ಧ್ರುವ ಸರ್ಜಾ: ನೆನಪಾಯ್ತು ಆ 'ಕರಾಳ ದಿನ'!

  ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಧ್ರುವ ಸರ್ಜಾ. ಈ ಫೋಟೋದಲ್ಲಿ ಉದಯ್ ಮತ್ತು ಮಗುವನ್ನು ಎತ್ತಿಕೊಂಡಿರುವ ಉದಯ್ ಸಹೋದರಿ ಇದ್ದಾರೆ. ಈ ಫೋಟೋ ಕೆಳಗೆ "ಮಿಸ್ ಯು ಮಚಾ" ಎಂದು ಬರೆದುಕೊಂಡಿದ್ದಾರೆ.

  ಇತ್ತೀಚಿಗಷ್ಟೆ ಧ್ರುವ ಉದಯ್ ಸಮಾಧಿಗೆ ಭೇಟಿ ನೀಡಿ ಸಮಸ್ಕರಿಸಿ ಬಂದಿದ್ದರು. ನವೆಂಬರ್ 7 ಅನಿಲ್-ಉದಯ್ ದುರಂತ ಅಂತ್ಯ ಕಂಡ ಕರಾಳ ದಿನ. ದ್ರುವ ಮದುವೆಯ ಬ್ಯುಸಿಯ ನಡುವೆಯು ಗೆಳೆಯರ ಸಮಾಧಿಗೆ ಭೇಟಿ ನೀಡಿ ಸಮಸ್ಕರಿಸಿ ಗೆಳೆಯರನ್ನು ನೆನೆದು ಭಾವುಕರಾಗಿದ್ದರು. ಗೆಳೆಯರಿಲ್ಲದಿದ್ದರು ಅವರ ಕುಟುಂಬದವರನ್ನು ಭೇಟಿಯಾಗಿ ಮದುವೆಗೆ ವಿಶೇಷ ಆಹ್ವಾನ ನೀಡಿದ್ದಾರೆ.

  English summary
  Kannada actor Dhruva Sarja wedding Invited to his best friend Uday Famly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X