ನಟ ಧ್ರುವ ಸರ್ಜಾ - ಪ್ರೇರಣಾ ನಿಶ್ಚಿತಾರ್ಥಕ್ಕೆ ತಯಾರಿ

Recommended Video

ನಟ ಧ್ರುವ ಸರ್ಜಾ - ಪ್ರೇರಣಾ ನಿಶ್ಚಿತಾರ್ಥಕ್ಕೆ ತಯಾರಿ

ನಟ ಧ್ರುವ ಸರ್ಜಾ ನಟಿಸಿರುವ ಮೂರು ಸಿನಿಮಾಗಳ ಪೈಕಿ ಮೂರೂ ಚಿತ್ರದಲ್ಲಿಯೂ ಲವ್ ಸ್ಟೋರಿ ಇದೆ. ಆದರೆ, ಅವರ ರಿಯಲ್ ಲವ್ ಸ್ಟೋರಿ ಇತ್ತೀಚಿಗಷ್ಟೆ ಅಭಿಮಾನಿಗಳಿಗೆ ತಿಳಿದಿದೆ. ಪ್ರೀತಿಸಿದ ಹುಡುಗಿಯ ಜೊತೆಗೆ ಈಗ ಅವರು ಹೊಸ ಬಾಳಿಗೆ ಕಾಲಿಡಲು ಸಿದ್ಧವಾಗಿದ್ದಾರೆ.

ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರ ನಿಶ್ಚಿತಾರ್ಥ ಇದೇ ಭಾನುವಾರ ನಡೆಯುತ್ತಿದೆ. ಈಗಾಗಲೇ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಎರಡು ಮನೆಯಲ್ಲಿ ಸಂಭ್ರಮ ಮೂಡಿದೆ.

ಚಿರಂಜೀವಿ ಸರ್ಜಾ ಅವರ ಮದುವೆಯ ಬಳಿಕ ಈಗ ಧ್ರುವ ಸರ್ಜಾ ಕೂಡ ಬ್ಯಾಚುಲರ್ ಬದುಕಿಗೆ ಗುಡ್ ಬಾಯ್ ಹೇಳಲು ರೆಡಿಯಾಗಿದ್ದಾರೆ. ಡಿಸೆಂಬರ್ 9 ರಂದು ಅವರ ಎಂಗೇಜ್ ಮೆಂಟ್ ನಡೆಯಲಿದ್ದು, ಅದರ ಕೆಲ ವಿವರಗಳು ಮುಂದಿದೆ ಓದಿ..

ಆಮಂತ್ರಣ ಪತ್ರಿಕೆ

ಆಮಂತ್ರಣ ಪತ್ರಿಕೆ

ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರ ನಿಶ್ಚಿತಾರ್ಥ ಆಮಂತ್ರಣ ಪತ್ರಿಕೆ ಸಿಂಪಲ್ ಅಂಡ್ ಸೂಪರ್ ಆಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರ ಫೋಟೋ ಜೊತೆಗೆ ವಿವರಗಳನ್ನು ನೀಡಲಾಗಿದೆ. ಇದೇ ಭಾನುವಾರ ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

ದೇವಾಲಯದಲ್ಲಿ ಸಿದ್ಧತೆ

ದೇವಾಲಯದಲ್ಲಿ ಸಿದ್ಧತೆ

ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ದೇವಲಯದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಆ ಸ್ಥಳದಲ್ಲಿ ಸಿದ್ಧತೆಗಳು ಪ್ರಾರಂಭವಾಗಿದ್ದು, ಹಸಿರಿನಿಂದ ಸಭಾಂಗಣ ಕಂಗೊಳಿಸುತ್ತಿದೆ. ಅರಣ್ ಸಾಗರ್ ಕಾರ್ಯಕ್ರಮದ ಸೆಟ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಧ್ರುವ ಲವ್ಸ್ ಪ್ರೇರಣಾ

ಧ್ರುವ ಲವ್ಸ್ ಪ್ರೇರಣಾ

ಪ್ರೇರಣಾ ನಟ ಧ್ರುವ ಸರ್ಜಾ ಅವರ ಎದುರು ಮನೆಯ ಹುಡುಗಿ. ಸುಮಾರು ವರ್ಷಗಳಿಂದ ಇಬ್ಬರ ನಡುವೆ ಪರಿಚಯ ಇತ್ತು. ಕಳೆದ 14 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ನಡುವೆ ಪ್ರೀತಿ ಹುಟ್ಟಿದ್ದ ಸಮಯದಲ್ಲಿ ಧ್ರುವ ಇನ್ನೂ ಚಿತ್ರರಂಗಕ್ಕೆ ಬಂದಿರಲಿಲ್ಲ. 16 ವರ್ಷದ ಹುಡುಗನಾಗಿದ್ದಾಗ ಪ್ರೇರಣಾ ಮೇಲೆ ಧ್ರುವಗೆ ಲವ್ ಆಗಿತ್ತು.

ಮದುವೆ ಯಾವಾಗ ?

ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ಮದುವೆ ಯಾವಾಗ ಎನ್ನುವ ವಿಚಾರ ಇನ್ನು ಬಹಿರಂಗವಾಗಿಲ್ಲ. ಡಿಸೆಂಬರ್ 9 ರಂದು ಅಂದರೆ, ನಿಶ್ಚಿತಾರ್ಥದ ದಿನವೇ ಮದುವೆ ದಿನಾಂಕ ತಿಳಿಯಲಿದೆಯಂತೆ.

More from Filmibeat

English summary
Kannada Actor Dhruva Sarja will get engaged with his girl friend Prerana on December 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X