For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ಡಿಗೆ ಮತ್ತೆ ಬಂದ 'ಕಾರ್ ಕಾರ್ ಹುಡುಗ' ಧ್ಯಾನ್

  By Harshitha
  |

  ''ಕಾರ್..ಕಾರ್...ಕಾರ್...ಎಲ್ನೋಡಿ ಕಾರ್...'' ಅಂತ ಮುದ್ದು ಮುದ್ದಾಗಿ ಹಾಡುತ್ತಾ, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹಾಲು ಗಲ್ಲದ ಪೋರ ಧ್ಯಾನ್. ಮೊದಲ ಚಿತ್ರದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಸ್ವೀಕರಿಸಿದ ಧ್ಯಾನ್, ಚಾಕಲೇಟ್ ಬಾಯ್ ಆಗಿ ಬೆಳೆದದ್ದು 'ಮೊನಾಲಿಸಾ' ಚಿತ್ರದಲ್ಲಿ ನಟಿಸಿದ ಮೇಲೆ.

  ಹಾಗೆ ನೋಡಿದ್ರೆ, 'ನನ್ನ ಪ್ರೀತಿಯ ಹುಡುಗಿ' ಚಿತ್ರದ ನಂತರ ಕನ್ನಡಿಗರು ಮರೆತು ಬಿಟ್ಟಿದ್ದ ಈ ಹುಡುಗನಿಗೆ ಸ್ಟೈಲಿಶ್ ಲುಕ್ ಕೊಟ್ಟು, ಗಾಂಧಿನಗರಕ್ಕೆ ಬುಲಾವ್ ನೀಡಿದ್ದು ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್.

  'ಮೊನಾಲಿಸಾ' ಚಿತ್ರದ ನಂತ್ರ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಲ್ಲಿ ಬಿಜಿಯಾದ ಧ್ಯಾನ್, ಇದೇ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಹುಡುಗ ಹುಡುಗಿ' ಚಿತ್ರ ಮುಗಿದ ಮೇಲೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. [ಟೈಟಲ್ ಗೊಂದಲದಲ್ಲಿ ಕ್ರೇಜಿ ಸ್ಟಾರ್ ಹೊಸ ಸಿನಿಮಾ]

  ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಅತಿಥಿ ಪಾತ್ರವನ್ನ ನಿರ್ವಹಿಸಿರುವ ಧ್ಯಾನ್, ಇದೀಗ ಮತ್ತೊಂದು ಕನ್ನಡ ಚಿತ್ರಕ್ಕೋಸ್ಕರ ಬಣ್ಣ ಹಚ್ಚಿದ್ದಾರೆ. ಆ ಚಿತ್ರವೇ 'ಲವ್ ಯು ಆಲಿಯ'.

  ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ರೆಡಿಯಾಗುತ್ತಿರುವ ಬಿಗ್ ಬಜೆಟ್ ಚಿತ್ರ 'ಲವ್ ಯು ಆಲಿಯ'. ಕ್ರೇಜಿ ಸ್ಟಾರ್ ರವಿಚಂದ್ರನ್, ಬಹುಭಾಷಾ ನಟಿ ಭೂಮಿಕಾ, ಸುಧಾರಾಣಿ, ರವಿಶಂಕರ್ ರಂತಹ ದೊಡ್ಡ ತಾರಾಬಳಗವಿರುವ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಧ್ಯಾನ್ ಮಿಂಚಿದ್ದಾರೆ.

  ನೋಡೋಕೆ ಹೈ ಫೈ ಕಾರ್ಪರೇಟ್ ಹುಡುಗನಂತೆ ಕಾಣುವ ಧ್ಯಾನ್ ಗೆಟಪ್ ಸೂಪರ್ ಸ್ಟೈಲಿಶ್ ಆಗಿದೆ. ಚಿತ್ರದಲ್ಲಿ ಧ್ಯಾನ್ ಹೀರೋ ಅಲ್ಲದಿದ್ದರೂ, ಹೀರೋ ಸಮನಾದ ಪಾತ್ರವಿದೆ ಅಂತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. [ಕ್ರೇಜಿಸ್ಟಾರ್ ರವಿಮಾಮ ಇನ್ಮುಂದೆ ಡಾ.ರವಿಚಂದ್ರನ್!]

  ಒಂದ್ಕಾಲದಲ್ಲಿ ಧ್ಯಾನ್ ಗೆ ಬಿಗ್ ಬ್ರೇಕ್ ನೀಡಿದ್ದ ಇಂದ್ರಜಿತ್ ಇದೀಗ ಅದೇ ಧ್ಯಾನ್ ಕೈಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿಸುತ್ತಿದ್ದಾರೆ. ಇದರಿಂದ ಧ್ಯಾನ್ ಲಕ್ ಚೇಂಜ್ ಆಗುತ್ತಾ ನೋಡೋಣ. (ಫಿಲ್ಮಿಬೀಟ್ ಕನ್ನಡ)

  English summary
  Actor Dhyan of 'Monalisa' fame is roped in to play a special role in the movie 'Love You Alia'. Crazy Star Ravichandran and Bhumika Chawla are playing lead roles in the flick, which is directed by Indrajith Lankesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X