For Quick Alerts
  ALLOW NOTIFICATIONS  
  For Daily Alerts

  ಅಡ್ವೆಂಚರ್ ಹವ್ಯಾಸದಿಂದಲೇ ದಿಗಂತ್‌ಗೆ ಕುತ್ತು!

  |

  ನಟ ದಿಗಂತ್ ಬಗ್ಗೆ ಆಘಾತಗಾರಿ ಸುದ್ದ ಬಂದಿದೆ. ದಿಗಂತ್ ಗೋವಾದಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ. ಕುಟುಂಬದ ಜೊತೆಗೆ ಪ್ರವಾಸಕ್ಕಾಗಿ ಗೋವಾಗೆ ತೆರಳಿದ್ದ ದಿಗಂತ್ ಅಪಾಯಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಹೆಚ್ಚು ಗಂಭೀರ ಆದ ಕಾರಣ, ಏರ್‌ ಲಿಫ್ಟ್ ಮಾಡಲಾಗುತ್ತಿದೆ.

  ನಟ ದಿಗಂತ್ ತಮ್ಮ ಅಭಿನಯದ ಮೂಲಕ ದೂದ್ ಪೇಡ ಅಂತಲೇ ಹೆಸರುವಾಸಿ. ದಿಗಂತ್ ವಿಭಿನ್ನ ಮ್ಯಾನರಿಸಮ್, ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಲವ್ವರ್ ಬಾಯ್ ಆಗಿ, ಕಾಮಿಡಿ ಕಟ್ ಇರುವ ಪಾತ್ರಗಳನ್ನೇ ಹೆಚ್ಚಾಗಿ ನಿರ್ವಹಿಸಿದ್ದಾರೆ.

  Breaking: ಬೆಂಗಳೂರಿಗೆ ದಿಗಂತ್: ಆತಂಕದ ಅಗತ್ಯವಿಲ್ಲBreaking: ಬೆಂಗಳೂರಿಗೆ ದಿಗಂತ್: ಆತಂಕದ ಅಗತ್ಯವಿಲ್ಲ

  ಸಿನಿಮಾದ ಜೊತೆಗೆ ದಿಗಂತ್‌ಗೆ ಅಡ್ವೆಂಚರ್ ಅಂದರೆ ಬಹಳ ಇಷ್ಟ. ಸದಾ ತಮ್ಮ ಪತ್ನಿ ಐಂದ್ರಿತಾ ಮತ್ತು ಸ್ನೇಹಿತರ ಜೊತೆ ಸಾಕಷ್ಟು ಅಡ್ವೆಂಚರ್ ಸಾಹಸಗಳನ್ನು ಮಾಡಿದ್ದಾರೆ. ಅವರ ಆ ಅಡ್ವೆಂಚರ್ ಹವ್ಯಾಸವೇ ಈಗ ಮುಳುವಾಗಿದೆ. ದಿಗಂತ್ ಅವರ ಡೇಂಜರಸ್ ಸ್ಟಂಟ್ಸ್ ಇಲ್ಲಿದೆ.

  ಸೇತುವೆಯಿಂದ ನದಿಗೆ ಹಾರಿದ ನಟ!

  ನಟ ದಿಗಂತ್‌ಗೆ ನೀರು ಎಂದರೆ ಬಲು ಇಷ್ಟ, ಹಾಗಾಗಿ ಎಲ್ಲೇ ಹೋದರೂ ದಿಗಂತ್ ನೀರಿಗೆ ಜಿಗಿಯುತ್ತಾರೆ. ಈ ವಿಡಿಯೋದಲ್ಲೂ ಕೂಡ ದಿಗಂತ್ ತಮ್ಮ ಸ್ನೇಹಿತನ ಜೊತೆಗೆ ನದಿಯ ಮೇಲಿನ ಸೇತುವೆಯಿಂದ ನೀರಿಗೆ ಹಾರಿ ಖುಷಿ ಪಟ್ಟಿದ್ದಾರೆ.

  ಬೈಕ್ ಹತ್ತಿ ಅಡ್ವೆಂಚರ್ ರೈಡ್!

  ನಟ ದಿಗಂತ್‌ಗೆ ಬೈಟ್‌ ಹತ್ತಿ ಪ್ರಕೃತಿ ಮಧ್ಯೆ ರೈಡ್ ಹೋಗುವುದು ಎಂದರೆ ಇಷ್ಟ. ಹಾಗಾಗಿ ಆಗಾಗ ಸ್ನೇಹಿತರ ಜೊತೆಗೆ ಬೈಕ್ ಹತ್ತಿ ಕಾಡು, ಮೇಡು ಸುತ್ತಲು ಹೊರಡುತ್ತಾರೆ. ಬೈಕ್ ರೈಡ್ ವಿಡಿಯೋ ಹಂಚಿಕೊಂಡ ದಿಗಂತ್ "ನಿಮ್ಮ ಬಳಿ ಎಷ್ಟು ಕಡಿಮೆ ಹಣ ಇದೆ ಎನ್ನುವು ಲೆಕ್ಕಿಸಬೇಡಿ. ಪ್ರಕೃತಿಯನ್ನು ಪ್ರೀತಿಸುವವರು ಸದಾ ಶ್ರೀಮಂತರು." ಎಂದು ಬರೆದುಕೊಂಡಿದ್ದರು.

  ಬಂಡೆಯ ಮೇಲೆ ಸಿಟ್-ಸ್ಟಾರ್ಟ್!

  ನಟ ದಿಗಂತ್ ಹಾಗಾಗ ಬೆಟ್ಟ, ಗುಡ್ಡಗಳನ್ನು ಹತ್ತುತ್ತಾರೆ. ಟ್ರೆಕ್ಕಿಂಗ್ ಮಾಡುತ್ತಾರೆ. ಅದರಲ್ಲೆ ಹಲವು ಸಾಹಸಗಳನ್ನು ಮಾಡುತ್ತಾರೆ. ಈ ಹಿಂದೆ ಬೆಟ್ಟದ ಮೇಲೆ ಸಿಟ್- ಸ್ಟಾರ್ಟ್ ಕ್ಲೈಂಬಿಂಗ್ ಮಾಡಿದ್ದರು. ಈ ವಿಡಿಯೋ ಹಂಚಿಕೊಂಡ ದಿಗಂತ್ "ನಾನು ಹತ್ತುತ್ತಿರುವ ಈ ಭಂಗಿಯನ್ನು ಸಿಟ್-ಸ್ಟಾರ್ಟ್ ಅಂತ ಕರೆಯುತ್ತಾರೆ. ಸಹಜವಾಗಿ ನಿಂತು ಏರುವುದಕ್ಕಿಂದ ಇದು ಕಷ್ಟಕರ." ಎಂದು ಬರೆದುಕೊಂಡಿದ್ದಾರೆ.

  ಸಾಗರದಲ್ಲೂ ದಿಗಂತ್ ಸಾಹಸ!

  ಮೊದಲೇ ಹೇಳಿದ ಹಾಗೆ ದಿಗಂತ್‌ಗೆ ನೀರು, ಬೆಟ್ಟ, ಗುಡ್ಡ, ಪರಿಸರ ಎಂದರೆ ಬಲು ಇಷ್ಟ. ಸಮುದ್ರದ ತಟದಲ್ಲೂ ಕೂಡ ದಿಗಂತ್ ಸಾಹಸ ಮಾಡಿದ್ದಾರೆ. ನೀರಿನಲ್ಲಿ ಸಮ್ಮರ್ ಸಾಲ್ಟ್ ಹೊಡೆದಿದ್ದಾರೆ. ಅಂಡರ್‌ ವಾಟರ್‌ನಲ್ಲಿ ಈಜಿ ಖುಷಿ ಪಟ್ಟಿದ್ದರು.

  ತೆಂಗಿನ ಮರಕ್ಕೆ ಹತ್ತಿ ಪಲ್ಟಿ!

  ದಿಗಂತ್ ನೀರು, ಬೆಟ್ಟಗಳಲ್ಲಿ ಮಾತ್ರ ಅಲ್ಲ, ತೆಂಗಿನ ಮರಕ್ಕೆ ಹತ್ತಿ ಪಲ್ಟಿ ಹೊಡೆದಿದ್ದಾರೆ. ದಿಗಂತ್ ಈ ವಿಡಿಯೋ ನೋಡಿದರೆ ಮೈ ಜುಮ್ಮೆನ್ನುತ್ತೆ.

  ಸರ್ಫ್ ಬೋರ್ಡ್‌ ಮೇಲೆ ದಿಗಂತ್ ಪುಶಪ್ಸ್!

  ಇನ್ನು ನಟ ದಿಗಂತ್ ಫಿಟ್‌ನೆಸ್ ಕಾಪಾಡಿಕೊಳ್ಳುವುದರಲ್ಲೂ ಎತ್ತಿದ ಕೈ. ಹಾಗಾಗಿ ಅಡ್ವೆಂಚರ್ ಟ್ರಿಪ್‌ಗೆ ಹೋದರು ಕೂಡ, ದಿಗಂತ್ ತಮ್ಮ ಫಿಟ್‌ನೆಸ್ ಬಗ್ಗೆ ಕಾಳಜಿವಹಿಸುತ್ತಾರೆ. ಹಾಗಾಗಿ ದಿಗಂತ್ ಸರ್ಫ್ ಬೋರ್ಡ್‌ ಮೇಲೆಯೂ ದಿಗಂತ್ ಪುಶಪ್ಸ್ ಮಾಡಿದ್ದರು.

  English summary
  Actor Diganth Adventure Habit Is Reason For Goa Accident, Know More,
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X