»   » ಭಟ್ಟರ 'ಪರಪಂಚ'ದಲ್ಲಿ ನಟ ದಿಗಂತ್ ಬೆತ್ತಲೆ ಓಟ

ಭಟ್ಟರ 'ಪರಪಂಚ'ದಲ್ಲಿ ನಟ ದಿಗಂತ್ ಬೆತ್ತಲೆ ಓಟ

By: ಉದಯರವಿ
Subscribe to Filmibeat Kannada

ನಟಿಯರು ಬೆತ್ತಲೆ, ಅರೆಬೆತ್ತಲೆ ಆಗಿರುವುದನ್ನು ನೋಡಿರುತ್ತೀರಾ. ಆದರೆ ಕನ್ನಡದ ನಟನೊಬ್ಬ ಸಂಪೂರ್ಣ ಬೆತ್ತಲಾಗುವ ಮೂಲಕ ಕನ್ನಡ ಚಿತ್ರೋದ್ಯಮದ ಹುಬ್ಬೇರಿಸಿದ್ದಾರೆ. ಆ ರೀತಿ ಸಂಪೂರ್ಣ ಬೆತ್ತಲಾದ ನಟ ಬೇರಾರು ಅಲ್ಲ ಹೆಂಗೆಳೆಯರ ಪಾಲಿನ ಧೂದ್ ಪೇಡ, ಬರ್ಫಿ ಬಾಯ್ ದಿಗಂತ್.

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ 'ಪರಪಂಚ' ಚಿತ್ರಕ್ಕಾಗಿ ಅವರು ಈ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬೆತ್ತಲೆ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಟ್ಟರ ಚಿತ್ರ ಎಂದರೆ ಕೇಳಬೇಕೆ. [ಭಟ್ಟರ ಹೊಸ 'ಪರಪಂಚ'ದಲ್ಲಿ ದೂದ್ ಪೇಡ ದಿಗಂತ್]

Actor Diganth au natural look in Parapancha goes viral

ದಿಗಂತ್ ಹೇಳಿಕೇಳಿ ಚಾಕೋಲೇಟ್ ಬಾಯ್. ಇನ್ನು ಬೆತ್ತಲಾದರೆ ಹೇಗಿರುತ್ತದೆ. ಚಿತ್ರದ ಪ್ರಚಾರಕ್ಕೆ ಇದಕ್ಕಿಂತಲೂ ಫೋಟೋ ಬೇಕೆ. ಕ್ರಿಶ್ ಜೋಶಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಫೋಟೋ ಈಗ ಚರ್ಚೆಯ ಕೇಂದ್ರಬಿಂದು.

ಈ ಚಿತ್ರದಲ್ಲಿ ಭಟ್ಟರು ಒಂದು ಸಣ್ಣ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಅಡಿಬರಹ 'ವೆಜ್ & ನಾನ್ ವೆಜ್'. ವೀರ್ ಸಮರ್ಥ್ ಅವರ ಸಂಗೀತ ಚಿತ್ರಕ್ಕಿದ್ದು ಐದು ಹಾಡುಗಳಲ್ಲಿ ನಾಲ್ಕು ಭಟ್ಟರು ಬರೆದಿದ್ದರೆ ಒಂದನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ.

ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ ಹಾಗೂ ಶಶಿಧರ್ ಅಡಪರ ಕಲಾ ನಿರ್ದೇಶನ 'ಪರಪಂಚ 'ಕ್ಕಿದೆ. ಚಿತ್ರದ ನಾಯಕಿ ಯಾರು ಗೊತ್ತೆ? ತುಪ್ಪದ ಬೆಡಗಿ ರಾಗಿಣಿ. ಚಿತ್ರದ ತಾರಾಗಣದಲ್ಲಿ ಯೋಗರಾಜ್ ಭಟ್, ದತ್ತಣ್ಣ, ಕೆ.ಎಸ್.ಎಲ್.ಸ್ವಾಮಿ, ಅನಂತನಾಗ್, ವಿ.ಮನೋಹರ್ ಮುಂತಾದವರಿದ್ದಾರೆ. ಒಟ್ಟಾರೆಯಾಗಿ ದಿಗಂತ್ ಹುಟ್ಟುಡುಗೆಯಲ್ಲಿ ಯಾಕೆ ಓಡ್ತಾರೆ ಎಂಬುದು ಮಾತ್ರ ಸಸ್ಪೆನ್ಸ್.

.@diganthmanchale full monty in Yograj Bhat produced Krish Joshi directed #Parapancha. Pic released by film publicist pic.twitter.com/H4t41I6ImF
— ಎಸ್ Shyam Prasad (@ShyamSPrasad) April 16, 2014

English summary
Actor Diganth au naturel look in Kannanda movie Parapancha goes viral on Twitter and Facebook. The actor appears unclad in the movie produced by Yograj Bhat, written and directed by Krish Joshi.
Please Wait while comments are loading...