For Quick Alerts
  ALLOW NOTIFICATIONS  
  For Daily Alerts

  ನಟ ದಿಗಂತ್‌ಗೆ ಸಿಸಿಬಿಯಿಂದ ಮತ್ತೆ ನೋಟಿಸ್, ಹೆಚ್ಚಿದ ಆತಂಕ?

  |

  ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಎದುರಿಸಿರುವ ನಟ ದಿಗಂತ್‌ಗೆ ಮತ್ತೊಮ್ಮೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಬುಲಾವ್ ನೀಡಿದ್ದಾರೆ ಎಂದು ಹೇಳಲಾಗಿದೆ.

  ಎರಡನೇ ಸಲ ನೀಡಿರುವ ನೋಟಿಸ್‌ನಲ್ಲಿ ಕೇವಲ ದಿಗಂತ್ ಹೆಸರು ಮಾತ್ರ ಇರುವುದು ಕುತೂಹಲ ಕೆರಳಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ದಿಗಂತ್‌ಗೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳು ಲಭ್ಯವಾಗಿದ್ದು, ಸ್ಪಷ್ಟನೆಗಾಗಿ ವಿಚಾರಣೆಗೆ ಕರೆಯಲಾಗಿದೆ ಎಂಬ ಮಾಹಿತಿ ಇದೆ. ಆದರೆ, ವಿಚಾರಣೆ ಮುಗಿಯುವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ.

  ಡ್ರಗ್ಸ್ ಪ್ರಕರಣ: ದಿಗಂತ್-ಐಂದ್ರಿತಾ ರೇಗೆ ಮೊದಲ ದಿನದ ವಿಚಾರಣೆಯಲ್ಲಿ ರಿಲೀಫ್ಡ್ರಗ್ಸ್ ಪ್ರಕರಣ: ದಿಗಂತ್-ಐಂದ್ರಿತಾ ರೇಗೆ ಮೊದಲ ದಿನದ ವಿಚಾರಣೆಯಲ್ಲಿ ರಿಲೀಫ್

  ಸೆಪ್ಟೆಂಬರ್ 16 ರಂದು ನಟ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿ ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಒಳಪಟ್ಟಿದ್ದರು. ಬೆಳಗ್ಗೆ 11 ಗಂಟೆಗೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದ್ದ ದಿಗಂತ್ ದಂಪತಿ ಸಂಜೆ ವೇಳೆಗೆ ವಿಚಾರಣೆ ಮುಗಿಸಿ ಹಿಂತಿರುಗಿದರು.

  ಈ ವೇಳೆ ಮಾತನಾಡಿದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ''ದಿಗಂತ್-ಐಂದ್ರಿತಾ ಅವರ ವಿಚಾರಣೆ ಆಗಿದೆ, ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಮತ್ತೊಮ್ಮೆ ವಿಚಾರಣೆಗೆ ಕರೆಯುತ್ತೇವೆ'' ಎಂದಿದ್ದರು. ಹೇಳಿದಂತೆ ಎರಡನೇ ಸಲ ದಿಗಂತ್‌ಗೆ ವಿಚಾರಣೆ ಮಾಡಲು ಮುಂದಾಗಿದ್ದಾರೆ.

  DIRECTORS DIARY | ಕೋಣನಕುಂಟೆ ರಮ್ಯಾ ಬಾರ್ ನಲ್ಲಿ ಡೈಲಿ ಮಲಗುತ್ತಿದ್ದೆ | R. Chandru | Filmibeat Kannada

  ದಿಗಂತ್ ಸಹ ''ಸಿಸಿಬಿ ತನಿಖೆಗೆ ಸಹಕರಿಸುತ್ತೇವೆ. ಮತ್ತೆ ವಿಚಾರಣೆಗೆ ಕರೆದರೆ ಅಗತ್ಯವಾಗಿ ಬರುತ್ತೇವೆ'' ಎಂದಿದ್ದರು. ಸೆಪ್ಟೆಂಬರ್ 16 ರಂದು ವಿಚಾರಣೆ ಮುಗಿಸಿದ್ದ ದಿಗಂತ್ ಸೆಪ್ಟೆಂಬರ್ 17 ರಿಂದಲೇ ಮಾರಿಗೋಲ್ಡ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು.

  English summary
  Actor Diganth has been called again today by CCB for further enquiry in connection with a drug case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X