ಅಪಘಾತದ ಬಳಿಕ ನಟ ದಿಗಂತ್ ಕಮ್‌ಬ್ಯಾಕ್: ಹೊಸ ಸಿನಿಮಾ ಶುರು!
ನಟ ದಿಗಂತ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರೆ ಈ ನಡುವೆ ದಿಗಂತ್ ಗೋವಾದಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ದಿಗಂತ್ ಮಸ್ತಿ ಮಾಡಲು ಹೋಗಿ, ತಮ್ಮ ಕುತ್ತಿಗೆ ಪೆಟ್ಟು ಮಾಡಿಕೊಂಡಿದ್ದರು.
ಗೋವಾದಲ್ಲಿ ಅಪಘಾತಕ್ಕೆ ಒಳಗಾದ ನಟ ದಿಗಂತ್ ಅವ್ರನ್ನು ಏರ್ ಲಿಫ್ಟ್ ಮಾಡುವ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ಬಳಿಕ ಬೆಂಗಳೂರು ಆಸ್ಪತ್ರೆಯಲ್ಲಿ ದಿಗಂತ್ ಚಿಕಿತ್ಸೆ ಪಡೆದುಕೊಂಡರು. ಆದರೆ ದಿಗಂತ್ ಗುಣಮುಖರಾಗಲು ಹೆಚ್ಚು ಸಮಯ ಬೇಕಾಗುತ್ತದೆ ಎನ್ನಲಾಗಿತ್ತು.
ಬಹುಬೇಗನೇ ದಿಗಂತ್ ಚೇತರಿಸಿಕೊಂಡಿದ್ದಾರೆ. ಈಗ ತಮ್ಮ ಮುಂದಿನ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನಿಮಾದ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಲ್ಲದೇ ಶೂಟಿಂಗ್‌ನಲ್ಲಿ ಭಾಗಿ ಆಗಲು ಮುಂದಾಗಿದ್ದಾರೆ. ಹಾಗಿದ್ದರೆ ದಿಗಂತ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಮುಂದೆ ಓದಿ.

ದಿಗಂತ್ ಎರಡು ಸಿನಿಮಾಗಳು ಅನೌನ್ಸ್!
ನಟ ದಿಗಂತ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಇದರ ಜೊತೆಗೆ ದಿಗಂತ್ ಹೊಸ ಸಿನಿಮಾಗಳು ಕೂಡ ಪ್ರಕಟ ಆಗಿವೆ. ದಿಗಂತ್‌ಗೆ ಹೊಸ ಸಿನಿಮಾದ ಆಫರ್ ಅರಸಿ ಬಂದಿದೆ. ರಕ್ಷಿತ್ ಶೆಟ್ಟಿಯ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ದಿಗಂತ್. ವಿಶೇಷವೆಂದರೆ ದಿಗಂತ್ ಜೊತೆಗೆ ರಿಷಬ್ ಶೆಟ್ಟಿ ಸಹ ಅದೇ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ 'ಎಡಗೈಯೇ ಅಪಘಾತಕ್ಕೆ ಕಾರಣ' ಎನ್ನುವ ಸಿನಿಮಾ ಕೂಡ ಒಪ್ಪಿಕೊಂಡಿದ್ದಾರೆ.

ಶೂಟಿಂಗ್‌ನಲ್ಲಿ ದಿಗಂತ್!
ಹೊಸ ತಂಡದ ಜೊತೆಗೆ ನಟ ದಿಗಂತ್ 'ಎಡಗೈಯೇ ಅಪಘಾತಕ್ಕೆ ಕಾರಣ' ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಫೈನಲ್ ಆಗಿದೆ. ಇನ್ನೇನು ಸಿನಿಮಾದ ಶೂಟಿಂಗ್ ಕೂಡ ಶುರುವಾಗಲಿದೆ. ನಟ ದಿಗಂತ್ ಚಿತ್ರತಂಡವನ್ನು ಭೇಟಿ ಮಾಡಿದ್ದಾರೆ. ಚಿತ್ರೀಕರಣಕ್ಕಾಗಿ ದಿನಾಂಕವನ್ನು ಕೂಡ ನಿಗಧಿ ಮಾಡಲಾಗಿದೆ. ಆಗಸ್ಟ್‌ನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದ್ದು, ನಟ ದಿಗಂತ್ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.

ಚಿಕಿತ್ಸೆ ಪಡೆದುಕೊಂಡ ದಿಗಂತ್!
ಕಳೆದ ತಿಂಗಳು ನಟ ದಿಗಂತ್ ಗೋವಾದಲ್ಲಿ ಅಪಘಾತಕ್ಕೀಡಾಗಿದ್ದರು. ನಂತರ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಗುಣಮುಖರಾದ ಬಳಿಕ ದಿಗಂತ್ ವಿಡಿಯೋ ಮಾಡುವ ಮೂಲಕ, ತಾವು ಗುಣಮುಖರಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಜೊತೆಗೆ ದಿಗಂತ್ ಗುಣಮುಖರಾಗಲೆಂದು ಪ್ರಾರ್ಥಿಸಿದ ಪ್ರತಿ ಅಭಿಮಾನಿಗಳಿಗೂ ಧನ್ಯವಾದ ಹೇಳಿದ್ದರು.

ದಿಗಂತ್‌ಗೆ ಅಡ್ವೆಂಚರ್ ಅಂದ್ರೆ ಇಷ್ಟ!
ನಟ ದಿಗಂತ್ ತಮ್ಮ ಅಭಿನಯದ ಮೂಲಕ ದೂದ್ ಪೇಡ ಅಂತಲೇ ಹೆಸರುವಾಸಿ. ದಿಗಂತ್ ವಿಭಿನ್ನ ಮ್ಯಾನರಿಸಮ್, ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಲವ್ವರ್ ಬಾಯ್ ಆಗಿ, ಕಾಮಿಡಿ ಕಿಕ್ ಇರುವ ಪಾತ್ರಗಳನ್ನೇ ಹೆಚ್ಚಾಗಿ ನಿರ್ವಹಿಸಿದ್ದಾರೆ. ಸಿನಿಮಾದ ಜೊತೆಗೆ ದಿಗಂತ್‌ಗೆ ಅಡ್ವೆಂಚರ್ ಅಂದರೆ ಬಹಳ ಇಷ್ಟ. ಸದಾ ತಮ್ಮ ಪತ್ನಿ ಐಂದ್ರಿತಾ ಮತ್ತು ಸ್ನೇಹಿತರ ಜೊತೆ ಸಾಕಷ್ಟು ಅಡ್ವೆಂಚರ್ ಸಾಹಸಗಳನ್ನು ಮಾಡಿದ್ದಾರೆ. ಅವರ ಆ ಅಡ್ವೆಂಚರ್ ಹವ್ಯಾಸವೇ ಈಗ ಮುಳುವಾಗಿದೆ.


Click it and Unblock the Notifications











