»   » ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಗೆ ಬ್ಲ್ಯಾಕ್ ಮೇಲ್ ಕರೆ.!

ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಗೆ ಬ್ಲ್ಯಾಕ್ ಮೇಲ್ ಕರೆ.!

Posted By:
Subscribe to Filmibeat Kannada

ಮಲಯಾಳಂ ನ ಖ್ಯಾತ ನಟ ದಿಲೀಪ್ ಅವರಿಗೆ 1.5 ಕೋಟಿ ರೂ. ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಕರೆ ಮಾಡುತ್ತಿರುವ ಸಂಬಂಧ ನಟ ದಿಲೀಪ್ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೇರಳ ಪತ್ರಿಕೆಗಳು ವರದಿ ಮಾಡಿವೆ.

ಕಳೆದ ಕೆಲ ತಿಂಗಳುಗಳ ಹಿಂದೆ ಬಹು ಭಾಷಾನಟಿಯನ್ನ ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತು ಜೈಲಿನಲ್ಲಿರುವ ಪಲ್ಸರ್ ಸುನಿಯ ಸಹಚರರು ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಈ ಕರೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆಯಂತೆ.

ಕನ್ನಡದಲ್ಲೂ ಅಭಿನಯಿಸಿದ್ದ ಬಹುಭಾಷಾ ನಟಿ ಅಪಹರಣ

Actor Dileep has lodged a complaint

ನಟ ದಿಲೀಪ್ ಅವರ ಸ್ನೇಹಿತ ಹಾಗೂ ನಿರ್ದೇಶಕ ನಾದಿರ್ ಶಾ ಮತ್ತು ಮ್ಯಾನೇಜರ್ ಅಪುನಿ ಈ ಕರೆ ಸ್ವೀಕರಿಸಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆಡಿಯೋ ದಾಖಲೆಯನ್ನು ಪೊಲೀಸರಿಗೆ ನಟ ದಿಲೀಪ್ ನೀಡಿದ್ದು, ಕೊಚ್ಚಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ನಟಿ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್, ಉಪೇಂದ್ರ, ಗಣೇಶ್ ಸೇರಿದಂತೆ ಹಲವು ನಟರ ಸಿನಿಮಾಗಳಲ್ಲಿ ಅಭಿನಯಸಿದ್ದಾರೆ.

ಮಲಯಾಳಂ ನಟಿ ಕಿಡ್ನಾಪ್ ರೂವಾರಿ ಸುನೀಲ್: ಘಟನೆಯ ಪೂರ್ಣ ವಿವರ

English summary
Actor Dileep has lodged a complaint, alleging that he was blackmailed through phone for Rs 1.5 crore by a co-prisoner of Pulsar Suni, who identified himself as Vishnu. Pulsar Suni is the first accused in the molestation case of the Malayalam actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada