»   » ಖಳನಟ ಕಲಾಭವನ್ ಮಣಿ ಹತ್ಯೆಯಲ್ಲಿ ನಟ ದಿಲೀಪ್ ಕೈವಾಡ?

ಖಳನಟ ಕಲಾಭವನ್ ಮಣಿ ಹತ್ಯೆಯಲ್ಲಿ ನಟ ದಿಲೀಪ್ ಕೈವಾಡ?

Posted By:
Subscribe to Filmibeat Kannada

ಮಲಯಾಳಂ ನಟ ದಿಲೀಪ್ ಬಹುಭಾಷಾ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಸುದ್ದಿ ಸಂಚಲನ ಉಂಟುಮಾಡಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ಸಂದರ್ಭದಲ್ಲೇ ನಟ ದಿಲೀಪ್ ಬಗ್ಗೆ ಇನ್ನೊಂದು ಹೊಸ ನ್ಯೂಸ್ ಕೇಳಿಬಂದಿದೆ.

ಬಹುಭಾಷಾ ನಟಿಯ ಲೈಂಗಿಕ ದೌರ್ಜನ್ಯಕ್ಕೆ ಕಾರಣವೇನು? ಸತ್ಯ ಹೊರಬಿತ್ತು..

ದಕ್ಷಿಣ ಭಾರತದ ಖ್ಯಾತ ಖಳನಟ ಕಲಾಭವನ್ ಮಣಿ ರವರ ಹತ್ಯೆಯಲ್ಲಿ ನಟ ದಿಲೀಪ್ ಕೈವಾಡ ಇದೆ ಎಂಬ ಆರೋಪ ಈಗ ಕೇಳಿಬಂದಿದೆ. ಫೆಬ್ರವರಿ 17 ರಂದು ನಡೆದ ಬಹುಭಾಷಾ ನಟಿಯ ಕಿಡ್ನಾಪ್, ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ರೂವಾರಿ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ದಿಲೀಪ್ ವಿರುದ್ಧ ಈಗ ಈ ಒಂದು ಹೊಸ ವಿಷಯ ಹೊರಬಿದ್ದಿದೆ.

Actor Dileep involved in Kalabhavan Mani's death, alleges Mani's brother!

ಖಳನಟ ಕಲಾಭವನ್ ಮಣಿ ರವರ ಹತ್ಯೆಯಲ್ಲಿ ದಿಲೀಪ್ ಕೈವಾಡ ಇದೆ ಎಂದು ಅವರ ಸಹೋದರ ರಾಮಕೃಷ್ಣನ್ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದು ಅವರು ಸಿಬಿಐಗೆ ತಿಳಿಸಿರುವುದಾಗಿ ಸುದ್ದಿ ಆಗಿದೆ. ಮಣಿ ರವರು ದಿಲೀಪ್ ಜೊತೆಗೆ ಜಮೀನು ವಿಚಾರವಾಗಿ ವ್ಯವಹಾರ ಹೊಂದಿದ್ದರು. ಆದರೆ ಅವರ ಹತ್ಯೆ ಹಿಂದೆ ಯಾರ ಕೈವಾಡ ಇದೆ ಎಂದು ತಿಳಿದಿಲ್ಲ. ಹತ್ಯೆ ನಂತರ ದಿಲೀಪ್ ಒಮ್ಮೆ ಕುಟುಂಬವನ್ನು ಭೇಟಿ ಆಗಿದ್ದರು. ಆದರೆ ಕಲಾಭವನ್ ರವರ ಹತ್ಯೆಯ ತನಿಖೆಗೆ ದಿಲೀಪ್ ಸಹಕಾರ ನೀಡಿರಲಿಲ್ಲ ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಕಲಾಭವನ್ ಮಣಿ ರವರು ಕನ್ನಡದಲ್ಲಿ 'ದುರ್ಗಿ', 'ಮೈತ್ರಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕಳೆದ ವರ್ಷ(2016) ಮಾರ್ಚ್ ತಿಂಗಳಲ್ಲಿ ಹತ್ಯೆಯಾದರು.

English summary
Malayalam Actor Dileep involved in Kalabhavan Mani's death, alleges Mani's brother!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada