»   » ಟ್ವಿಟ್ಟರ್ ನಲ್ಲಿ 'ಅನುಭವ' ಹಂಚಿಕೊಂಡ ಕಾಶಿನಾಥ್

ಟ್ವಿಟ್ಟರ್ ನಲ್ಲಿ 'ಅನುಭವ' ಹಂಚಿಕೊಂಡ ಕಾಶಿನಾಥ್

Posted By:
Subscribe to Filmibeat Kannada

ನಟ, ನಿರ್ದೇಶಕ ಕಾಶಿನಾಥ್ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಗೆ ಅಡಿಯಿಟ್ಟಿದ್ದಾರೆ. ಟ್ವಿಟ್ಟರ್ ಕೇವಲ ಈ ಜಮಾನದ ಸೆಲೆಬ್ರಿಟಿಗಳಿಗಷ್ಟೇ ಎಂಬ ಭ್ರಮೆ ಬಹಳಷ್ಟು ಮಂದಿಗಿದೆ. ಆ ಮಾತನ್ನು ಕಾಶಿನಾಥ್ ಹುಸಿ ಮಾಡಿದ್ದಾರೆ. ಇತ್ತೀಚೆಗೆ ನವರಸ ನಾಯಕ ಜಗ್ಗೇಶ್ ಸಹ ಟ್ವಿಟ್ಟರ್ ಗೆ ಅಡಿಯಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ.

ಕಾಶಿನಾಥ್ ಅವರು ಬುಧವಾರ (ನ.13) ಟ್ವಿಟ್ಟರ್ ಖಾತೆ ತೆರೆದಿದ್ದು ತಮ್ಮ ಬಗ್ಗೆ ಪುಟ್ಟ ಒಕ್ಕಣೆಯನ್ನೂ ಕೊಟ್ಟುಕೊಂಡಿದ್ದಾರೆ. ಅದೇನೆಂದರೆ A man with a scientific mind ಎಂಬುದು. ಇಲ್ಲಿ ಅವರ ವೆಬ್ ಸೈಟ್ ಕೊಂಡಿಯನ್ನೂ ಕೊಡಲಾಗಿದೆ (http://www.kashicineyatre.com/). ಆದರೆ ಅದು ಇನ್ನೂ ನಿರ್ಮಾಣ ಹಂತದಲ್ಲಿದೆ.

Kashinath

ಇಷ್ಟು ದಿನ ಕಾಶಿನಾಥ್ ಅವರು ಏನು ಮಾಡುತ್ತಿದ್ದರು, ಮುಂದೇನು ಮಾಡುತ್ತಾರೆ, ಅವರ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಟ್ವಿಟ್ಟರ್ ನಲ್ಲೇ ಉತ್ತರ ಸಿಗಲಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಕಾಶಿನಾಥ್ ಇನ್ನಷ್ಟು ಹತ್ತಿರವಾಗಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದ್ದಂತಹ ಚಿತ್ರ ಅನುಭವ. ಈಗ ಮತ್ತೊಮ್ಮೆ ಅನುಭವ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೆ ಅನುಭವ ಚಿತ್ರ ಮೂರು ಬಾರಿ ರೀ ರಿಲೀಸ್ ಆಗಿದೆ. ಈಗ ಮತ್ತೊಮ್ಮೆ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. (ಒನ್ಇಂಡಿಯಾ ಕನ್ನಡ)

<blockquote class="twitter-tweet blockquote"><p>Anubhava has been scheduled for a re- release for the third time to all those who missed the Kashinath Flavour.</p>— Kashinath Hathwar (@cinekashinath) <a href="https://twitter.com/cinekashinath/statuses/400561035381178368">November 13, 2013</a></blockquote> <script async src="//platform.twitter.com/widgets.js" charset="utf-8"></script>

English summary
Kannada actor, director Kashinath too joined the list of celebrities that are on Twitter. His Twitter handle is cinekashinath. He tweets, "Anubhava has been scheduled for a re- release for the third time to all those who missed the Kashinath Flavour.
Please Wait while comments are loading...