ಥಟ್ ಅಂತ ನೋಡಿದ್ರೆ ಈ ನಟ ಯಾರು ಅಂತ ಗೊತ್ತೇ ಆಗಲ್ಲ!
ಮೀಸೆ ಫುಲ್ ಟ್ರಿಂ....ಲೈಟ್ ಆಗಿ ದಾಡಿ...ಸ್ಟೈಲ್ ಆಗಿ ಕನ್ನಡಕ....ಸ್ಟೈಲಿಶ್ ಹೇರ್ ಸ್ಟೈಲ್....ಥಟ್ ಅಂತ ನೋಡಿದ್ರೆ ಯಾರು ಇದು ಹೊಸ ಮುಖ ಎಂಬ ಭಾವನೆ ಮೂಡುತ್ತೆ. ಆಮೇಲೆ ಸ್ವಲ್ಪ ಸಮಯ ತಗೊಂಡು ನೋಡಿದ್ರೆ ಇದು ಕನ್ನಡದ ಯುವ ನಟ-ನಿರ್ದೇಶಕ ರಿಷಬ್ ಶೆಟ್ಟಿ.
Recommended Video
ರಿಷಬ್ ಶೆಟ್ಟಿಯ ಈ ಹೊಸ ಲುಕ್ ನೋಡಿ ನೆಟ್ಟಿಗರು ಹಲವು ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. 'ರಿಷಬ್ ಸರ್ ಗೆ Brother ಇದ್ದಂಗ್ ಅವ್ರೇ..ಯಾವ್ದೋ ಹೊಸ ಸಿನ್ಮಾ ಲುಕ್ಕು ಅನ್ಸುತ್ತೆ' ಎಂದು ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
'ಏನ್ ಶೆಟ್ರೇ ಏನ್ ಸಮಾಚಾರ ಸೂಪರ್ ಆಗಿ ಇದೇ ಲುಕ್' ಎಂದು ಮತ್ತೊಬ್ಬ ವ್ಯಕ್ತಿ ಕೇಳಿದ್ದಾರೆ. 'ಇದು ನೀವೇನಾ... ಹೊಸ movie look? ಏನ್ ಸಮಾಚಾರ ಶೆಟ್ರೆ..' ಎಂದು ಇನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಹೀಗೆ, ಬಹುತೇಕ ಮಂದಿ ಹೊಸ ಸಿನಿಮಾ ಇರಬಹುದು ಅದಕ್ಕೆ ರಿಷಬ್ ಶೆಟ್ಟಿ ಹೊಸ ಲುಕ್ ಎನ್ನುತ್ತಿದ್ದಾರೆ. ಆದರೆ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ಕೊತ್ತಮಿರಿ ಸೊಪ್ಪು ಡೈಲಾಗ್ ರಿಷಬ್ ಫೋಟೋವನ್ನೂ ಬಿಡಲಿಲ್ಲ.
'ಕಥಾ ಸಂಗಮ' ಸಿನಿಮಾ ಬಳಿಕ ರಿಷಬ್ ಶೆಟ್ಟಿ ಸ್ವಲ್ಪ ಹೆಚ್ಚು ಬ್ಯುಸಿ ಇದ್ದಾರೆ. ಅಭಿನಯ ಜೊತೆಗೆ ನಿರ್ದೇಶನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಾತುರಾಂ, ಮಹನೀಯರೇ ಮಹಿಳೆಯರೇ, ಕೌಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಹರಿ ಕಥೆ ಅಲ್ಲ ಗಿರಿ ಕಥೆ, ಬೆಲ್ ಬಾಟಂ 2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











