For Quick Alerts
  ALLOW NOTIFICATIONS  
  For Daily Alerts

  ತೆಲುಗಿಗೆ ಕಾಲಿಟ್ಟ ರಿಷಭ್ ಶೆಟ್ಟಿ: 'ಮಿಷನ್ ಇಂಪಾಸಿಬಲ್' ಚಿತ್ರದಲ್ಲಿ ನಟನೆ

  |

  ಕನ್ನಡದ ಪ್ರತಿಭಾನ್ವಿತ ನಟ, ನಿರ್ದೇಶಕ ರಿಷಭ್ ಶೆಟ್ಟಿ ಟಾಲಿವುಡ್‌ಗೆ ಪ್ರವೇಶ ಮಾಡಿದ್ದಾರೆ. 'ಮಿಷನ್ ಇಂಪಾಸಿಬಲ್' ಚಿತ್ರದ ಮೂಲಕ ತೆಲುಗು ಸಿನಿಲೋಕಕ್ಕೆ 'ಕಿರಿಕ್ ಪಾರ್ಟಿ' ನಿರ್ದೇಶಕ ಎಂಟ್ರಿ ಕೊಟ್ಟಿದ್ದಾರೆ.

  ಸ್ವರೂಪ್ ಆರ್‌ಜೆಎಸ್ ನಿರ್ದೇಶನದ ಮಾಡುತ್ತಿರುವ 'ಮಿಷನ್ ಇಂಪಾಸಿಬಲ್' ಎಂಬ ಚಿತ್ರದಲ್ಲಿ ರಿಷಭ್ ಶೆಟ್ಟಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟು ಕೊಡದ ಚಿತ್ರತಂಡ ಈ ಕ್ಯಾರೆಕ್ಟರ್ ಎಲ್ಲರಿಗೂ ಇಷ್ಟ ಆಗಲಿದೆ ಎಂದಷ್ಟೇ ತಿಳಿಸಿದ್ದಾರೆ.

  ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ

  'ಮಿಷನ್ ಇಂಪಾಸಿಬಲ್' ಚಿತ್ರದಲ್ಲಿ ಸುಹಾಸ್ ಮತ್ತು ಸಂದೀಪ್ ರಾಜ್ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ರಿಷಭ್ ಶೆಟ್ಟಿ ತೆಲುಗು ಡೆಬ್ಯೂಗೆ ಸಂದೀಪ್ ರಾಜ್ ಸಂತಸ ವ್ಯಕ್ತಪಡಿಸಿದ್ದು, ''ನಿಮ್ಮ ಜೊತೆ ತೆರೆಹಂಚಿಕೊಳ್ಳುವುದು ನಿಜಕ್ಕೂ ಅದ್ಭುತ. ನಟ ಹಾಗೂ ನಿರ್ದೇಶನದ ಮೂಲಕ ಅನೇಕರಿಗೆ ನೀವು ಸ್ಫೂರ್ತಿ'' ಎಂದು ಟ್ವೀಟ್ ಮಾಡಿದ್ದಾರೆ.

  ಈ ಚಿತ್ರದ ಬಗ್ಗೆ ರಿಷಭ್ ಶೆಟ್ಟಿ ಸಹ ಹೆಚ್ಚು ವಿಷಯ ಬಿಟ್ಟುಕೊಟ್ಟಿಲ್ಲ. ನಿರ್ದೇಶಕರಿಗೆ ಧನ್ಯವಾದ ಮಾತ್ರ ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಶೂಟಿಂಗ್‌ನಲ್ಲಿ ರಿಷಭ್ ಭಾಗವಹಿಸಲಿದ್ದಾರೆ.

  ಇತ್ತೀಚಿಗಷ್ಟೆ 'ಬೆಲ್ ಬಾಟಂ-2' ಚಿತ್ರವನ್ನು ರಿಷಭ್ ಶೆಟ್ಟಿ ಆರಂಭಿಸಿದ್ದಾರೆ. ಜಯತೀರ್ಥ ನಿರ್ದೇಶನದಲ್ಲಿ ಈ ಸಿನಿಮಾ ಸೆಟ್ಟೇರಿದ್ದು, 2019ರ ಸೂಪರ್ ಹಿಟ್ ಚಿತ್ರದ ಮುಂದುವರಿದ ಭಾಗ ಇದಾಗಿದೆ.

  'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್

  ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt

  ಈ ಸಿನಿಮಾಗಳನ್ನು ಬಿಟ್ಟು ರಿಷಭ್ ಶೆಟ್ಟಿ ಬಹಳ ಬ್ಯುಸಿ ಇದ್ದಾರೆ. ಹೀರೋ, ಹರಿಕಥೆ ಅಲ್ಲ ಗಿರಿಕಥೆ, ಮಹಾನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಪ್ರಾಜೆಕ್ಟ್‌ ಕೈಯಲ್ಲಿಟ್ಟುಕೊಂಡಿದ್ದಾರೆ.

  English summary
  Kannada actor director Rishab Shetty plays a guest role in Telugu movie Mission Impossible.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X