ದುನಿಯಾ ವಿಜಯ್ ತನಿಖೆಗೆ ಸಿಸಿಬಿ : ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ

ನಟ ದುನಿಯಾ ವಿಜಯ್ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣ ಇನ್ನಷ್ಟು ಬಿಗಿ ಆಗುತ್ತಿದೆ. ಕೋರ್ಟ್ ಗೆ ಇಂದು ರಜೆ ಇರುವ ಕಾರಣ ಬೇಲ್ ಸಿಗುವುದು ಅನುಮಾನವಾಗಿದೆ. ಸದ್ಯ ಈ ಪ್ರಕರಣಕ್ಕೆ ಸಿಸಿಬಿ ಪೋಲೀಸರು ಎಂಟ್ರಿ ಕೊಟ್ಟಿದ್ದಾರೆ.

ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಸಿಸಿಬಿ ಅಧಿಕಾರಿಗಳು ಆಗಮಿಸಿದ್ದಾರೆ. ದುನಿಯಾ ವಿಜಯ್ ಮೇಲೆ ಈ ಹಿಂದೆಯಿಂದ ಸಾಲು ಸಾಲು ಪ್ರಕರಣಗಳು ಇದ್ದು, ಈ ಕಾರಣ ಕೇಸ್ ಸಿಸಿಬಿ ಗೆ ಹೋಗಿದೆ.

ಈಗಾಗಲೇ ಪಾನಿಪೂರಿ ಕಿಟ್ಟಿ ತಂಡದ ವಿರುದ್ಧ ದುನಿಯಾ ವಿಜಯ್ ಪ್ರತಿ ದೂರು ನೀಡಿದ್ದಾರೆ. ''ಪೊಲೀಸರ ಮುಂದೆಯೇ ನನಗೆ ದಿಚ್ಚಿ ಹೊಡೆದಿದ್ದಾನೆ ಹಾಗೂ ನನ್ನನ್ನು ಉಳಿಸೊಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ'' ಎಂದು ದೂರಿನಲ್ಲಿ ದುನಿಯಾ ವಿಜಯ್ ಹೇಳಿದ್ದಾರೆ.

actor duniya vijay case transfers to CCB

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ''ಅದು ಯಾರೇ ಆಗಿದ್ದರು ಅಷ್ಟೇ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ.'' ಎಂದಿದ್ದಾರೆ.

ಅಂದಹಾಗೆ, ಬೆಂಗಳೂರಿನ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್​ ಕಾಂಪಿಟೇಷನ್​ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ತಂಡ ಹಾಗೂ ​ಟ್ರೈನರ್​ ಮಾರುತಿ ಗೌಡ ನಡುವೆ ಜಗಳ ಶುರುವಾಗಿದೆ. ಬಳಿಕ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್​ ಹಾಗೂ ಮಣಿಪ್ರಸಾದ್​ ಕಿಡ್ನಾಪ್​ ಮಾಡಿದ್ದಾರೆ. ಕಾರಿನಲ್ಲಿ ಕರೆದೊಯ್ದಿದ್ದು, ಹಲ್ಲೆ ಮಾಡಿದ್ದಾರೆ ಎಂದು ಪಾನಿಪುರಿ ಕಿಟ್ಟಿ ಆರೋಪ ಮಾಡಿದ್ದರು.

More from Filmibeat

English summary
Kannada Actor Duniya Vijay case transfers to CCB. Duniya Vijay and others was arrested by the High Ground police in an assault and kidnap case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X