For Quick Alerts
  ALLOW NOTIFICATIONS  
  For Daily Alerts

  ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!

  |

  ನಟ ದುನಿಯಾ ವಿಜಯ್ ಸ್ಯಾಂಡಲ್‌ವುಡ್‌ನ ಬ್ಲಾಕ್ ಕೋಬ್ರಾ ಅಂತಾನೆ ಫೇಮಸ್. ದುನಿಯಾ ವಿಜಯ 2007ರಲ್ಲಿ ಬಂದ ದುನಿಯಾ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.‌ ಮೊದಲ ಸಿನಿಮಾದಲ್ಲೇ ನಟ ದುನಿಯಾ ವಿಜಯ್‌ ಕೈ ಹಿಡಿದಿದೆ ಅದೃಷ್ಟ.

  ಸದ್ಯ ದುನಿಯಾ ವಿಜಿ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ನಿರ್ದೇಶಕನ ಪಟ್ಟಕ್ಕೂ ಏರಿದ್ದಾರೆ. ನಟನಾಗಿ ಯಶಸ್ಸು ಕಂಡ ವಿಜಯ್ ಈಗ ನಿರ್ದೇಶಕನಾಗಿಯೂ ಸಕ್ಸಸ್ ಕಂಡಿದ್ದಾರೆ. 'ಸಲಗ' ಚಿತ್ರದ ಮೂಲಕ ದೊಡ್ಡ ಸಕ್ಸಸ್ ಕಂಡ ವಿಜಯ್ ಈಗ 'ಭೀಮಾ' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

  ಅಷ್ಟಕ್ಕೂ ಈಗ ದುನಿಯಾ ವಿಜಯ್ ಬಗ್ಗೆ ಮಾತನಾಡಲು ಕಾರಣ ವಿಜಯ್ ಅವರ ಕುಟುಂಬ. ದುನಿಯಾ ವಿಜಯ್ ಕೌಟುಂಬಿಕ ವಿಚಾರವಾಗಿ ಹಲವು ಬಾರಿ ಸುದ್ದಿಯಾಗಿದ್ದಾರೆ. ಹಾಗಾಗಿ ವಿಜಯ್ ಗೆ ತಮ್ಮ ಮಕ್ಕಳ ಮೇಲೆ ಇರುವ ಅಘಾದವಾದ ಪ್ರೀತಿ ಕೂಡ ಕಾಣುತ್ತದೆ. ದುನಿಯಾ ವಿಜಯ್ ಗೆ 3 ಮಂದಿ ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ಒಂದು ಗಂಡು ಮಗು.

  ದುನಿಯಾ ವಿಜಿಗೆ ಮಕ್ಕಳು ಎಂದರೆ ಪ್ರಾಣ. ಹಾಗಾಗಿ ತಮ್ಮ ಮಗನನ್ನು ಈಗಲೇ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿ ಮಾಡುತ್ತಿದ್ದಾರೆ. ಇನ್ನು ಹೆಣ್ಣು ಮಕ್ಕಳಿಗೂ ವಿಜಯ್ ಅಚ್ಚು ಮೆಚ್ಚಿನ ತಂದೆ. ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ ಮಕ್ಕಳ ಪಾಲಿಗೆ ದುನಿಯಾ ವಿಜಯ್ ಪ್ರೀತಿಯ ತಂದೆ. ಇದು ಮತ್ತೊಮ್ಮೆ ಸಾಭೀತಾಗಿದೆ.

  ದುನಿಯಾ ವಿಜಿ ತಮ್ಮ ಹಿರಿಯ ಪುತ್ರಿ ಮೋನಿಕಾಗೆ ವಿಷೇಶವಾದ ಉಡುಗೊರೆ ಕೊಟ್ಟಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ವಿಜಿ ದುಬಾರಿ ಬೆಲೆಯ ಕಾರು ಗಿಫ್ಟ್ ಮಾಡಿದ್ದಾರೆ. ಅಪ್ಪ ಮತ್ತು ಕಾರಿನ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು, ಲವ್ ಯು ಅಪ್ಪ ಎಂದು ಮೋನಿಕಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಡಿದ್ದಾರೆ.

  Actor Duniya Vijay Gifted Luxury Car To Daughter Monika

  ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸ್ಯಾಂಡಲ್ವುಡ್ ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಮಗಳಾದ ಮೋನಿಕಾ ವಿಜಯ್ ಗೆ ಸೇಫ್ ರೈಡ್ ಎಂದು ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ವಿಜಯ್ ಪುತ್ರಿ ಮೋನಿಕಾ ಅಪ್ಪ ಕೊಡಿಸಿದ ಕೊಸ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ.

  Recommended Video

  Bigg Boss OTT Contestantsನ Imitate ಮಾಡಿದ ಕಿರಣ್ *Interview | Filmibeat Kannada
  English summary
  Actor Duniya Vijay Gifted Luxury Car To Daughter Monika, Know More,
  Wednesday, August 17, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X