ದರ್ಶನ್‌ಗೂ ಮೊದಲೇ 'ಅಭಿಮಾನಿ' ಎಂದು ಹಚ್ಚೆ ಹಾಕಿಕೊಂಡಿದ್ದರು ಕನ್ನಡದ ಈ ಸ್ಟಾರ್ ನಟ!
ಸ್ಟಾರ್ ನಟರಿಗೆ ಅಭಿಮಾನಿಗಳೇ ಉಸಿರು, ಕನ್ನಡ ಚಿತ್ರರಂಗದಲ್ಲಂತೂ ನಟರು ತಮ್ಮ ಅಭಿಮಾನಿಗಳನ್ನು ದೇವರಂತೆ ಮೆರೆಸುತ್ತಾರೆ. ಅಣ್ಣಾವ್ರಿಂದ ಬಂದ ಸಂಸ್ಕೃತಿ ಇದು.
ತಮ್ಮ ಅಭಿಮಾನಿಗಳನ್ನು ಅತಿಯಾಗಿ ಪ್ರೀತಿಸುವ ನಟರಲ್ಲಿ ದರ್ಶನ್ ಸಹ ಒಬ್ಬರು. ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿ ಎಂದೇ ಕರೆಯುತ್ತಾರೆ ದರ್ಶನ್. ಇತ್ತೀಚೆಗಷ್ಟೆ ಬಿಡುಗಡೆ ಆದ ಅವರ 'ಕ್ರಾಂತಿ' ಸಿನಿಮಾವನ್ನು ಅಭಿಮಾನಿಗಳೇ ಪ್ರಚಾರ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ.
ಅದೇ ಖುಷಿಗೆ ಇದೀಗ ನಟ ದರ್ಶನ್ ತಮ್ಮ ಎದೆಯ ಮೇಲೆ 'ನನ್ನ ಸೆಲೆಬ್ರಿಟಿಗಳು' ಎಂದು ಹಚ್ಚೆ ಹಾಕಿಸಿಕೊಂಡು ಅಭಿಮಾನಿಗಳಿಗೆ ಗೌರವ ಸಮರ್ಪಣೆ ಮಾಡಿದ್ದಾರೆ. ದರ್ಶನ್, ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಚಿತ್ರ ಇದೀಗ ವೈರಲ್ ಆಗಿದ್ದು, ತಮ್ಮ ಮೆಚ್ಚಿನ ನಟ, ಅಭಿಮಾನಿಗಳಿಗೆ ತೋರಿರುವ ಗೌರವದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ ದರ್ಶನ್ ಅಭಿಮಾನಿಗಳು. ಆದರೆ ವರ್ಷಗಳ ಹಿಂದೆ ಕನ್ನಡದ ಮತ್ತೊಬ್ಬ ನಟ ಅಭಿಮಾನಿಗಳ ಮೇಲಿನ ಗೌರವದಿಂದ ಹಚ್ಚೆ ಹಾಕಿಸಿಕೊಂಡಿದ್ದರು. ಆ ವಿಡಿಯೋ ಇದೀಗ ವೈರಲ್ ಆಗಿದೆ.

ಕನ್ನಡದ ಸ್ಟಾರ್ ನಟರ ಸಾಲಿಗೇ ಸೇರುವ ಇತ್ತೀಚೆಗೆ ನಿರ್ದೇಶಕರಾಗಿಯೂ ಬಡ್ತಿ ಪಡೆದುಕೊಂಡಿರುವ ನಟ ದುನಿಯಾ ವಿಜಯ್ ಏಳು ವರ್ಷಗಳ ಹಿಂದೆಯೇ ಅಭಿಮಾನಿಗಳ ಮೇಲೆ ತಮಗಿರುವ ಗೌರವ, ಪ್ರೀತಿಯನ್ನು ವ್ಯಕ್ತಪಡಿಸಲೆಂದು 'ಅಭಿಮಾನಿ' ಎಂದು ಹಚ್ಚೆ ಹಾಕಿಸಿಕೊಂಡಿದ್ದರು.
2016 ರ ಏಪ್ರಿಲ್ ತಿಂಗಳಲ್ಲಿ ನಟ ದುನಿಯಾ ವಿಜಯ್ ತಮ್ಮ ಅಭಿಮಾನಿಗಳು ಹಾಗೂ ತಾಯಿಯ ಮೇಲಿನ ಪ್ರೀತಿ ಪ್ರದರ್ಶಿಸಲು, ಅವ್ವ, ಅಭಿಮಾನಿ ಎಂದು ಕೈಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಹಚ್ಚೆ ಹಾಕಿಸಿಕೊಂಡ ದಿನವೇ ನೋವಿನಲ್ಲಿ ಚಿತ್ರೀಕರಣದಲ್ಲಿಯೂ ಭಾಗವಹಿಸಿದ್ದರು.
ನಟ ಪುನೀತ್ ರಾಜ್‌ಕುಮಾರ್ ಸಹ ಎದೆಯ ಮೇಲೆ ಅಭಿಮಾನಿಗಳ ಪ್ರೀತಿಗೆ ಗೌರವ ನೀಡುವಂತೆ ಹಚ್ಚೆ ಹಾಕಿಸಿಕೊಳ್ಳಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು, ಆದರೆ ಅದು ಸಾಧ್ಯವಾಗುವ ಮುನ್ನವೇ ಇಹಲೋಕ ತ್ಯಜಿಸಿದರು. ಈಗ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಗೌರವ ನೀಡಲೆಂದು 'ನನ್ನ ಸೆಲೆಬ್ರಿಟಿಗಳು' ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ.


Click it and Unblock the Notifications











