ತೆಲುಗು ಚಿತ್ರಕ್ಕಾಗಿ ದುನಿಯಾ ವಿಜಯ್ ತಯಾರಿ: ಹೊಸ ಲುಕ್ ರಿವೀಲ್!
ಕನ್ನಡದ ಕರಿಚಿರತೆ ದುನಿಯಾ ವಿಜಯ್ ಸದ್ಯ ಸಲಗ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಮೊದಲ ಬಾರಿಗೆ ನಿರ್ದೇಶಕನಾಗಿ ಬಂಪರ್ ಲಾಟರಿ ಹೊಡೆದಿದ್ದಾರೆ ದುನಿಯಾ ವಿಜಯ್. ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಲಗ ಸೂಪರ್ ಹಿಟ್ ಆಗಿದೆ. ಸಲಗ ಬಳಿಕ ದುನಿಯಾ ವಿಜಯ್‌ಗೆ ಮತ್ತೊಂದು ಅದೃಷ್ಟದ ಬಾಗಿಲು ತೆರೆದಿದೆ. ದುನಿಯಾ ವಿಜಯ್ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಈ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿದೆ.
Recommended Video
ಸಲಗ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ವಿಜಯ್ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ತಾತ್ಕಾಲಿಕವಾಗಿ ಚಿತ್ರಕ್ಕೆ ಎನ್‌ಬಿಕೆ 107 ಎನ್ನುವ ಟೈಟಲ್ ಇಡಲಾಗಿದೆ.
ಈ ಚಿತ್ರದಲ್ಲಿ ನಟ ದುನಿಯಾ ವಿಜಯ್ ಲುಕ್ ಹೇಗೆ ಇರಲಿದೆ. ಅವರು ಯಾವ ರೀತಿಯ ಲುಕ್‌ನಲ್ಲಿ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದೆ. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ.

ಬಿಳಿ ಗಡ್ಡ, ಮೀಸೆ ಬಿಟ್ಟ ದುನಿಯಾ ವಿಜಯ್!
ನಟ ದುನಿಯಾ ವಿಜಯ್ ಅವರು ಇತ್ತೀಚೆಗೆ ಬಡವ ರಾಸ್ಕಲ್ ಚಿತ್ರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ವಿಜಯ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ದುನಿಯಾ ವಿಜಯ್ ಲುಕ್ ಸಿಕ್ಕಾಪಟ್ಟೆ ಬದಲಾಗಿದೆ. ದುನಿಯಾ ವಿಜಯ್ ಉದ್ದನೆಯ ಬಿಳಿ ಗಡ್ಡ, ಮೀಸೆ ಬಿಟ್ಟಿದ್ದಾರೆ. ಈ ಲುಕ್ ಅವರು ತೆಲುಗು ಚಿತ್ರಕ್ಕಾಗಿ ಮಾಡಿಕೊಂಡಿರುವುದು ಎಂದು ಎನ್ನಲಾಗಿದೆ.

ಖಳನಾಯಕನಾಗಿ ಬಾಲಯ್ಯನ ವಿರುದ್ಧ ವಿಜಯ್ ಅಬ್ಬರ!
ಇದು ದುನಿಯಾ ವಿಜಯ್ ಸಿನಿಮಾ ಜರ್ನಿಯಲ್ಲಿ ವಿಭಿನ್ನ ಪ್ರಯೋಗ ಅಂತ ಹೇಳಬಹುದು. ಯಾಕೆಂದರೆ ವಿಜಯ್ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಎದುರಿಗೆ , ಕನ್ನಡದ ನಟ ದುನಿಯಾ ವಿಜಯ್ ಅಬ್ಬರಿಸಲಿದ್ದಾನರೆ. ಈ ಸುದ್ದಿ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಾ ಇದೆ. ಆದರೆ ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಹೊರ ಬರುವುದಕ್ಕೆ ಮಾತ್ರ ಬಾಕಿ ಇದೆ. ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

ರಾಯಲಸೀಮಾದ ಖದರ್ ವಿಲನ್ ದುನಿಯಾ ವಿಜಯ್!
ಈ ಚಿತ್ರ ಪಕ್ಕಾ ಮಾಸ್ ಎಂಟರ್ಟೈನರ್ ಸಿನಿಮಾ ಆಗಿರಲಿದೆ. ರಾಯಲಸೀಮಾದಲ್ಲಿ ನಡೆಯುವ ಕಥೆ ಇದು. ಈ ಚಿತ್ರದ ಕಥೆ ನೈಜ ಘಟನೆಯನ್ನು ಆಧರಿಸಿದ ಕಥೆ ಎನ್ನಲಾಗಿದೆ. ಈಗಾಗಲೇ ಚಿತ್ರದ ಮುಹೂರ್ಥ ಕಾರ್ಯ ನೆರವೇರಿದ್ದು, ಚಿತ್ರೀಕರಣಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ನಟ ದುನಿಯಾ ವಿಜಯ್ ಕೂಡ ತಮ್ಮ ಲುಕ್ ಬದಲಾಯಿಸಿ ಕೊಂಡು ತಯಾರಾಗುತ್ತಿದ್ದಾರೆ.

ನಾಯಕನ ಜೊತೆಗೆ ಖಳನಾಯಕನಾಗಿ ಜರ್ನಿ ಶುರು ಮಾಡಿದ ಸಲಗ!
ಇದು ದುನಿಯಾ ವಿಜಯ್ ಅಭಿಮಾನಿಗಳಿಗೆ ಖುಷಿ ತರುವ ಸಂಗತಿ. ಸಲಗ ಚಿತ್ರದ ಬಳಿಕ ದುನಿಯಾ ವಿಜಯ್ ಖಳನಾಯಕನಾಗಿ ತೆಲುಗಿನಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಈ ಮೂಲಕ ಕೇವಲ ಹೀರೋ ಆಗಿರುವುದು ಮುಖ್ಯವಲ್ಲ, ಕಲಾವಿದರಾಗಿ ಉಳಿಯುವುದು ಮುಖ್ಯ ಅನ್ನುವುದನ್ನು ನಟ ದುನಿಯಾ ವಿಜಯ್ ಸಾಬೀತು ಮಾಡಲು ಮುಂದಾಗಿದ್ದಾರೆ. ಕಲಾವಿದ ಅಂದ ಮೇಲೆ ಬರೀ ನಾಯಕ ಆಗಿ ಇರಬೇಕು ಅಂತ ಇಲ್ಲ. ಭಿನ್ನ ಪಾತ್ರಗಳಿಗೆ ಜೀವ ತುಂಬುವುದು ಕಲಾವಿದನ ತಾಕತ್ತು. ಅದನ್ನ ನಟ ದುನಿಯಾ ವಿಜಯ್ ಈಗಾಗಲೇ ಹಲವು ಪಾತ್ರಗಳಲ್ಲಿ ತೋರಿಸಿದ್ದಾರೆ. ಈಗ ಖಳನಟನಾಗಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.


Click it and Unblock the Notifications











