twitter
    For Quick Alerts
    ALLOW NOTIFICATIONS  
    For Daily Alerts

    ಮರಗಳನ್ನು ಕಡಿದು ಹೆಲಿ ಟೂರಿಸಂ ಆರಂಭಕ್ಕೆ ದುನಿಯಾ ವಿಜಯ್‌ ವಿರೋಧ

    |

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮರಗಳನ್ನು ಕಡಿದು ಹೆಲಿ ಟೂರಿಸಂ ಆರಂಭಿಸುವ ಪ್ರವಾಸೋದ್ಯಮ ಇಲಾಖೆ ನಿರ್ಧಾರದ ವಿರುದ್ಧ ಚಲನಚಿತ್ರ ನಟ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.

    Recommended Video

    Vikrant Rona Movie to Release Worldwide on August 19thರಿವೀಲ್ ಆಯ್ತು ವಿಕ್ರಾಂತ್ ರೋಣ ರಿಲೀಸ್ ದಿನಾಂಕ

    ಈ ಬಗ್ಗೆ ಫೇಸ್‌ ಬುಕ್‌ ಖಾತೆಯಲ್ಲಿ ವಿರೋಧ ವ್ಯಕ್ತಪಡಿಸಿರುವ ನಟ ವಿಜಯ್‌, ''ಈ ಯೋಜನೆಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಿ'' ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಅಭಿಮಾನಿಗಳು ಬೀದಿಗೆ ಇಳಿದರೆ ಕತೆ ಬೇರೆಯಾಗುತ್ತೆ: ದುನಿಯಾ ವಿಜಯ್ ಎಚ್ಚರಿಕೆಅಭಿಮಾನಿಗಳು ಬೀದಿಗೆ ಇಳಿದರೆ ಕತೆ ಬೇರೆಯಾಗುತ್ತೆ: ದುನಿಯಾ ವಿಜಯ್ ಎಚ್ಚರಿಕೆ

    ''ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರೋತ್ತೋ, ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡೋದಕ್ಕು ಅಷ್ಟೆ ವಿರೋಧ ಇರುತ್ತೆ. ಸೇವ್ ಮೈಸೂರು ಕ್ಯಾಂಪೇನ್‌ಗೆ ನನ್ನ ಬೆಂಬಲ ಇದೆ. ಸರ್ಕಾರ ಮತ್ತೆ ಯೋಚನೆ ಮಾಡಿ ಯೋಜನೆ ಕೈಗೆತ್ತಿಕೊಳ್ಳಲಿ'' ಎಂದು ದುನಿಯಾ ವಿಜಯ್‌ ಸೇವ್ ಮೈಸೂರು ಅಭಿಯಾನ ಬೆಂಬಲಿಸಿದ್ದಾರೆ.

    Actor Duniya Vijay Opposed to Proposed Heli Tourism in Mysuru

    ''ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡುವ ಸಲುವಾಗಿ ಲಲಿತ ಮಹಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು. ನಾವುಗಳು ಮರ ಬೆಳೆಸೋಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು. ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣೋದು. ಶೂಟಿಂಗ್ ಟೈಂ ಅಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಖುಷಿ ಆಗುತ್ತೆ'' ಎಂದು ಮೈಸೂರಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಹೆಲಿ ಟೂರಿಸಂ ಸಲುವಾಗಿ ನೂರಾರು ಮರಗಳ ಕಡಿಯಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈಗಾಗಲೇ ಮರಗಳನ್ನು ಗುರುತು ಮಾಡಿದೆ. ಇದಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿ ''ಸೇವ್ ಮೈಸೂರು'' ಅಭಿಮಾನಿ ನಡೆಸುತ್ತಿದ್ದಾರೆ. ಈ ಅಭಿಯಾನಕ್ಕೆ ಈಗ ದುನಿಯಾ ವಿಜಯ್ ಬೆಂಬಲಿಸಿದ್ದಾರೆ.

    English summary
    Actor Duniya Vijay Opposed to Proposed Heli Tourism in Mysuru.
    Thursday, April 15, 2021, 15:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X