ವಿಚ್ಛೇದನಕ್ಕೆ ದುನಿಯಾ ವಿಜಿ ಕೊಟ್ಟ 25 ಕಾರಣಗಳು

By Rajendra

ಸಂಬಂಧಗಳು ಮುರಿದು ಬೀಳಲು ಕಾರಣ ಒಂದಾದರೇನು ನೂರಾದರೇನು? ಮುರಿದ ಹೃದಯಗಳನ್ನು ಅಂಟಿಸುವ ಮುಲಾಮು ಇನ್ನೂ ಮಾರುಕಟ್ಟೆಯಲ್ಲಿ ಬಂದಿಲ್ಲ. ನಟ ದುನಿಯಾ ವಿಜಯ್ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಇಷ್ಟಕ್ಕೂ ವಿಚ್ಛೇದನಕ್ಕೆ ಅವರು ನೀಡಿರುವ ಕಾರಣಗಳು ಸಾಕಷ್ಟಿವೆ. ಅವುಗಳನ್ನು ಪಟ್ಟಿ ಮಾಡಿ ನಿಮ್ಮ ಮುಂದಿಡುತ್ತಿದ್ದೇವೆ. ಇವನ್ನೆಲ್ಲಾ ಓದುತ್ತಾ ಹೋದರೆ ಹೀಗೂ ಉಂಟೇ ಎಂಬ ಸಂದೇಹ ನಿಮಗೆ ಬರಬಹುದು. ದುನಿಯಾ ವಿಜಿ ನೀಡಿರುವ ಕೆಲವು ಕಾರಣಗಳಂತೂ ಹಾಸ್ಯಸ್ಪದವಾಗಿ ಕಾಣುತ್ತವೆ.

ಹದಿನಾಲ್ಕು ವರ್ಷಗಳಷ್ಟು ಸುದೀರ್ಘ ಸಮಯ ಸಂಸಾರದ ಬಂಡಿ ಎಳೆದು ಈಗ ಬೇಡ ಎನ್ನುತ್ತಿದ್ದಾರೆ. ಆದರೆ ವಿಜಿ ಪತ್ನಿ ಮಾತ್ರ ತಾನು ತನ್ನ ಗಂಡನೊಂದಿಗೇ ಬದುಕುತ್ತೇನೆ ಎನ್ನುತ್ತಿದ್ದಾರೆ. ಅವರಿಗೆ ಈಗಾಗಲೆ ಮೂರು, ನಾಲ್ಕು ಮದುವೆಗಳಾಗಿವೆ ಎಂಬ ಆರೋಪಗಳನ್ನೂ ಮಾಡುತ್ತಿದ್ದಾರೆ.

ವಿವಾಹ ವಿಚ್ಛೇದನಕ್ಕೆ ದುನಿಯಾ ವಿಜಿ ನೀಡಿರುವ ಎಲ್ಲಾ ಕಾರಣಗಳು ಸತ್ಯಕ್ಕೆ ದೂರವಾಗಿವೆ ಎಂದು ಅವರ ಪತ್ನಿ ನಾಗರತ್ನ ಅವರು ಹೇಳಿದ್ದಾರೆ. ಇದು ಸಹಜ ಕೂಡ. ಆದರೆ ಇವೆಲ್ಲವೂ ಸತ್ಯವೋ ಸುಳ್ಳೋ ಎಂಬುದನ್ನು ನಿರ್ಧರಿಸಲು ನ್ಯಾಯಾಲಯ ಇದೆಯಲ್ಲಾ. ಇಷ್ಟಕ್ಕೂ ಈ ಕಾರಣಗಳನ್ನು ನೋಡಿದರೆ ವಿಜಿಗೆ ವಿಚ್ಛೇದನ ಸಿಗುತ್ತದಾ ಎಂಬ ಸಂದೇವೂ ಬರುತ್ತದೆ. ಒಂದೊಂದೇ ಸ್ಲೈಡುಗಳನ್ನು ಸರಿಸುತ್ತಾ ಸಾಗಿ ನಿಮಗೇನು ಅನ್ನಿಸಿತು ಎಂದು ಹೇಳಿ.

ವಿವಾಹ ವಿಚ್ಛೇದನಕ್ಕೆ ಮೊದಲನೆ ಕಾರಣ

ವಿವಾಹ ವಿಚ್ಛೇದನಕ್ಕೆ ಮೊದಲನೆ ಕಾರಣ

ಮದುವೆಯಾದ ಒಂದು ವರ್ಷ ಮಾತ್ರ ಚೆನ್ನಾಗಿತ್ತು.

ವಿವಾಹ ವಿಚ್ಛೇದನಕ್ಕೆ ಎರಡನೇ ಕಾರಣ

ವಿವಾಹ ವಿಚ್ಛೇದನಕ್ಕೆ ಎರಡನೇ ಕಾರಣ

ನಂತರ ನಾಗರತ್ನ ಅವರು ನಮ್ಮ ತಂದೆ ತಾಯಿಗೆ ತೊಂದರೆ ಕೊಡಲು ಆರಂಭಿಸಿದರು.

ವಿವಾಹ ವಿಚ್ಛೇದನಕ್ಕೆ ಮೂರನೇ ಕಾರಣ

ವಿವಾಹ ವಿಚ್ಛೇದನಕ್ಕೆ ಮೂರನೇ ಕಾರಣ

ನನ್ನ ತಂದೆ ತಾಯಿ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಳು.

ವಿವಾಹ ವಿಚ್ಛೇದನಕ್ಕೆ ನಾಲ್ಕನೇ ಕಾರಣ

ವಿವಾಹ ವಿಚ್ಛೇದನಕ್ಕೆ ನಾಲ್ಕನೇ ಕಾರಣ

ಮದುವೆ ಸಂದರ್ಭದಲ್ಲಿ ಸಾಕಷ್ಟು ಸ್ಥಿತಿವಂತನಾಗಿದ್ದೆ.

ವಿವಾಹ ವಿಚ್ಛೇದನಕ್ಕೆ ಐದನೇ ಕಾರಣ

ವಿವಾಹ ವಿಚ್ಛೇದನಕ್ಕೆ ಐದನೇ ಕಾರಣ

ಬಡವರ ಮನೆ ಹುಡುಗಿಗಾಗಿ ಹುಡುಕುತ್ತಿದ್ದೆವು.

ವಿವಾಹ ವಿಚ್ಛೇದನಕ್ಕೆ ಆರನೇ ಕಾರಣ

ವಿವಾಹ ವಿಚ್ಛೇದನಕ್ಕೆ ಆರನೇ ಕಾರಣ

ಪತ್ನಿ ನಾಗರತ್ನ ತಂದೆಗೆ ಒಟ್ಟು 9 ಜನ ಮಕ್ಕಳಿದ್ದರು.

ವಿವಾಹ ವಿಚ್ಛೇದನಕ್ಕೆ ಏಳನೇ ಕಾರಣ

ವಿವಾಹ ವಿಚ್ಛೇದನಕ್ಕೆ ಏಳನೇ ಕಾರಣ

ನಾಗರತ್ನ ಮನೆಯ ಆರ್ಥಿಕ ಸ್ಥಿತಿ ಬಹಳ ಕೆಟ್ಟದಾಗಿತ್ತು.

ವಿವಾಹ ವಿಚ್ಛೇದನಕ್ಕೆ ಎಂಟನೇ ಕಾರಣ

ವಿವಾಹ ವಿಚ್ಛೇದನಕ್ಕೆ ಎಂಟನೇ ಕಾರಣ

ಮದುವೆ ಖರ್ಚು ವೆಚ್ಚ ಭರಿಸಿದ್ದು ನಾನೇ.

ವಿವಾಹ ವಿಚ್ಛೇದನಕ್ಕೆ ಒಂಭತ್ತನೇ ಕಾರಣ

ವಿವಾಹ ವಿಚ್ಛೇದನಕ್ಕೆ ಒಂಭತ್ತನೇ ಕಾರಣ

ನನ್ನ ತಾಯಿಗೆ ಅಸ್ತಮಾ, ಕೀಲು ನೋವು, ಸಕ್ಕರೆ ಕಾಯಿಲೆ ಇದೆ.

ವಿವಾಹ ವಿಚ್ಛೇದನಕ್ಕೆ ಹತ್ತನೇ ಕಾರಣ

ವಿವಾಹ ವಿಚ್ಛೇದನಕ್ಕೆ ಹತ್ತನೇ ಕಾರಣ

ತಂದೆ ತಾಯಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ಆಕೆಗೆ ಇಷ್ಟವಿರಲಿಲ್ಲ.

ವಿವಾಹ ವಿಚ್ಛೇದನಕ್ಕೆ ಹನ್ನೊಂದನೇ ಕಾರಣ

ವಿವಾಹ ವಿಚ್ಛೇದನಕ್ಕೆ ಹನ್ನೊಂದನೇ ಕಾರಣ

ಆಕೆಯ ಅಕ್ಕ ಭಾವ ಮನೆ ಬಂದು ನಮ್ಮ ತಂದೆ ತಾಯಿಯನ್ನು ಹೀಯಾಳಿಸುತ್ತಿದ್ದರು.

ವಿವಾಹ ವಿಚ್ಛೇದನಕ್ಕೆ 12ನೇ ಕಾರಣ

ವಿವಾಹ ವಿಚ್ಛೇದನಕ್ಕೆ 12ನೇ ಕಾರಣ

ಪತ್ನಿ ನಾಗರತ್ನ ಅನುಮಾನದ ಸ್ವಭಾವದವಳು.

ವಿವಾಹ ವಿಚ್ಛೇದನಕ್ಕೆ 13ನೇ ಕಾರಣ

ವಿವಾಹ ವಿಚ್ಛೇದನಕ್ಕೆ 13ನೇ ಕಾರಣ

ಸಿನಿಮಾ ರಂಗದಲ್ಲಿರುವ ಕಾರಣ ನನ್ನ ಮೇಲೆ ಅನುಮಾನ ಪಡುತ್ತಿದ್ದಳು.

ವಿವಾಹ ವಿಚ್ಛೇದನಕ್ಕೆ 14ನೇ ಕಾರಣ

ವಿವಾಹ ವಿಚ್ಛೇದನಕ್ಕೆ 14ನೇ ಕಾರಣ

ಮನೆಗೆ ತಡವಾಗಿ ಬಂದರೆ ಅನುಮಾನದ ಪ್ರಶ್ನೆ ಕೇಳುತ್ತಿದ್ದಳು.

ವಿವಾಹ ವಿಚ್ಛೇದನಕ್ಕೆ 15ನೇ ಕಾರಣ

ವಿವಾಹ ವಿಚ್ಛೇದನಕ್ಕೆ 15ನೇ ಕಾರಣ

ಪದೇ ಪದೇ ಕರೆ ಮಾಡಿ ವಿವರ ಪಡೆಯುತ್ತಿದ್ದಳು

ವಿವಾಹ ವಿಚ್ಛೇದನಕ್ಕೆ 16ನೇ ಕಾರಣ

ವಿವಾಹ ವಿಚ್ಛೇದನಕ್ಕೆ 16ನೇ ಕಾರಣ

ನಿರ್ಮಾಪಕರಿಗೆ ಕರೆ ಮಾಡಿ ನನ್ನ ವಿವರ ಪಡೆಯುತ್ತಿದ್ದಳು.

ವಿವಾಹ ವಿಚ್ಛೇದನಕ್ಕೆ 17ನೇ ಕಾರಣ

ವಿವಾಹ ವಿಚ್ಛೇದನಕ್ಕೆ 17ನೇ ಕಾರಣ

ಪತ್ನಿ ಕರೆ ಮಾಡಿದ ಕೂಡಲೆ ಮನೆಗೆ ಹೋಗಬೇಕಿತ್ತು.

ವಿವಾಹ ವಿಚ್ಛೇದನಕ್ಕೆ 18ನೇ ಕಾರಣ

ವಿವಾಹ ವಿಚ್ಛೇದನಕ್ಕೆ 18ನೇ ಕಾರಣ

ಶೂಟಿಂಗ್ ಸ್ಥಳಕ್ಕೆ ಬಂದು ನನ್ನೊಂದಿಗೆ ಜಗಳ ಆಡುತ್ತಿದ್ದಳು.

ವಿವಾಹ ವಿಚ್ಛೇದನಕ್ಕೆ 19ನೇ ಕಾರಣ

ವಿವಾಹ ವಿಚ್ಛೇದನಕ್ಕೆ 19ನೇ ಕಾರಣ

ನನ್ನ ಅಕ್ಕ ಭಾವ ಬಂದು ಬುದ್ಧಿ ಹೇಳಲು ಪ್ರಯತ್ನಿಸಿದರು. ಆದರೆ ಪತ್ನಿ ನಾಗರತ್ನ ಬದಲಾಗಲಿಲ್ಲ.

ವಿವಾಹ ವಿಚ್ಛೇದನಕ್ಕೆ 20ನೇ ಕಾರಣ

ವಿವಾಹ ವಿಚ್ಛೇದನಕ್ಕೆ 20ನೇ ಕಾರಣ

ನಾನು ಜನಪ್ರಿಯತೆ, ಹಣ ಸಂಪಾದನೆ ಮಾಡಿದೆ. ಆಸ್ತಿ ಹಣ ಒಡವೆಗಾಗಿ ಸದಾ ಪೀಡಿಸುತ್ತಿದ್ದಳು. ರು.3 ಕೋಟಿ ಮೌಲ್ಯದ ಮನೆ ಕಟ್ಟಿಸಿ ಕೊಟ್ಟಿರುವೆ. ರು. 80 ಲಕ್ಷ ಮೌಲ್ಯದ ಒಡವೆ ಮಾಡಿಸಿ ಕೊಟ್ಟಿದ್ದೇನೆ. ಬಟ್ಟೆಗಾಗಿ ಲಕ್ಷಾಂತರ ಖರ್ಚು ಮಾಡಿರುವೆ.

ವಿವಾಹ ವಿಚ್ಛೇದನಕ್ಕೆ 21ನೇ ಕಾರಣ

ವಿವಾಹ ವಿಚ್ಛೇದನಕ್ಕೆ 21ನೇ ಕಾರಣ

ಆಕೆಯ ತಂಗಿಯ ಮದುವೆಯನ್ನು ನಾನೇ ಮಾಡಿಸಿರುವೆ. ನನ್ನ ಸಂಬಂಧಿಕರು ಮನೆಗೆ ಬರಲು ಅವಕಾಶ ನೀಡುತ್ತಿರಲಿಲ್ಲ.

ವಿವಾಹ ವಿಚ್ಛೇದನಕ್ಕೆ 22ನೇ ಕಾರಣ

ವಿವಾಹ ವಿಚ್ಛೇದನಕ್ಕೆ 22ನೇ ಕಾರಣ

ಕಳೆದ ವರ್ಷ ತಿರುಪತಿ, ಧರ್ಮಸ್ಥಳಕ್ಕೆ ಕರೆದೊಯ್ದಿದ್ದೆ. ಪ್ರವಾಸಕ್ಕೆ ಹೋದ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ. ಕಾರಿನಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ. ಮನೆಯಲ್ಲಿ ಫೆನಾಯಿಲ್ ತೋರಿಸಿ ಕುಡಿದು ಸಾಯುತ್ತೇನೆ ಎಂದು ಬೆದರಿಸುತ್ತಿದ್ದರು.

ವಿವಾಹ ವಿಚ್ಛೇದನಕ್ಕೆ 23ನೇ ಕಾರಣ

ವಿವಾಹ ವಿಚ್ಛೇದನಕ್ಕೆ 23ನೇ ಕಾರಣ

ಸಂಬಂಧಿಕರ ಸಹಾಯ ಪಡೆದು ಸಮಸ್ಯೆ ಪರಿಹಾರಕ್ಕೆ ಯತ್ನ. ಸ್ನೇಹಿತರು ಬಂದಾಗಲೂ ಸರಿಯಾಗಿ ಉಪಚರಿಸುತ್ತಿರಲಿಲ್ಲ. ಸ್ನೇಹಿತ ಶಿವಲಿಂಗಂ ಮನೆಗೆ ಬಂದಾಗ ಟೀ ಕೊಡಲು ಹೇಳಿದ್ದೆ. ಅವರನ್ನು ಹೊಡೆಯಲು ಅಟ್ಟಿಸಿಕೊಂಡು ಹೋಗಿದ್ದಳು. ನಿರ್ಮಾಪಕ ಶ್ರೀನಿವಾಸ್ ಬಂದಾಗಲೂ ಹೀಗೆ ಮಾದಿದ್ದರು. ಪಾತ್ರೆ ಸಾಮನುಗಳನ್ನು ಬಿಸಾಡಿ ಗಲಾಟೆ ಮಾಡಿದ್ದರು.

ವಿವಾಹ ವಿಚ್ಛೇದನಕ್ಕೆ 24ನೇ ಕಾರಣ

ವಿವಾಹ ವಿಚ್ಛೇದನಕ್ಕೆ 24ನೇ ಕಾರಣ

ಚಿತ್ರಗಳಿಗೆ ಸಹಿಹಾಕಲು ಪತ್ನಿ ಒಪ್ಪಿಗೆ ಪಡೆಯಬೇಕಾಗಿತ್ತು. ಚಿತ್ರಗಳಲ್ಲಿ ನಟನೆ ಮಾಡದಂತೆ ಮಾಡುವುದಾಗಿ ಬೆದರಿಕೆ. ಗೃಹ ಪ್ರವೇಶದ ವೇಳೆ ಮುಜುಗರವಾಯಿತು. ನಟಿ ಶುಭಾ ಪೂಂಜಾ ಸಹ ಗೃಹಪ್ರವೇಶಕ್ಕೆ ಬಂದಿದ್ದರು. ಶುಭಾ ಜೊತೆ ಜಗಳ ಮಾಡಿಕೊಂಡಳು.

ವಿವಾಹ ವಿಚ್ಛೇದನಕ್ಕೆ 25ನೇ ಕಾರಣ

ವಿವಾಹ ವಿಚ್ಛೇದನಕ್ಕೆ 25ನೇ ಕಾರಣ

ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಪದೇ ಪದೇ ಹೊಡೆಯುತ್ತಿದ್ದಳು. ಆಕೆಯನ್ನು ಮಾನಸಿಕ ತಜ್ಞರ ಬಳಿಗೆ ಕರೆದೊಯ್ದಿದ್ದೆ. ನಾನು ಕಪ್ಪಗಿದ್ದೇನೆ ಎಂದು ಹೀಯಾಳಿಸುತ್ತಿದ್ದಳು. ನನ್ನಿಂದ ದೂರ ಇರೋದಕ್ಕೆ ಬಯಸುತ್ತಿದ್ದಳು. ನನ್ನ ಮೇಲೆ ಮಾಟ ಮಂತ್ರ ಪ್ರಯೋಗ ಮಾಡಿಸುತ್ತಿದ್ದಳು. ನನ್ನ ಕೋಟ್ ನಲ್ಲಿ ನಿಂಬೆಹಣ್ಣು ಅರಿಸಿಣ ಹಾಕಿದ್ದಳು.

More from Filmibeat

English summary
Kannada actor Duniya Vijay gives 33 reasons in his divorce petition. Vijay had married Nagarathna, 14 years ago and they have three children. It is not the first time that Vijay’s marital life has come under the scanner. Earlier, it was his alleged affair and marriage to actress Shuba Punja that made headlines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X