twitter
    For Quick Alerts
    ALLOW NOTIFICATIONS  
    For Daily Alerts

    ಬಾರ್ ತೆಗೆದ ಬೆನ್ನಲ್ಲೇ ದುನಿಯಾ ವಿಜಯ್ ಇಂದ ಮತ್ತೊಂದು ಮನವಿ

    |

    ಇಂದು ರಾಜ್ಯದಾದ್ಯಂತ ಬಾರ್‌ಗಳನ್ನು ತೆರೆಯಲಾಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮಧ್ಯೆಯೇ ನಟ ದುನಿಯಾ ವಿಜಯ್ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿದ್ದಾರೆ.

    Recommended Video

    ಕೊರೊನ ಬಂದ್ರೆ ಸಾಯೋಲ್ಲ ಹೆದರಬೇಡಿ. | Duniya Vijay | Beatcorona | Filmibeat Kannada

    ಬಾರ್ ತೆರೆಯಲು ಅನುಮತಿ ಕೊಟ್ಟಿರುವ ಕಾರಣಕ್ಕೆಂದೇ ದುನಿಯಾ ವಿಜಯ್ ಹೊಸ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

    ಇಂದು ಬಾರ್ ಗಳನ್ನೇ ತೆರೆಯಲಾಗಿದೆ. ಸರದಿ ನಿಲ್ಲುವವರಿಗೆ ಐದಡಿ ದೂರ ನಿಲ್ಲಲು ಸೂಚಿಸಲಾಗಿದೆ, ಅಂತೆಯೇ ಜಿಮ್‌ಗಳನ್ನು ಸಹ ತೆರೆಯಲು ಅವಕಾಶ ಮಾಡಿಕೊಡಿ ಎಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ ದುನಿಯಾ ವಿಜಯ್.

    ''ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳುತ್ತೇವೆ ''

    ''ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳುತ್ತೇವೆ ''

    ''ಜಿಮ್ ನಲ್ಲಿ ಏಳಡಿಯಷ್ಟೇ ಅಂತರ ಇಟ್ಟುಕೊಳ್ಳುತ್ತೇವೆ. ಸ್ಯಾನಿಟೈಸರ್ ಬಳಸುತ್ತೇವೆ. ಹೈಜಿನಿಕ್ ಆಗಿ ಇರಿಸುತ್ತೇವೆ.‌ ಮೆಡಿಕಲ್ ಚೆಕಪ್ ಕೂಡ ನಡೆಯಲಿ. ಒಂದು ಬಾರಿಗೆ ಇಷ್ಟೇ ಮಂದಿ ಎಂದು ನಿಗದಿಗೊಳಿಸುತ್ತೇವೆ. ಹಾಗಾಗಿ ದಯವಿಟ್ಟು ಜಿಮ್ ಓಪನ್ ಮಾಡಲು ಅನುಮತಿ ಕೊಡಿ" ಎನ್ನುವುದು ನನ್ನ ಪರಿಚಿತ ಜಿಮ್ ಮಾಲೀಕರು ಮನವಿಯಾಗಿದೆ. ದಯವಿಟ್ಟು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ನಾನು ಕೂಡ ವಿನಂತಿಸಿಕೊಳ್ಳುತ್ತೇನೆ'' ಎಂದು ದುನಿಯಾ ವಿಜಯ್ ಮನವಿ ಮಾಡಿದ್ದಾರೆ.

    ''ಕಟ್ಟಡದ ಬಾಡಿಗೆ, ಸಾಲಗಳು ಏರುತ್ತಲೇ ಇವೆ''

    ''ಕಟ್ಟಡದ ಬಾಡಿಗೆ, ಸಾಲಗಳು ಏರುತ್ತಲೇ ಇವೆ''

    ''ಜಿಮ್ ತರಬೇತಿ ನೀಡುವ ಕಟ್ಟಡದ ಬಾಡಿಗೆ ಒಂದೆಡೆಯಾದರೆ, ವ್ಯಾಯಾಮಕ್ಕೆ ಬೇಕಾದ ಸಲಕರಣೆಗಳನ್ನು ಕೊಳ್ಳಲು ಬ್ಯಾಂಕ್ ನಿಂದ ಸಾಲ ತೆಗೆದವರಿದ್ದಾರೆ. ಇದೆಲ್ಲವನ್ನೂ ಗಮನಿಸಿ ಸರ್ಕಾರ ಆದಷ್ಟು ಬೇಗ ಜಿಮ್ ಟ್ರೈನಿಂಗ್ ಸೆಂಟರ್ ಗಳನ್ನು ಚಲಾವಣೆ ಮಾಡಲು ಪರವಾನಗಿ ನೀಡಬೇಕೆಂದು ಮನವಿ ಮಾಡುತ್ತೇನೆ'' ಎಂದಿದ್ದಾರೆ ದುನಿಯಾ ವಿಜಯ್.

    ತರಬೇತಿ ನೀಡಿದವರ ಋಣವೇ ಕಾರಣ

    ತರಬೇತಿ ನೀಡಿದವರ ಋಣವೇ ಕಾರಣ

    ಇದರಲ್ಲಿ ನನ್ನ ಸ್ವಾರ್ಥವೇನೂ ಇಲ್ಲ. ಯಾಕೆಂದರೆ ನಾನು ಅಥವಾ ನಮ್ಮ ಸ್ಟಾರ್ ಗಳು ತಮ್ಮ ಮನೆಯಲ್ಲೇ ಜಿಮ್ ಮಾಡಬಲ್ಲರು. ಆದರೆ ನಮಗೆ ಆರಂಭದಲ್ಲಿ ತರಬೇತಿ ನೀಡಿದ ತರಬೇತುದಾರರ ಬಗ್ಗೆ ಇರುವ ಋಣ ಈ ವಿನಂತಿಗೆ ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ.

    ಹೊರಗೆ ಕಂಡಷ್ಟು ಆರ್ಥಿಕವಾಗಿ ಶಕ್ತಿವಂತರಲ್ಲ

    ಹೊರಗೆ ಕಂಡಷ್ಟು ಆರ್ಥಿಕವಾಗಿ ಶಕ್ತಿವಂತರಲ್ಲ

    ಜಿಮ್ ದೇಹದ ಮಂದಿ ಹೊರಗೆ ಕಂಡಷ್ಟು ಶಕ್ತಿವಂತರೇನಲ್ಲ. ಆದರೆ ಒಂದು ಸಿಕ್ಸ್ ಪ್ಯಾಕ್ ಬರಿಸಲು ನಾವು ಪಡುವ ಶ್ರಮದ ನನಗೆ ಚೆನ್ನಾಗಿ ಗೊತ್ತು. ನಾನು ಬಿಡಿ, ದೇವರ ದಯೆಯಿಂದ ನಟನಾಗಿ ಅವಕಾಶ ಪಡೆದಿದ್ದೇನೆ. ಆದರೆ ಸಾಮಾನ್ಯ ಜಿಮ್ ಟ್ರೈನರ್ ಗಳು ಒಂದು ತಿಂಗಳು ಜಿಮ್ ಮುಚ್ಚಿದಾಗ ಪಡೋ ಕಷ್ಟ ಕಲ್ಪನೆಗೂ ಕಷ್ಟ! ಯಾಕೆಂದರೆ ಅಲ್ಲಿಗೆ ಬರುವವರೆಲ್ಲ ವರ್ಷಾನುಗಟ್ಟಲೆ ಬರುವ ಭರವಸೆಯಿಲ್ಲ.‌ ಮೂರೇ ದಿನಕ್ಕೆ ಗುಡ್ ಬೈ ಹೇಳುವವರೇ ಹೆಚ್ಚು! ಕಳೆದ ಒಂದೂವರೆ ತಿಂಗಳಿಂದ ಅದು ಕೂಡ ಇಲ್ಲವಾಗಿದೆ ಎಂದು ಜಿಮ್ ಟ್ರೈನರ್‌ಗಳ ಕಷ್ಟದ ಬಗ್ಗೆ ವಿವರಿಸಿದ್ದಾರೆ ದುನಿಯಾ ವಿಜಯ್.

    English summary
    Actor Duniya Vijay request Karnataka government to give permission to open Jim. He said Gym trainers were in deep problem.
    Monday, May 4, 2020, 20:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X