For Quick Alerts
  ALLOW NOTIFICATIONS  
  For Daily Alerts

  ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಆರೋಗ್ಯ ಗಂಭೀರ

  |

  ಕನ್ನಡ ಚಲನಚಿತ್ರ ನಟ ದುನಿಯಾ ವಿಜಯ್ ಅವರ ತಾಯಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ವಿಜಯ್ ತಾಯಿ ನಾರಾಯಣಮ್ಮ ಹಾಸಿಗೆ ಹಿಡಿದಿದ್ದಾರೆ.

  ನನ್ನ ತಾಯಿ ಉಳಿಯೋದು ಕಷ್ಟ !! | Duniya Vijay about his Mother | Filmibeat Kannada

  ವೈದ್ಯರು ಖುದ್ದು ಮನೆಗೆ ಬಂದು ವಿಜಯ್ ಅವರ ತಾಯಿಯ ಆರೋಗ್ಯ ವಿಚಾರಿಸಿ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ದಿನದಿಂದ ದಿನಕ್ಕೆ ನಾರಾಯಣಮ್ಮನ ಆರೋಗ್ಯ ಕ್ಷೀಣಿಸುತ್ತಿದೆ ವಿನಃ ಸುಧಾರಣೆ ಕಾಣ್ತಿಲ್ಲ ಎಂದು ತಿಳಿದು ಬಂದಿದೆ.

  ಕೊರೊನಾ ಗೆದ್ದ ದುನಿಯಾ ವಿಜಯ್ ಪೋಷಕರು: ನಟನಿಗೂ ಸಿಕ್ಕಿಲ್ಲ ಆಸ್ಪತ್ರೆ ಬೆಡ್ಕೊರೊನಾ ಗೆದ್ದ ದುನಿಯಾ ವಿಜಯ್ ಪೋಷಕರು: ನಟನಿಗೂ ಸಿಕ್ಕಿಲ್ಲ ಆಸ್ಪತ್ರೆ ಬೆಡ್

  ಅಮ್ಮನ ಆರೋಗ್ಯ ಕುರಿತು ದುನಿಯಾ ವಿಜಯ್ ಸಹ ಪ್ರತಿಕ್ರಿಯಿಸಿದ್ದು, ''ಅಮ್ಮನಿಗೆ ಬ್ರೇನ್ ಸ್ಟ್ರೋಕ್ ಆಗಿದ್ದ ಕಾರಣ ಆರೋಗ್ಯ ತೀವ್ರ ಹದಗೆಟ್ಟಿದೆ. ಕೊರೊನಾದಿಂದ ಚೇತರಿಕೆ ಕಂಡ ಮೇಲೆ ಸಮಸ್ಯೆ ಎಲ್ಲಾ ಬಗೆಹರಿಯಿತು ಎಂದುಕೊಂಡಿದ್ವಿ. ಆದರೆ, ಈ ರೀತಿ ಮತ್ತೊಮ್ಮೆ ಸಮಸ್ಯೆ ಬಂದಿದೆ. ಪ್ರತಿದಿನ ಮನೆಗೆ ಬಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಸುಧಾರಣೆ ಕಾಣ್ತಿಲ್ಲ. ತಾಯಿ ಮತ್ತೆ ಸಿಗಲ್ಲ, ಅವರು ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದಷ್ಟೇ ನನ್ನ ಆಸೆ'' ಎಂದು ಹೇಳಿಕೊಂಡಿದ್ದಾರೆ.

  ಅಂದ್ಹಾಗೆ, ಕೆಲವು ದಿನಗಳ ಹಿಂದೆಯಷ್ಟೇ ದುನಿಯಾ ವಿಜಯ್ ಅವರ ತಾಯಿ ಮತ್ತು ತಂದೆಗೆ ಕೋವಿಡ್ ಸೋಂಕು ತಗುಲಿತ್ತು. ಮನೆಯಲ್ಲಿ ಕ್ವಾರಂಟೈನ್ ಮಾಡಿ, ಸ್ವತಃ ದುನಿಯಾ ವಿಜಯ್, ಪತ್ನಿ ಕೀರ್ತಿ ಹಾಗೂ ಮಕ್ಕಳು ಆರೈಕೆ ಮಾಡಿದ್ದರು. ಆಮೇಲೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು.

  ಆದ್ರೀಗ, ತಾಯಿಯ ಆರೋಗ್ಯ ತೀವ್ರವಾಗಿ ಕೆಟ್ಟಿದೆ. ಆಸ್ಪತ್ರೆಗೆ ಸೇರಲು ನಾರಾಯಣಮ್ಮನಿಗೆ ಇಷ್ಟವಿಲ್ಲದ ಕಾರಣ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ವೈದ್ಯರು ಪ್ರತಿದಿನ ಚಿಕಿತ್ಸೆ ಕೊಡ್ತಿದ್ದು, ಮತ್ತೆ ಆರೋಗ್ಯ ಸರಿಯಾಗುತ್ತೆ ಎಂಬ ವಿಶ್ವಾಸವನ್ನು ದುನಿಯಾ ವಿಜಯ್ ವ್ಯಕ್ತಪಡಿಸಿದ್ದಾರೆ.

  English summary
  Kannada Actor Duniya Vijay's mother Narayanamma Health Condition Is Serious.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X