For Quick Alerts
  ALLOW NOTIFICATIONS  
  For Daily Alerts

  'ಮಾಸ್ತಿಗುಡಿ' ಮುಗಿಯೋ ಮುನ್ನ 'ಉಸ್ತಾದ್' ಆದ ದುನಿಯಾ ವಿಜಿ

  By Suneetha
  |

  ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ 'ದನ ಕಾಯೋನು' ಚಿತ್ರದ ಸುದ್ದಿನೇ ಇಲ್ಲ. ಯೋಗರಾಜ್ ಭಟ್ರು ನಿರ್ದೇಶನ ಮಾಡಿರುವ 'ದನ ಕಾಯೋನು' ಅದ್ಯಾವಾಗ ತೆರೆಗೆ ಬರುತ್ತೇ ಅನ್ನೋ ಮಾಹಿತಿ ಕೂಡ ಇಲ್ಲ.

  ಈ ನಡುವೆ ದುನಿಯಾ ವಿಜಿ ಅವರು 'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯದಲ್ಲೇ ಇದೀಗ ಹೊಸದಾಗಿ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.[ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!]

  ಇಷ್ಟು ದಿನ ಮಾಧ್ಯಮದ ಮುಂದೆ ಕಾಣಿಸಿಕೊಳ್ಳದೇ ಇದ್ದ ದುನಿಯಾ ವಿಜಿ ಅವರು ಇದೀಗ ಹೊಸ ಸಿನಿಮಾದ ಮೂಲಕ ಮಾಧ್ಯಮದ ಮುಂದೆ ಬರಲಿದ್ದಾರೆ. ಅಂದಹಾಗೆ ಈ ದುನಿಯಾ ವಿಜಿ ಅವರ ಹೊಸ ಚಿತ್ರದ ಹೆಸರು 'ಉಸ್ತಾದ್'.

  ಚಿತ್ರದ ಟೈಟಲ್ ಹೀಗಿದೆ ಅಂದ ಮೇಲೆ ಕರಿಚಿರತೆ ವಿಜಯ್ ಅವರು ಕೂಡ ಅದೇ ಪಾತ್ರ ಮಾಡುತ್ತಾರೆ ಅಂತಾಯ್ತು. ಚಿತ್ರಕ್ಕೆ ಎಂ.ಎಸ್ ರಮೇಶ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ಇವರಿಬ್ಬರ ಜೋಡಿ 'ಶಂಕರ್ ಐ.ಪಿ.ಎಸ್' ಮತ್ತು 'ತಾಕತ್' ಚಿತ್ರದಲ್ಲಿ ಒಂದಾಗಿತ್ತು. ಇದೀಗ ಮತ್ತೆ 'ಉಸ್ತಾದ್' ಮೂಲಕ ಒಂದಾಗಿದ್ದಾರೆ.[ತಾನು ಸತ್ತರೂ ಅಭಿಮಾನಿಗಳನ್ನು ಬಿಡಲಾರೆ ಎಂದ ದುನಿಯಾ ವಿಜಿ]

  ಬರೀ ನಿರ್ದೇಶನ ಮಾತ್ರವಲ್ಲದೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ಬರೆದು ತಮ್ಮ ಎಂ.ಎಸ್.ಆರ್ ಎಂರ್ಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಒಟ್ನಲ್ಲಿ ಇಡೀ ಚಿತ್ರದ ಜವಾಬ್ದಾರಿಯನ್ನು ಎಂ.ಎಸ್ ರಮೇಶ್ ಅವರೇ ಹೊತ್ತಿದ್ದಾರೆ ಎಂದರೆ ತಪ್ಪಾಗ್ಲಿಕ್ಕಿಲ್ಲ.

  ದುನಿಯಾ ವಿಜಯ್ ಮತ್ತು ಎಂ.ಎಸ್ ರಮೇಶ್ ಕಾಂಬಿನೇಷನ್ ನ 'ಉಸ್ತಾದ್' ಚಿತ್ರದ ಮುಹೂರ್ತ ಸಮಾರಂಭ ಜೂನ್ 30 ರಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ.

  English summary
  Kannada Actor Duniya Vijay is almost thorough with his new film 'Mastigudi' and has silently signed a new film. The film has been titled as 'Ustad' and the film is being written and directed by M S Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X