twitter
    For Quick Alerts
    ALLOW NOTIFICATIONS  
    For Daily Alerts

    'ಭೀಮಾತೀರದಲ್ಲಿ' ಚಿತ್ರೀಕರಣ ವೇಳೆ ನಟ ವಿಜಿ ಮೇಲೆ ಹಲ್ಲೆಗೆ ಪ್ಲಾನ್ ಆಗಿತ್ತಂತೆ.!

    By Bharath Kumar
    |

    ಕಳೆದ ಒಂದು ವಾರದಿಂದ ರವಿಬೆಳಗೆರೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ. ವಿಚಾರಣೆ, ಕೋರ್ಟ್, ಆರೋಪ, ಪ್ರತ್ಯಾರೋಪಗಳ ಮಧ್ಯೆ ಈಗ ಹೊಸ ಕಥೆ ಜನ್ಮ ಪಡೆದುಕೊಂಡಿದೆ.

    'ಭೀಮಾತೀರದಲ್ಲಿ' ಚಿತ್ರದ ಚಿತ್ರೀಕರಣ ವೇಳೆ ನಟ ದುನಿಯಾ ವಿಜಯ್ ಅವರ ಮೇಲೆ ಹಲ್ಲೆ ಮಾಡಲು ಪ್ಲಾನ್ ಆಗಿತ್ತು. 'ಚಡಚಣ' ಗ್ಯಾಂಗ್ ಗೆ ವಿಜಿ ಮೇಲೆ ಹಲ್ಲೆ ಮಾಡುವಂತೆ ಪತ್ರಕರ್ತ ರವಿಬೆಳಗೆರೆ ಸೂಚನೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಷ್ಯವನ್ನ ಪತ್ರಕರ್ತ ಮಲಗೊಂಡ ಅವರ ಬಹಿರಂಗಪಡಿಸಿದ್ದಾರೆ ಎನ್ನಲಾಗಿತ್ತು.

    ಸುಪಾರಿ ಕೇಸ್ : ರವಿಬೆಳಗೆರೆಗೆ ಮಧ್ಯಂತರ ಜಾಮೀನು ಮಂಜೂರು

    ಆದ್ರೆ, ಈ ವಿಷ್ಯವನ್ನ ನಟ ವಿಜಯ್ ಮತ್ತು ಮಲಗೊಂಡು ಅವರಿಬ್ಬರು ತಳ್ಳಿ ಹಾಕಿದ್ದಾರೆ. ಅಷ್ಟಕ್ಕೂ, ಏನಿದು ದುನಿಯಾ ವಿಜಯ್ ಮತ್ತು ರವಿ ಬೆಳಗೆರೆ ಅವರ ಬಗ್ಗೆ ಹರಿದಾಡಿದ ಸುದ್ದಿ ಎಂದು ತಿಳಿಯಲು ಮುಂದೆ ಓದಿ.....

    ವಿಜಿ ಮೇಲೆ ಹಲ್ಲೆ ಮಾಡಲು ಪ್ಲಾನ್

    ವಿಜಿ ಮೇಲೆ ಹಲ್ಲೆ ಮಾಡಲು ಪ್ಲಾನ್

    'ಭೀಮಾತೀರದಲ್ಲಿ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಪತ್ರಕರ್ತ ರವಿಬೆಳಗೆರೆ ಅವರು, 'ಚಡಚಣ' ಗ್ಯಾಂಗ್ ನವರಿಗೆ ವಿಜಿ ಮೇಲೆ ಹಲ್ಲೆ ಮಾಡಿ ಎಂದು ಸೂಚಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಐದು ವರ್ಷದ ಬಳಿಕ ಈ ಇಂತಹ ಸುದ್ದಿ ಬಹಿರಂಗವಾಗಿದ್ದು, ಪತ್ರಕರ್ತ ಮಲಗೊಂಡ ಅವರು ಇದನ್ನ ಬಹಿರಂಗಪಡಿಸಿದ್ದಾರೆ ಎನ್ನಲಾಗಿತ್ತು.

    ಆರೋಪ ತಳ್ಳಿ ಹಾಕಿ ನಟ

    ಆರೋಪ ತಳ್ಳಿ ಹಾಕಿ ನಟ

    ಈ ಸುದ್ದಿಗೆ ಪ್ರತಿಕ್ರಿಯೆ ನೀಡಿದ ದುನಿಯಾ ವಿಜಯ್ ''ಇದೆಲ್ಲಾ ಸುಳ್ಳು'' ಎಂದು ಆರೋಪ ತಳ್ಳಿ ಹಾಕಿದ್ದಾರೆ. ''ನನ್ನ ಮತ್ತು ಅವರ (ಬೆಳಗೆರೆ) ನಡುವೆ ವಿವಾದ ಇದ್ದಿದ್ದು ಬರಿ ಸಿನಿಮಾ ವಿಚಾರಕ್ಕೆ ಮಾತ್ರ. ಅದು ಮುಗಿಯಿತು. ಆದ್ರೀಗ, ಈ ಸುದ್ದಿ ಎಲ್ಲಿಂದ ಬಂತು ಎನ್ನುವುದು ನನಗೆ ಗೊತ್ತಿಲ್ಲ ಎಂದು ಮಾಧ್ಯಮಗಳನ್ನ ಪ್ರಶ್ನಿಸಿದ್ದಾರೆ.

    ದುನಿಯಾ ವಿಜಿ ಹಲ್ಲೆಗೆ ರವಿ ಬೆಳಗೆರೆ ಯತ್ನ ಎಂಬ ಓಳು ಸುದ್ದಿ

    ಐದು ವರ್ಷದ ಹಿಂದಿನ ಕಥೆ ಈಗೇಕೆ?

    ಐದು ವರ್ಷದ ಹಿಂದಿನ ಕಥೆ ಈಗೇಕೆ?

    ''ನನಗೆ ಅವರಿಗೆ (ಬೆಳಗೆರೆ) ಸಿನಿಮಾ ಹೋರಾಟ ನಡೆದಿತ್ತು. ನಾನು ಬರೆದ ಪುಸ್ತಕ, ಸಿನಿಮಾ ಮಾಡಿದ್ದೀರಾ ಎನ್ನುವುದಕ್ಕೆ ಮಾತ್ರ ಈ ವಿವಾದವಾಗಿತ್ತು. ಶೂಟಿಂಗ್ ವೇಳೆ ಏನೂ ಆಗಿಲ್ಲ. ಐದು ವರ್ಷದ ನಂತರ ಈಗ ಯಾಕೆ ಆರೋಪ. ಇದು ಯಾವುದು ಗಲಾಟೆ ನಡೆದಿಲ್ಲ. ಈಗ ಅವರ ವೈಯಕ್ತಿಕ ಹೋರಾಟ ನಡೆಯುತ್ತಿದೆ. ಈ ವೇಳೆಯಲ್ಲಿ ಯಾಕೆ ಈ ವಿಷ್ಯ ತಂದ್ರು. ಇದು ಸುಳ್ಳು ಇರಬಹುದು ಅಲ್ವಾ ಎಂದು ವಿಜಿ ಹೇಳಿದ್ದಾರೆ.

    ಪತ್ರಕರ್ತ ಟಿ.ಕೆ ಮಲಗೊಂಡ ಹೇಳಿದ್ದೇನು

    ಪತ್ರಕರ್ತ ಟಿ.ಕೆ ಮಲಗೊಂಡ ಹೇಳಿದ್ದೇನು

    'ಭೀಮಾತೀರಾದಲ್ಲಿ' ಸಿನಿಮಾ ವೇಳೆ ವಿಜಿ ಹಾಗೂ ಬೆಳಗೆರೆ ಮಧ್ಯೆ ಮನಸ್ತಾಪ ಇತ್ತು. ಅದು ಆಗಲೇ ಬಗೆಹರಿಯಿತು. ಆದ್ರೆ, ಹಲ್ಲೆ ಮಾಡಲು ಹೇಳಿದ್ದರು ಎಂಬ ಸುದ್ದಿ ನಾನು ಹೇಳಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ'' ಎಂದರು. ಕೊನೆಗೆ ಇದೆಲ್ಲಾ ಬರಿ ವದಂತಿ ಎಂದು ತಣ್ಣಗಾಯಿತು.

    English summary
    Journalist Ravi Belagere directs Chadachan gang to assault on Actor Duniya Vijay during Bheema Teeradalli Kannada cinema shooting in Vijayapura: Alleges TK Malagonda, This fake news roaming around from Wednesday morning. Finally Duniya Vjay and Malagonda Denies rumor.
    Wednesday, December 13, 2017, 19:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X