twitter
    For Quick Alerts
    ALLOW NOTIFICATIONS  
    For Daily Alerts

    ಸಿಎಂ ಯಡಿಯೂರಪ್ಪಗೆ ನಟ ದುನಿಯಾ ವಿಜಯ್ ಧನ್ಯವಾದ ತಿಳಿಸಿದ್ದೇಕೆ?

    |

    ನಟ ದುನಿಯಾ ವಿಜಯ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ್ದಾರೆ. ಬಾರ್ ಗಳನ್ನು ತೆರೆದ ಬೆನ್ನಲ್ಲೆ ಜಿಮ್ ಗಳನ್ನು ತೆರೆಯುವಂತೆ ನಟ ದುನಿಯಾ ವಿಜಯ್ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಸದ್ಯ ಜಿಮ್ ತೆರೆಯಲು ಸರ್ಕಾರ ಮನಸ್ಸು ಮಾಡಿರುವ ಕಾರಣ, ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.

    Recommended Video

    ಅಂದು ವೇಶ್ಯೆ ಯಾಗಿದ್ದವಳು ಇಂದು ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್..? | Shagufta Rafique

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ದುನಿಯಾ ವಿಜಿ, ''ಜಿಮ್ ಟ್ರೈನರುಗಳ ಕಷ್ಟ ಯಾವ ಮಟ್ಟದಲ್ಲಿದೆ ಎನ್ನುವುದರ ಬಗ್ಗೆ ನಾನು ಇತ್ತೀಚೆಗಷ್ಟೇ ಎರಡೆರಡು ಬಾರಿ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದೇನೆ. ನಾನು ಒಬ್ಬ ಮಾಜಿ ಜಿಮ್ ಟ್ರೈನರ್ ಆಗಿ ಅವರು ಪ್ರಸ್ತುತ ಎದುರಿಸುವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ವಿವರವಾಗಿ ಬರೆದಿದ್ದೆ. ಅದು ಮಾನ್ಯ ಮುಖ್ಯಮಂತ್ರಿಯವರಿಗೆ ನೀಡಿದ ಮನವಿಯೂ ಆಗಿತ್ತು.'' ಎಂದಿದ್ದಾರೆ.

    ಬಾರ್ ತೆಗೆದ ಬೆನ್ನಲ್ಲೇ ದುನಿಯಾ ವಿಜಯ್ ಇಂದ ಮತ್ತೊಂದು ಮನವಿಬಾರ್ ತೆಗೆದ ಬೆನ್ನಲ್ಲೇ ದುನಿಯಾ ವಿಜಯ್ ಇಂದ ಮತ್ತೊಂದು ಮನವಿ

    "ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರು ಇದೇ ತಿಂಗಳ 18ರಿಂದ ಹೋಟೆಲ್ ಜತೆಗೆ ಜಿಮ್ ಟ್ರೈನಿಂಗ್ ಸೆಂಟರ್ ಗಳನ್ನು ಕೂಡ ತೆರೆಯಲು ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಈ ಸಕಾರಾತ್ಮಕ ಸ್ಪಂದನೆಗೆ ನಾಡಿನ ಎಲ್ಲ ಜಿಮ್ ಟ್ರೈನರ್ ಗಳ ಪರವಾಗಿ ಕೋಟಿ ವಂದನೆಗಳು. ಅದೇ ಸಂದರ್ಭದಲ್ಲಿ ಜಿಮ್ ಟ್ರೈನರುಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಕಳಕಳಿಯ ಅಪೇಕ್ಷೆ. ವಂದನೆಗಳು.'' ಎಂದು ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    Actor Duniya Vijay Thanks To CM Yediyurappa

    ಕೆಲ ದಿನಗಳ ಹಿಂದೆ ದುನಿಯಾ ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ಜಿಮ್‌ ಟ್ರೈನರ್ ಗಳ ಕಷ್ಟದ ಬಗ್ಗೆ ತಿಳಿಸಿದ್ದರು. ಜಿಮ್‌ ತೆರೆಯಲು ಅವಕಾಶ ನೀಡಬೇಕು ಎಂದಿದ್ದರು. ಈಗ ಸರ್ಕಾರ ಜಿಮ್‌ ತೆರೆಯಲು ಸಮ್ಮತಿ ನೀಡಲು ನಿರ್ಧಾರ ಮಾಡಿದೆ.

    ಮೇ 17ರಂದು ಮೂರನೇ ಹಂತದ ಲಾಕ್ಡೌನ್ ಮುಕ್ತಾಯವಾಗಲಿದ್ದು, ಜಿಮ್, ಫಿಟ್ನೆಸ್ ಕೇಂದ್ರ, ಗಾಲ್ಫ್ ಕೋರ್ಸ್ ತೆರೆಯಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.

    English summary
    Actor Duniya Thanks to CM Yediyurappa for give permission to open gym.
    Thursday, May 14, 2020, 13:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X