For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗಕ್ಕೆ ದುನಿಯಾ ವಿಜಯ್ ಎಂಟ್ರಿ: ಖಳನಟನಾಗಿ ಸ್ಯಾಂಡಲ್‌ವುಡ್ ಕರಿಚಿರತೆ

  |

  ಕನ್ನಡದ ಕರಿಚಿರತೆ ದುನಿಯಾ ವಿಜಯ್ ಸದ್ಯ ಸಲಗ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಮೊದಲ ಬಾರಿಗೆ ನಿರ್ದೇಶಕನಾಗಿ ಬಂಪರ್ ಲಾಟರಿ ಹೊಡೆದಿದ್ದಾರೆ ದುನಿಯಾ ವಿಜಯ್. ದುನಿಯಾ ವಿಜಯ್ ಮೊದಲನೇ ಬಾರಿಗೆ ನಿರ್ದೇಶನ ಮಾಡಿದ ಸಲಗ ಸೂಪರ್ ಹಿಟ್ ಆಗಿದೆ. ಈ ಸಲಗ ದುನಿಯಾ ವಿಜಯ್ ಪಾಲಿಗೆ ಮತ್ತೆ ಅದೃಷ್ಟದ ಬಾಗಿಲು ತೆರೆದಿದೆ. ಇದೇ ಖುಷಿಯಲ್ಲಿ ನಟ ದುನಿಯಾ ವಿಜಯ್‌ ಈ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಹೌದು ದುನಿಯಾ ವಿಜಯ್ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಿ ನಡೆಸಿದ್ದಾರೆ.

  ಸಲಗ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ವಿಜಯ್ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ತಾತ್ಕಾಲಿಕವಾಗಿ ಚಿತ್ರಕ್ಕೆ ಎನ್‌ಬಿಕೆ 107 ಎನ್ನುವ ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿ ಆಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಇದು ದುನಿಯಾ ವಿಜಯ್ ಸಿನಿಮಾ ಜರ್ನಿಯಲ್ಲಿ ವಿಭಿನ್ನ ಪ್ರಯೋಗ ಅಂತ ಹೇಳಬಹುದು. ಯಾಕೆಂದರೆ ವಿಜಯ್‌ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಎದುರಿಗೆ , ಕನ್ನಡದ ನಟ ದುನಿಯಾ ವಿಜಯ್ ಅಬ್ಬರಿಸಲಿದ್ದಾರೆ. ಈ ಸುದ್ದಿ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಾ ಇದೆ. ಆದರೆ ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಹೊರ ಬರುವುದಕ್ಕೆ ಮಾತ್ರ ಬಾಕಿ ಇದೆ. ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

  ಈ ಚಿತ್ರ ಪಕ್ಕಾ ಮಾಸ್ ಎಂಟರ್ಟೈನರ್ ಸಿನಿಮಾ ಆಗಿರಲಿದೆ. ರಾಯಲಸೀಮಾದಲ್ಲಿ ನಡೆಯುವ ಕಥೆ ಇದು. ಈ ಚಿತ್ರದ ಕಥೆ ನೈಜ ಘಟನೆಯನ್ನು ಆಧರಿಸಿದ ಕಥೆ ಎನ್ನಲಾಗಿದೆ. ಚಿತ್ರಕ್ಕೆ ಎಸ್ ತಮನ್ ಸಂಗೀತ ನೀಡಲಿದ್ದು, ಸದ್ಯದಲ್ಲಿಯೇ ಸಿನಿಮಾ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ.

  ಇದು ದುನಿಯಾ ವಿಜಯ್ ಅಭಿಮಾನಿಗಳಿಗೆ ಖುಷಿ ತರುವ ಸಂಗತಿ. ಸಲಗ ಚಿತ್ರದ ಬಳಿಕಾ ದುನಿಯಾ ವಿಜಯ್ ಖಳನಾಯಕನಾಗಿ ತೆಲುಗಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕೇಲವ ಹೀರೋ ಆಗಿರುವುದು ಮುಖ್ಯವಲ್ಲ ಕಲಾವಿದಾಗಿ ಉಳಿಯುವುದು ಮುಖ್ಯ ಅನ್ನುವುದನ್ನು ನಟ ದುನಿಯಾ ವಿಜಯ್ ಸಾಬೀತು ಮಾಡಲು ಮುಂದಾಗಿದ್ದಾರೆ. ಕಲಾವಿದ ಅಂದ ಮೇಲೆ ಬರೀ ನಾಯಕ ಆಗಿ ಇರಬೇಕು ಅಂತ ಇಲ್ಲ. ಭಿನ್ನ ಪಾತ್ರಗಳಿಗೆ ಜೀವ ತುಂಬುವುದು ಕಲಾವಿದನ ತಾಕತ್ತು. ಅದನ್ನ ನಟ ದುನಿಯಾ ವಿಜಯ್ ಈಗಾಗಲೇ ಹಲವು ಪಾತ್ರಗಳಲ್ಲಿ ತೋರಿಸಿದ್ದಾರೆ. ಈಗ ಖಳನಟನಾಗಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

  ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಸದ್ಯ ಸಲಗ ಸಿನಿಮಾದ ಮೂಲಕ ಉತ್ತಮ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ. ಸಲಗ ಸಿನಿಮಾ ದುನಿಯಾ ವಿಜಯ್ ಅಂದು ಕೊಂಡ ರೀತಿಯಲ್ಲಿ ಸಕ್ಸಸ್ ಕಂಡು ದುನಿಯಾ ವಿಜಯ್ ಸಿನಿ ಜರ್ನಿಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ದುನಿಯಾ ಸಿನಿಮಾದ ಮೂಲಕ ಕರುನಾಡಿನ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದ ನಟ ದುನಿಯಾ ವಿಜಯ್, ಇದೀಗ ಸಲಗ ಬಳಿಕ ಟಾಲಿವುಡ್ ಎಂಟ್ರಿ ಕೊಡುವುದರ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

  Actor Duniya Vijay To Enter Tollywood

  ನಟ ದುನಿಯಾ ವಿಜಯ್ ಸಿನಿಮಾ ಜರ್ನಿ ರೋಚಕ ಎಂದು ಹೇಳಬಹುದು. ದುನಿಯಾ ವಿಜಯ್ ಸಿನಿಮಾರಂಗದಲ್ಲಿ ಗಾಡ್‌ ಫಾದರ್‌ ಇಲ್ಲದೆ ಏಕಾಂಗಿಯಾಗಿ ಬೆಳೆದು ನಿಂತಿರುವ ಒಂಟಿ ಸಲಗ. ನಾಯಕನಟನಾಗಿ ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅಂತಹ ದುನಿಯಾ ವಿಜಯ್ ಇದೀಗ ಸಲಗ ಚಿತ್ರದ ಮೂಲಕ ನಿರ್ದೇಶಕ ಆಗಿಯೂ ಸಕ್ಸಸ್ ಕಂಡಿದ್ದಾರೆ. ಇನ್ನು ದುನಿಯಾ ವಿಜಯ್ ವಿಭಿನ್ನ ಪಾತ್ರಗಳನ್ನು ಪ್ರಯೋಗ ಮಾಡಲು ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಈಗ ತೆಲುಗಿಗೆ ಎಂಟ್ರಿ ಕೊಡಲು ದುನಿಯಾ ವಿಜಯ್ ಸಜ್ಜಾಗಿದ್ದಾರೆ. ಅದು ಕೂಡ ವಿಲನ್ ಪಾತ್ರದಲ್ಲಿ ಎನ್ನುವುದು ವಿ‍ಶೇಷ.

  ಸದ್ಯಕ್ಕೆ ಈ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಾ ಇದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬೀಳ ಬೇಕು ಅಷ್ಟೇ. ಜೊತೆಗೆ ದುನಿಯಾ ವಿಜಯ್ ಪಾತ್ರದ ಶೇಡ್‌ ಹೇಗಿರಲಿದೆ, ಅವರ ಲುಕ್‌ ಹೇಗಿರಲಿದೆ. ಎಷ್ಟು ದಿನ ಶೂಟಿಂಗ್‌ನಲ್ಲಿ ಭಾಗಿ ಆಗುತ್ತಾರೆ. ಪ್ರಮುಖ ಖಳ ನಟನಾಗಿರುವುದರಿಂದ ಪಾತ್ರಕ್ಕಾಗಿ ಏನೆಲ್ಲಾ ತಯಾರಿ ನಡೆಸಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  English summary
  Actor Duniya Vijay To Play Antagonist In Tollywood

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X