»   »  'ಮುಂಗಾರು ಮಳೆ' ಗಣೇಶ್-'ದುನಿಯಾ' ವಿಜಯ್ ಗೆ ಒಳ್ಳೆ ಕಾಲ ಬಂದಾಯ್ತು

'ಮುಂಗಾರು ಮಳೆ' ಗಣೇಶ್-'ದುನಿಯಾ' ವಿಜಯ್ ಗೆ ಒಳ್ಳೆ ಕಾಲ ಬಂದಾಯ್ತು

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರು ಒಂದೇ ದಿನಗಳಲ್ಲಿ ಇಂಡಸ್ಟ್ರಿಗೆ ಬಂದವರು. ಅವಕಾಶಗಳಿಗಾಗಿ ಇಬ್ಬರು ಒಟ್ಟಿಗೆ ಗಾಂಧಿನಗರದಲ್ಲಿ ತಿರುಗಾಡಿದ್ದು ಉಂಟು. ಈಗ ಇಬ್ಬರು ಕೂಡ ಕನ್ನಡದ ಸ್ಟಾರ್ ನಟರು.

ಗಣೇಶ್ ಮತ್ತು ದುನಿಯಾ ವಿಜಯ್ ಇಬ್ಬರು ಕನ್ನಡ ಚಿತ್ರರಂಗ ಪ್ರವೇಶಿಸಿ ಸುಮಾರು 15 ವರ್ಷಗಳು ಕಳೆದಿವೆ. ಈ ಹದಿನೈದು ವರ್ಷದಲ್ಲಿ ತಮ್ಮದೇ ಆದ ಸ್ಟೈಲ್, ಆಕ್ಟಿಂಗ್, ಫ್ಯಾನ್ಸ್ ಹೀಗೆ ಬೆಳೆದು ನಿಂತಿದ್ದಾರೆ. ಇಷ್ಟು ದಿನ ಇಬ್ಬರ ಚಿತ್ರಗಳು ಪರಸ್ಪರ ಬಾಕ್ಸ್ ಆಫೀಸ್ ನಲ್ಲಿ ಕಾದಾಡಿತ್ತು. ಈಗ ಇಬ್ಬರು ಸೇರಿ ಒಂದು ಖುಷಿಯ ವಿಚಾರವನ್ನ ಹಂಚಿಕೊಂಡಿದ್ದಾರೆ. ಏನದು? ಮುಂದೆ ಓದಿ.....

ಮೊದಲ ಸಲ ಒಟ್ಟಿಗೆ ಹಾಡು ಹೇಳಿದರು

ಯೋಗರಾಜ್ ಭಟ್ ಅವರ ಬರೆದ GST ಕುರಿತಾದ ಹಾಡನ್ನ ದುನಿಯಾ ವಿಜಯ್ ಮತ್ತು ಗಣೇಶ್ ಇಬ್ಬರು ಒಟ್ಟಿಗೆ ಹಾಡಿದ್ದರು. ಇದುವರೆಗೂ ಇವರಿಬ್ಬರು ಒಟ್ಟಿಗೆ ಹಾಡಿಲ್ಲ, ಒಟ್ಟಿಗೆ ಅಭಿನಯಿಸಲ್ಲ.

ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್

ಒಂದೇ ಸಿನಿಮಾದಲ್ಲಿ ಅಭಿನಯ

GST ಹಾಡು ಕೇಳಲು ಬಂದಿದ್ದ ಮಾಧ್ಯಮದವರಿಗೆ ಗಣೇಶ್ ಹಾಗೂ ದುನಿಯಾ ವಿಜಯ್ ಹೊಸ ಸುದ್ದಿಯೊಂದನ್ನ ಕೊಟ್ಟರು. ವಿಜಿ ಮತ್ತು ಗಣೇಶ್ ಇಬ್ಬರು ಒಂದು ಸಿನಿಮಾ ಮಾಡಲು ಚಿಂತಿಸಿದ್ದು, ಆದಷ್ಟೂ ಬೇಗ ಈ ಚಿತ್ರದ ಬಗ್ಗೆ ತಿಳಿಸಲಿದ್ದಾರೆ. ಈ ಮೂಲಕ ಹಲವು ವರ್ಷಗಳ ಸ್ನೇಹಿತರು ಈಗ ತೆರೆ ಮೇಲೆ ಒಂದಾಗ್ತಿದ್ದಾರೆ.

ಗಣೇಶ್ 'ಆರೆಂಜ್' ಚಿತ್ರಕ್ಕಾಗಿ ಮತ್ತೆ ಒಂದಾದ ಯಶಸ್ವಿ ಜೋಡಿ

ಯಾರು ಈ ಚಿತ್ರವನ್ನ ಮಾಡಲಿದ್ದಾರೆ

ಗಣೇಶ್, ದುನಿಯಾ ವಿಜಯ್, ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ಹರಿಕೃಷ್ಣ ಎಲ್ಲರೂ ಒಂದೇ ತಂಡದ ಸದಸ್ಯರು. ಈಗಲೂ ಬಹುತೇಕ ಚಿತ್ರಗಳಲ್ಲಿ ಈ ಎಲ್ಲರೂ ಒಟ್ಟೊಟ್ಟಿಗೆ ಕೆಲಸ ಮಾಡುತ್ತಾರೆ. ಆದ್ರೀಗ, ಗಣೇಶ್ ಮತ್ತು ದುನಿಯಾ ವಿಜಯ್ ಒಟ್ಟಿಗೆ ಅಭಿನಯಿಸಲಿರುವ ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ, ಯಾರು ನಿರ್ಮಾಣ ಮಾಡಲಿದ್ದಾರೆ, ಎಂಬ ಕುತೂಹಲ ಕಾಡುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರ ನೆಚ್ಚಿನ ನಟ ಯಾರು?

ಅಂದು 'ಮುಂಗಾರು ಮಳೆ' ಮತ್ತು 'ದುನಿಯಾ'

ಯೋಗರಾಜ್ ಭಟ್ ನಿರ್ದೇಶನ 'ಮುಂಗಾರು ಮಳೆ' ಚಿತ್ರದ ಮೂಲಕ ಗಣೇಶ್ ನಾಯಕರಾದರು. ಅದೇ ಅಂತರದಲ್ಲಿ ತೆರೆಕಂಡ ಸೂರಿ ನಿರ್ದೇಶನದ 'ದುನಿಯಾ' ಚಿತ್ರದ ಮೂಲಕ ವಿಜಯ್ ನಾಯಕರಾದರು. ಎರಡು ಸಿನಿಮಾಗಳು ಶತದಿನ ಆಚರಿಸಿಕೊಂಡಿತ್ತು. ಇವರೆಡು ಚಿತ್ರಗಳು ಕನ್ನಡದ ಸಾರ್ವಕಾಲಿಕ ಸಿನಿಮಾ ಹಿಟ್ ಸಿನಿಮಾಗಳೆನಿಸಿಕೊಂಡಿವೆ.

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

English summary
Kannada Actor Ganesh and Kannada Actor Duniya Vijay Sharing Screen Space in Upcoming Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada