ಆಂಕರ್ ಗಣೇಶ್ 'ಸ್ಟಾರ್' ಆಗಿ ಇಂದಿಗೆ 13 ವರ್ಷ

ನಟ ಗಣೇಶ್ ಇಂದು ಗೋಲ್ಡನ್ ಸ್ಟಾರ್ ಆಗಿದ್ದಾರೆ. ಒಬ್ಬ ನಿರೂಪಕರಾಗಿದ್ದ ಗಣೇಶ್ ಹಿರೋ ಆಗಿ ಇಂದಿಗೆ 13 ವರ್ಷಗಳು ಕಳೆದಿವೆ.

ನಿರೂಪಕನಾಗಿ ಬಳಿಕ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸುತ್ತಿದ್ದ ಗಣೇಶ್ ಹೀರೋ ಆಗಿದ್ದು 'ಚೆಲ್ಲಾಟ' ಸಿನಿಮಾದಿಂದ. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 13 ವರ್ಷಗಳು ಕಳೆದಿವೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಗಣೇಶ್ ಸಂತಸ ಹಂಚಿಕೊಂಡಿದ್ದಾರೆ.

"ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಾ ಚಿತ್ರರಂಗಕ್ಕೆ ಬಂದ 19 ವರ್ಷಗಳು ಹಾಗೂ ನಾಯಕ ನಟನಾಗಿ 'ಚೆಲ್ಲಾಟ' ಆರಂಭಿಸಿದ 13 ವರ್ಷಗಳ ಸಿನಿ ಜರ್ನಿಯಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸಿ, ಹಾರೈಸಿದ ಚಿತ್ರರಂಗದ ಪ್ರತಿಯೊಬ್ಬರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ಪ್ರೀತಿಯ ಅಭಿಮಾನಿಗಳಿಗೂ ಧನ್ಯವಾದಗಳು. ನಿಮ್ಮ ಪ್ರೀತಿ, ಹಾರೈಕೆ ಸದಾ ಇರಲಿ" ಎಂದು ಧನ್ಯವಾದ ತಿಳಿಸಿದ್ದಾರೆ.

actor ganesh completes his 13 years in kannada movie industry as a hero

'ಚೆಲ್ಲಾಟ' ಚಿತ್ರದಿಂದ ಇಲ್ಲಿಯವರೆಗೆ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಗಣೇಶ್ ನಟಿಸಿದ್ದಾರೆ. 'ಮುಂಗಾರು ಮಳೆ', 'ಹುಡುಗಾಟ' 'ಚೆಲುವಿನ ಚಿತ್ತಾರ', 'ಕೃಷ್ಣ', 'ಗಾಳಿಪಟ' ರೀತಿಯ ಸಿನಿಮಾಗಳು ಗಣೇಶ್ ಗೆ ದೊಡ್ಡ ಹಿಟ್ ನೀಡಿವೆ.

ಗಣೇಶ್ ಅಭಿನಯದ '99' ಸಿನಿಮಾ ಮೇ 1 ರಂದು ಬಿಡುಗಡೆಯಾಗಲಿದೆ. ಇದು ತಮಿಳು ಭಾಷೆಯ '96' ಚಿತ್ರದ ರಿಮೇಕ್ ಆಗಿದೆ.

More from Filmibeat

English summary
Actor Ganesh completes his 13 years in kannada movie industry as a hero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X