Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಕರ್ ಗಣೇಶ್ 'ಸ್ಟಾರ್' ಆಗಿ ಇಂದಿಗೆ 13 ವರ್ಷ
ನಟ ಗಣೇಶ್ ಇಂದು ಗೋಲ್ಡನ್ ಸ್ಟಾರ್ ಆಗಿದ್ದಾರೆ. ಒಬ್ಬ ನಿರೂಪಕರಾಗಿದ್ದ ಗಣೇಶ್ ಹಿರೋ ಆಗಿ ಇಂದಿಗೆ 13 ವರ್ಷಗಳು ಕಳೆದಿವೆ.
ನಿರೂಪಕನಾಗಿ ಬಳಿಕ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸುತ್ತಿದ್ದ ಗಣೇಶ್ ಹೀರೋ ಆಗಿದ್ದು 'ಚೆಲ್ಲಾಟ' ಸಿನಿಮಾದಿಂದ. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 13 ವರ್ಷಗಳು ಕಳೆದಿವೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಗಣೇಶ್ ಸಂತಸ ಹಂಚಿಕೊಂಡಿದ್ದಾರೆ.
'ಫ್ರೆಂಡ್ಸ್ ಗ್ಯಾಂಗ್' ಪ್ರಭಾವ: ಗಣೇಶ್ ರನ್ನ ಗುರುತು ಹಿಡಿಯೋರೇ ಇರಲಿಲ್ಲ.!
"ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಾ ಚಿತ್ರರಂಗಕ್ಕೆ ಬಂದ 19 ವರ್ಷಗಳು ಹಾಗೂ ನಾಯಕ ನಟನಾಗಿ 'ಚೆಲ್ಲಾಟ' ಆರಂಭಿಸಿದ 13 ವರ್ಷಗಳ ಸಿನಿ ಜರ್ನಿಯಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸಿ, ಹಾರೈಸಿದ ಚಿತ್ರರಂಗದ ಪ್ರತಿಯೊಬ್ಬರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ಪ್ರೀತಿಯ ಅಭಿಮಾನಿಗಳಿಗೂ ಧನ್ಯವಾದಗಳು. ನಿಮ್ಮ ಪ್ರೀತಿ, ಹಾರೈಕೆ ಸದಾ ಇರಲಿ" ಎಂದು ಧನ್ಯವಾದ ತಿಳಿಸಿದ್ದಾರೆ.
'ಚೆಲ್ಲಾಟ' ಚಿತ್ರದಿಂದ ಇಲ್ಲಿಯವರೆಗೆ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಗಣೇಶ್ ನಟಿಸಿದ್ದಾರೆ. 'ಮುಂಗಾರು ಮಳೆ', 'ಹುಡುಗಾಟ' 'ಚೆಲುವಿನ ಚಿತ್ತಾರ', 'ಕೃಷ್ಣ', 'ಗಾಳಿಪಟ' ರೀತಿಯ ಸಿನಿಮಾಗಳು ಗಣೇಶ್ ಗೆ ದೊಡ್ಡ ಹಿಟ್ ನೀಡಿವೆ.
ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಾ ಚಿತ್ರರಂಗಕ್ಕೆ ಬಂದ 19 ವರ್ಷಗಳು ಹಾಗೂ ನಾಯಕ ನಟನಾಗಿ 'ಚೆಲ್ಲಾಟ'ಆರಂಭಿಸಿದ 13 ವರ್ಷಗಳ ಸಿನಿಜರ್ನಿಯಲ್ಲಿ ಪ್ರತ್ಯಕ್ಷ,ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸಿ,ಹಾರೈಸಿದ ಚಿತ್ರರಂಗದ ಪ್ರತಿಯೊಬ್ಬರಿಗೂ,ಮಾಧ್ಯಮ ಮಿತ್ರರಿಗೂ ಹಾಗೂ ಪ್ರೀತಿಯ ಅಭಿಮಾನಿಗಳಿಗೂ ಧನ್ಯವಾದಗಳು. ನಿಮ್ಮ ಪ್ರೀತಿ,ಹಾರೈಕೆ ಸದಾ ಇರಲಿ pic.twitter.com/cDRzYDDj05
— Ganesh (@Official_Ganesh) April 21, 2019
ಗಣೇಶ್ ಅಭಿನಯದ '99' ಸಿನಿಮಾ ಮೇ 1 ರಂದು ಬಿಡುಗಡೆಯಾಗಲಿದೆ. ಇದು ತಮಿಳು ಭಾಷೆಯ '96' ಚಿತ್ರದ ರಿಮೇಕ್ ಆಗಿದೆ.