ಚಮಕ್ ಜೋಡಿಯ ‘ಸಖತ್’ ಟೀಸರ್ ರಿಲೀಸ್!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ನಲ್ಲಿ ಬರ್ತಿರೋ ನಿರೀಕ್ಷೆಯುಳ್ಳ ಸಿನಿಮಾ "ಸಖತ್". ಪೋಸ್ಟರ್ ಹಾಗೂ ಹಾಡುಗಳ ಮೂಲಕವ ಹೊಸತನ ತೋರಿರುವ ಸಖತ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಟ ಗಣೇಶ್ ಸ್ಟೈಲೀಶ್ ಲುಕ್, ನಿರ್ದೇಶಕ ಸುನಿ ಡೈಲಾಗ್ ಕಿಕ್, ಜೂಡಾ ಸ್ಯಾಂಡಿ ಮ್ಯೂಸಿಕ್, ಸಂತೋಷ್ ಛಾಯಾಗ್ರಹಣ, ನಿಶ್ವಿಕಾ ನಾಯ್ಡು ಆಕ್ಟಿಂಗ್ ಟೀಸರ್‌ನಲ್ಲಿ ಸಿನಿಮಾದ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದೆ.
ಮೊದಲ ಬಾರಿಗೆ ನಟ ಗಣೇಶ್ ಅಂಧ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಿನ್ನ ಸಂಭಾಷಣೆಯಿಂದಲೇ ಭಿನ್ನವಾಗಿ ನಿಲ್ಲುವ ಸುನಿ ಡೈಲಾಗ್ಸ್ ಬಗ್ಗೆ ಎರಡು ಮಾತಿಲ್ಲ. ಈ ಕಾಮಿಡಿ ಕಥಾ ಹಂದರದಲ್ಲಿ ಕಾಮಿಡಿ ಡೈಲಾಗ್ ಕಿಕ್ ಹೇಗಿರಲಿದೆ ಅನ್ನೋದನ್ನು ಟೀಸರ್ ಪರಿಚಯಿಸಿದೆ. ಟೀಸರ್‌ನಲ್ಲಿ ಬರುವ ಪಂಚಿಂಗ್ ಡೈಲಾಗ್‌ಗಳೇ ನೋಡುಗರ ಗಮನ ಸೆಳೆದಿವೆ. ರಿಲೀಸ್ ಆದ ಕೆಲ ಗಂಟೆಗಳಲ್ಲಿಯೇ ಸಖತ್ ವೈರಲ್ ಆಗುತ್ತಿದೆ ಸಖತ್ ಚಿತ್ರದ ಟೀಸರ್.
ಸಿಂಪಲ್ ಸುನಿ ಓಂಕಾರ ಹಾಕಿರುವ ಸಖತ್ ಸಿನಿಮಾದಲ್ಲಿ ಮುಗುಳುನಗೆ ಹುಡ್ಗ ಗಣಿ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಗೆ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ. ಇದೊಂದು ಕಾಮಿಡಿ ಜೊತೆಗೆ ಕ್ರೈಮ್ ಥಿಲ್ಲರ್ ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಮರ್ಡರ್ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾವನ್ನು ಎಣೆಯಲಾಗಿದೆ.

ನಟ ಗಣೇಶ್ ಸಿನಿಮಾ ಅಂದ ಮೇಲೆ ಅಲ್ಲಿ ಕಾಮಿಡಿ ಇರಲೇ ಬೇಕು. ಟೀಸರ್ ಆರಂಭದಲ್ಲಿ ಕಟಕಟೆಯಲ್ಲಿ ನಿಂತು ಸತ್ಯವನ್ನೇ ಹೇಳುತ್ತೇನೆ ಎಂದು ಪ್ರಮಾಣ ಮಾಡೋ ಬಾಲು, ಹೇಳೋದೆಲ್ಲಾ ಸುಳ್ಳು ಇರಬೇಕು ಅನ್ನೋ ಸಂಶಯ ಹುಟ್ಟುತ್ತದೆ. ಕುರುಡನ ಹಾಗೆ ನಾಟಕ ಮಾಡೋ ಈ ಪಾತ್ರ ಬಾಲಿವುಡ್‌ನ ಅಂಧಾದುನ್ ಚಿತ್ರದ ರಿಮೇಕ್ ಅನ್ನೋ ಗಾಸಿಪ್ ಕೂಡ ಹಬ್ಬಿತ್ತು. ಅದಕ್ಕೂ ಸಿಂಪಲ್ ಸುನಿ ಟೀಸರ್‌ನಲ್ಲೇ ಉತ್ತರ ಕೊಟ್ಟಿದ್ದಾರೆ. ಇದು ಆ ಸಿನಿಮಾ ಅನ್ನೋದನ್ನ ಹೇಳಿದ್ದಾರೆ.
ಕೆ ವಿ ಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಖತ್ ಸಿನಿಮಾವನ್ನು ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸಖತ್ ಸಿನಿಮಾ ಸೆನ್ಸಾರ್ ಮುಗಿಸಿದೆ. ನವೆಂಬರ್ 12ರಂದು ಥಿಯೇಟರ್ ಅಂಗಳಕ್ಕೆ ಬರಲು ಸಖತ್ ಸಿದ್ಧವಾಗಿದೆ.


Click it and Unblock the Notifications











