For Quick Alerts
  ALLOW NOTIFICATIONS  
  For Daily Alerts

  ಕಾಡು ಹೊಕ್ಕು ಚಿರತೆ ನೋಡಿ ಥ್ರಿಲ್ ಆದ ಗಣೇಶ್

  |

  ನಟ ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ ಸಮೇತ ಅರಣ್ಯಕ್ಕೆ ಹೋಗಿದ್ದರು. ಈ ಸಮಯ ಚಿರತೆ ನೋಡಿ ತ್ರಿಲ್ ಆಗಿದ್ದಾರೆ ಗಣೇಶ್. ಚಿರತೆ ಎದುರು ಸಿಕ್ಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಅಡ್ಡ ಬಂದ ಚಿರತೆ ನೋಡಿ ಶಾಕ್ ಆದ ಗಣೇಶ್

  ಕುಟುಂಬವನ್ನು ಕರೆದುಕೊಂಡು ಕಬಿನಿ ಜಲಾಶಯಕ್ಕೆ ಹೋಗಿದ್ದರು ಗಣೇಶ್. ಈ ಸಮಯ ಕಾಡಿಗೆ ಸಫಾರಿಗೆ ತೆರಳಿದ್ದಾರೆ. ಸಫಾರಿ ವೇಳೆ ಚಿರತೆಯೊಂದಿಗೆ ಗಣೇಶ್‌ಗೆ ಎದುರಾಗಿದೆ.

  ಸಫಾರಿಯಲ್ಲಿ ತಮಗೆ ಎದುರಾದ ಚಿರತೆ ವಿಡಿಯೋ ಮಾಡಿರುವ ಗಣೇಶ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗಣೇಶ್ ಖುಷಿಯಿಂದ, ಆಶ್ಚರ್ಯದಿಂದ ಚಿರತೆಯನ್ನು ನೋಡುತ್ತಿರುವ, ಮಗನಿಗೆ ತೋರಿಸುತ್ತಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗಣೇಶ್ ಮಗ ವಿಹಾನ್ ಸಹ ಇದ್ದಾರೆ.

  ಕನ್ನಡದ ಹಲವು ನಟರು ಬಿಡುವಿನ ಸಮಯವನ್ನು ಪ್ರಕೃತಿ ಮಡಿಲಲ್ಲಿ ಕಳೆವ ಅಭ್ಯಾಸವಿಟ್ಟುಕೊಂಡಿದ್ದಾರೆ. ದರ್ಶನ್, ಚಿಕ್ಕಣ್ಣ, ದುನಿಯಾ ವಿಜಯ್, ನಟ ಪುನೀತ್ ರಾಜ್‌ಕುಮಾರ್ ಸಹ ಬಿಡುವು ಸಿಕ್ಕಾಗ ಅರಣ್ಯಗಳ ಕಡೆಗೆ ಧಾವಿಸಿಬಿಡುತ್ತಾರೆ. ಶಿವರಾಜ್ ಕುಮಾರ್ ಸಹ ಅರಣ್ಯಗಳು, ಅರಣ್ಯ ಜೀವಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ.

  ಫ್ಯಾಮಿಲಿ ಮ್ಯಾನ್ ಗಣೇಶ್ ಆಗಾಗ್ಗೆ ಕುಟುಂಬದೊಂದಿಗೆ ಹೊಸ ಸಂಚಾರ ಮಾಡುತ್ತಿರುತ್ತಾರೆ. ಮಕ್ಕಳಿಗೆ ಹೊಸ ವಿಷಯಗಳ ಪರಿಚಯ ಮಾಡಿಸುತ್ತಿರುತ್ತಾರೆ. ಹಿಂದೊಮ್ಮೆ ಮಗನಿಗಾಗಿ ನಾಟಕದ ವೇಷ ಹಾಕಿಕೊಂಡು ನಾಟಕ ಮಾಡಿ ತೋರಿಸಿದ್ದರು ಗಣೇಶ್.

  'ಗಾಳಿಪಟ 2' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ

  'ಗಾಳಿಪಟ 2' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ

  ನಟ ಗಣೇಶ್ ಹಲವು ಹೊಸತುಗಳೊಂದಿಗೆ ಪ್ರೇಕ್ಷಕರ ಮುಂದೆ ಆಗಮಿಸಲಿದ್ದಾರೆ. ಗಣೇಶ್ ನಟನೆಯ 'ಗಾಳಿಪಟ 2' ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ದಿಗಂತ್ ಹಾಗೂ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಟಿಸುತ್ತಿದ್ದಾರೆ. ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದು, ಹಳೆಯ 'ಗಾಳಿಪಟ' ಮ್ಯಾಜಿಕ್ ಪುನರಾವರ್ತನೆ ಆಗುತ್ತದೆಯೇ ನೋಡಬೇಕಿದೆ.

  ಸಿಂಪಲ್ ಸುನಿ ನಿರ್ದೇಶನದ 'ಸಖತ್' ಸಿನಿಮಾ

  ಸಿಂಪಲ್ ಸುನಿ ನಿರ್ದೇಶನದ 'ಸಖತ್' ಸಿನಿಮಾ

  ಸಿಂಪಲ್ ಸುನಿ ನಿರ್ದೇಶಿಸಿರುವ 'ಸಖತ್' ಸಹ ಅಂತಿಮ ಹಂತದಲ್ಲಿದೆ. ಸಿನಿಮಾದ ಟ್ರೇಲರ್ ಹಾಗೂ ಬಿಡುಗಡೆ ದಿನಾಂಕ ಘೋಷಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಮುಂದೂಡಲಾಯಿತು. ಸಿನಿಮಾದಲ್ಲಿ ಸಖತ್ ಅಂಧ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ನಾಯಕಿ. ಸಿನಿಮಾದಲ್ಲಿ ಅವರದ್ದು ಶಿಕ್ಷಕಿಯ ಪಾತ್ರ. ಈ ಸಿನಿಮಾದಲ್ಲಿ ಗಣೇಶ್‌ರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ಗಣೇಶ್ ಪುತ್ರ ವಿಹಾನ್ ನಟಿಸಿದ್ದಾರೆ. ವಿಹಾನ್‌ರ ಪೋಸ್ಟರ್‌ಗಳನ್ನು ಚಿತ್ರತಂಡ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದೆ.

  'ತ್ರಿಬಲ್ ರೈಡಿಂಗ್' ಸಿನಿಮಾದಲ್ಲಿ ನಟನೆ

  'ತ್ರಿಬಲ್ ರೈಡಿಂಗ್' ಸಿನಿಮಾದಲ್ಲಿ ನಟನೆ

  'ತ್ರಿಬಲ್ ರೈಡಿಂಗ್' ಹೆಸರಿನ ಸಿನಿಮಾದಲ್ಲಿಯೂ ಗಣೇಶ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂವರು ನಾಯಕಿಯರು. ಅದಿತಿ ಪ್ರಭುದೇವ, ಮೇಘ ಶೆಟ್ಟಿ ಮತ್ತು ರಚನಾ ಇಂದರ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಜೊತೆ-ಜೊತೆಯಲಿ' ಧಾರಾವಾಹಿಯ ನಾಯಕಿ ಮೇಘ ಶೆಟ್ಟಿಗೆ ಇದು ಮೊದಲ ಸಿನಿಮಾ. ಮಹೇಶ್ ಗೌಡ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೊತೆಗೆ 'ರಗಡ್' ಹೆಸರಿನ ಆಕ್ಷನ್ ಮುನ್ನೆಲೆಯಲ್ಲಿರುವ ಸಿನಿಮಾದಲ್ಲಿಯೂ ಗಣೇಶ್ ನಟಿಸಲಿದ್ದಾರೆ.

  ಕಿರುತೆರೆಗೆ ವಾಪಸ್ಸಾಗುತ್ತಿದ್ದಾರೆ ಗಣೇಶ್

  ಕಿರುತೆರೆಗೆ ವಾಪಸ್ಸಾಗುತ್ತಿದ್ದಾರೆ ಗಣೇಶ್

  ಸಿನಿಮಾಗಳ ಜೊತೆಗೆ ಗಣೇಶ್ ಕಿರುತೆರೆಗೂ ವಾಪಸ್ಸಾಗುತ್ತಿದ್ದಾರೆ. ಮನೊರಂಜನಾ ಲೋಕದ ತಮ್ಮ ವೃತ್ತಿಯನ್ನು ಟಿವಿ ಮೂಲಕವೇ ಆರಂಭಿಸಿದ ಗಣೇಶ್, ನಟನೆ ಜೊತೆಗೆ ನಿರೂಪಕರಾಗಿಯೂ ಜನಪ್ರಿಯರು. 'ಕಾಮಿಡಿ ಟೈಂ' ಮೂಲಕ ವೃತ್ತಿ ಆರಂಭಿಸಿದ ಗಣೇಶ್, ಕಲರ್ಸ್‌ ಟಿವಿಯಲ್ಲಿ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇದೀಗ ಜೀ ವಾಹಿನಿಯಲ್ಲಿ ಹೊಸ ರೀತಿಯ ರಿಯಾಲಿಟಿ ಶೋ ಒಂದನ್ನು ಗಣೇಶ್ ನಡೆಸಿಕೊಡಲಿದ್ದಾರಂತೆ. ಈ ಬಗ್ಗೆ ಈಗಾಗಲೇ ಅಧಿಕೃತ ಪ್ರೋಮೊ ಒಂದನ್ನು ಹೊರಡಿಸಲಾಗಿದೆ. ಆದರೆ ರಿಯಾಲಿಟಿ ಶೋ ಹೇಗಿರುತ್ತದೆ. ಯಾವಾಗ ಪ್ರಸಾರ ಆಗುತ್ತದೆ ಇನ್ನುಳಿದ ಮಾಹಿತಿಗಳನ್ನು ಇನ್ನೂ ಹಂಚಿಕೊಂಡಿಲ್ಲ.

  English summary
  Actor Ganesh went for safari in Kabini forest along with his son. Ganesh saw Cheetha in forest and record video of it and post it on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X