ಮದುವೆ ವಾರ್ಷಿಕೋತ್ಸವದ ಸಂಭ್ರಮ: ಪತ್ನಿಯ ಬಗ್ಗೆ ಗಣೇಶ್ 'ಗೋಲ್ಡನ್' ನುಡಿ

ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗೆ ಇಂದು ಮರೆಯಲಾಗದ ದಿನ. ಯಾಕಂದ್ರೆ, ಈ ದಿನ ಈ ಗೋಲ್ಡನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುದಿನ. ಅಂದ್ಹಾಗೆ ಗಣೇಶ್ ದಂಪತಿ ಇಂದು 12ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

ಈ ಬಗ್ಗೆ ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಪ್ರೀತಿಯ ಪತ್ನಿಯ ಬಗ್ಗೆ ಗೋಲ್ಡನ್ ಮಾತುಗಳನ್ನು ಆಡಿದ್ದಾರೆ. "ಆ ದಿನ ನಿನ್ನ ಮುಖದ ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ನಿನಗೆ ಹಾಯ್ ಹೇಳಿದ್ದು, ನೀನು ನನಗೆ ಹಾಯ್ ಹೇಳಿದ್ದು, ಈಗ 12 ವರ್ಷಗಳು ಕಳೆದಿವೆ. ನೀನೆ ನನ್ನ ಪ್ರೀತಿ, ನನ್ನ ಉತ್ತಮ ಗೆಳತಿ, ನನ್ನ ರಾಣಿ, ನೀನು ನನ್ನ ಆತ್ಮ ಸಂಗಾತಿ, ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪತ್ನಿ" ಎಂದು ಬರೆದುಕೊಂಡಿದ್ದಾರೆ.

ಫೆಬ್ರವರಿ 11, 2008 ಗಣೇಶ್ ಹಾಗೂ ಶಿಲ್ಪಾ ಜೋಡಿ ಹೊಸ ಬದುಕಿಗೆ ಕಾಲಿಟ್ಟರು. ಇಂದಿಗೆ ಅಂದರೆ 12ನೇ ವರ್ಷಗಳು ಈ ಜೋಡಿ ಯಶಸ್ವಿ ದಾಂಪತ್ಯ ಜೀವನ ನಡೆಸಿಕೊಂಡು ಬಂದಿದ್ದಾರೆ. ಗೋಲ್ಡನ್ ಜೋಡಿಗೆ ಚಿತ್ರರಂಗದ ಸ್ನೇಹಿತರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಈ ಸುಂದರ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

Actor Golden Star Ganesh And Shilpa Celebrating 12th Wedding Anniversary

ಕಿರುತೆರೆಯಿಂದ ವೃತ್ತಿ ಜೀವನ ಪ್ರಾರಂಭಿಸಿದ ಗಣೇಶ್ ಇಂದು ಸ್ಯಾಂಡಲ್ ವುಡ್ ನ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. 'ಮುಂಗಾರು ಮಳೆ' ಸಿನಿಮಾ ನಂತರ ಸ್ಟಾರ್ ಆಗಿ ಹೊರಹೊಮ್ಮಿದ ಗಣೇಶ್ ಸಾಕಷ್ಟು ಸಿನಿಮಾಗಗಳನ್ನು ಮಾಡಿದ್ದಾರೆ. ಸದ್ಯ ಗಣಿ 'ಗಾಳಿಪಟ-2' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Kannada Actor Golden star Ganesh and Shilpa celebrating 12th wedding anniversary. Ganesh and Shilpa tied the knot on february 12th 2008.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X