For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗು ನಿರೀಕ್ಷೆಯಲ್ಲಿ ನಟ ಹರೀಶ್ ರಾಜ್ ದಂಪತಿ

  |

  ಕನ್ನಡದ ಖ್ಯಾತ ನಟ ಹರೀಶ್ ರಾಜ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಹರೀಶ್ ರಾಜ್ ಪತ್ನಿ ಶ್ರುತಿ ಅವರ ಸೀಮಂತ ಕಾರ್ಯಕ್ರಮ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಕುರಿತು ಸ್ವತಃ ಹರೀಶ್ ರಾಜ್ ಅವರೇ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದು, ''ನಮ್ಮ ಕುಟುಂಬ ದೊಡ್ಡದಾಗುತ್ತಿದೆ. ನಾವು ಎರಡನೇ ಮಗು ನಿರೀಕ್ಷೆಯಲ್ಲಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ, ದೀಪಾವಳಿ ಹಬ್ಬದ ಶುಭಾಶಯಗಳು'' ಎಂದು ಮಾಹಿತಿ ನೀಡಿದ್ದಾರೆ.

  ನಟ ಹರೀಶ್ ರಾಜ್‌ಗೆ 'ಲಿಮ್ಕಾ ದಾಖಲೆ' ಪ್ರಮಾಣ ಪತ್ರನಟ ಹರೀಶ್ ರಾಜ್‌ಗೆ 'ಲಿಮ್ಕಾ ದಾಖಲೆ' ಪ್ರಮಾಣ ಪತ್ರ

  ಹರೀಶ್ ರಾಜ್ ಮತ್ತು ಶ್ರುತಿ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು ಇದೆ. ತಮ್ಮ ಮಗು ಹಾಗೂ ಒತ್ನಿ ಜೊತೆ ಫೋಟೋ ಹಂಚಿಕೊಂಡಿರುವ ಹರೀಶ್, ದೀಪಾವಳಿ ಹಬ್ಬದ ವಿಶೇಷವಾಗಿ ಸಿಹಿ ಸುದ್ದಿ ನೀಡಿದ್ದರು.

  ಅಂದ್ಹಾಗೆ, ಹರೀಶ್ ರಾಜ್ ಮತ್ತು ಶ್ರುತಿ 2014ರಲ್ಲಿ ವಿವಾಹವಾಗಿದ್ದರು. ಈ ಮದುವೆಯಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಶ್ರುತಿ ಲೋಕೇಶ್ ಎಂಎಸ್‌ಸಿ ಪದವೀಧರೆ ಆಗಿದ್ದಾರೆ.

  ಹರೀಶ್ ರಾಜ್ ಅವರು ಕಿರುತೆರೆ ಹಾಗೂ ಸಿನಿಮಾ ಇಂಡಸ್ಟ್ರಿ ಎರಡು ಕಡೆಯೂ ತೊಡಗಿಕೊಂಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಸಿನಿಮಾ ಮಾಡಿದ್ದಾರೆ. ಜೊತೆಗೆ ನಿರ್ದೇಶಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.

  2009ರಲ್ಲಿ ಕಲಾಕರ್ ಚಿತ್ರ ನಿರ್ದೇಶಿಸಿದ್ದರು. ನಂತರ 2011ರಲ್ಲಿ ಗನ್ ಎಂಬ ಚಿತ್ರ ನಿರ್ದೇಶಿಸಿದ್ದರು. ಜೈಲಲಿತಾ, ನಮೋ ಭೂತಾತ್ಮ, ಪವರ್, ಅಂಬರ, ಬರ್ಫಿ, ಸುಗ್ರೀವ, ಐದೊಂದ್ಲ ಐದು ಸೇರಿದಂತೆ ಹಲವರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada

  ಕಳೆದ ವರ್ಷ ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಮಜಾಭಾರತ' ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ.

  English summary
  Actor Harish Raj and wife Shruti expecting their second child. Baby showers held.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X