For Quick Alerts
  ALLOW NOTIFICATIONS  
  For Daily Alerts

  ನಟ ಹರೀಶ್ ರಾಜ್ ಆರತಕ್ಷತೆಗೆ ತಾರೆಗಳ ಮೆರುಗು

  By Rajendra
  |

  ನಟ, ನಿರ್ದೇಶಕ ಹರೀಶ್ ರಾಜ್ ಅವರು ಶ್ರುತಿ ಲೋಕೇಶ್ ಅವರ ಕೈಹಿಡಿಯುವ ಮೂಲಕ ತಮ್ಮ ಬಾಳಿನಲ್ಲಿ ನೂತನ ಅಧ್ಯಾಯ ಆರಂಭಿಸಿದ್ದಾರೆ. ಅವರ ಮದುವೆ ಬುಧವಾರ (ಆ.20) ಶಾಸ್ತ್ರೋಕ್ತವಾಗಿ ನಡೆಯಿತು. ಎಂ.ಎಸ್ಸಿ ಪದವೀಧರೆಯಾದ ಶ್ರುತಿ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

  ಮ್ಯಾಟ್ರಿಮೋನಿಯ ತಾಣದ ಮೂಲಕ ಹರೀಶ್ ರಾಜ್ ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರಿಬ್ಬರದ್ದೂ ಇಂಟರ್ ನೆಟ್ ಮೂಲಕ ಆರಂಭವಾದ ಮದುವೆಯಾದರೂ ಬಹಳ ಶಾಸ್ತ್ರಬದ್ಧವಾಗಿ, ಸಂಪ್ರದಾಯದ ಪ್ರಕಾರ ಮದುವೆ ನೆರವೇರಿತು. [ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಟ ಹರೀಶ್ ರಾಜ್]

  ಇವರಿಬ್ಬರ ಮದುವೆ ಬೆಂಗಳೂರು ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಜಸ್ಮಾ ಭವನದಲ್ಲಿ ನಡೆಯಿತು. ಬುಧವಾರ (ಆ.20) ಸಂಜೆ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಯಾಂಡಲ್ ವುಡ್ ಚಿತ್ರರಂಗದ ಹಲವಾರು ತಾರೆಗಳು ಆಗಮಿಸಿ ನೂತನ ಜೋಡಿಗೆ ಶುಭಕೋರಿದರು. ಸ್ಲೈಡ್ ನಲ್ಲಿ ನೋಡಿ ಮದುವೆ ಆಲ್ಬಂ.

  ನೂತನ ಜೋಡಿಗೆ ಶುಭಕೋರಿದ ತರುಣ್, ಧರ್ಮ

  ನೂತನ ಜೋಡಿಗೆ ಶುಭಕೋರಿದ ತರುಣ್, ಧರ್ಮ

  ಹರೀಶ್ ರಾಜ್ ಮತ್ತು ಶ್ರುತಿ ಅವರಿಗೆ ನಟರಾದ ತರುಣ್ ಚಂದ್ರ ಮತ್ತು ಖಳನಟ ಧರ್ಮ ಅವರು ಶುಭಕೋರಿದರು.

  ಜೊತೆಯಾಗಿ ಹಿತವಾಗಿ ವಿ ಮಹೋಹರ್

  ಜೊತೆಯಾಗಿ ಹಿತವಾಗಿ ವಿ ಮಹೋಹರ್

  ಸಂತಸ ಅರಳುವ ಸಮಯ‌ ಮರೆಯೋಣ ಚಿಂತೆಯ‌ ಇದು ರಮ್ಯ ಚೈತ್ರ ಕಾಲ ಹಾಡನ್ನು ಮನೋಹರ್ ನೆನೆಪಿಸುತ್ತಿರುವಂತಿದೆ.

  ಟಿಎಸ್ ನಾಗಾಭರಣರಿಂದ ಶುಭಹಾರೈಕೆ

  ಟಿಎಸ್ ನಾಗಾಭರಣರಿಂದ ಶುಭಹಾರೈಕೆ

  ಟಿಎಸ್ ನಾಗಾಭರಣ ಅವರು ಹರೀಶ್ ಕೈಕುಲುಕಿ ನಿಮ್ಮ ದಾಂಪತ್ಯ ಜೀನವ ನೂರ್ಕಾಲ ಹೀಗೇ ಇರಲಿ ಎಂದು ಹಾರೈಸಿದರು.

  ಅಭಿನಯ ಶಾರದೆ ಜಯಂತಿ ಹಾರೈಕೆ

  ಅಭಿನಯ ಶಾರದೆ ಜಯಂತಿ ಹಾರೈಕೆ

  ಹೂಗುಚ್ಛವನ್ನು ನೀಡಿ ನೂತನ ದಂಪತಿಗಳನ್ನು ಹರಸಿದರು ಅಭಿನಯ ಶಾರದೆ ಜಯಂತಿ.

  ನಿಮ್ಮ ಜೀವನ ಗಾಳಿಪಟದಂತೆ ಹಾರಾಡಲಿ

  ನಿಮ್ಮ ಜೀವನ ಗಾಳಿಪಟದಂತೆ ಹಾರಾಡಲಿ

  ಗಾಳಿಪಟ ಚಿತ್ರದ ಗೊಂಬೆ ಭಾವನಾ ರಾವ್ ಅವರು ನಿಮ್ಮಿಬ್ಬರ ಬಾಳು ಗಾಳಿಪಟದಂತೆ ಸದಾ ಹಾರಾಡುತ್ತಿರಲಿ ಎಂದು ಹರಸಿದಂತೆ.

  ಗಿರೀಶ್ ಕಾಸರವಳ್ಳಿ, ರವಿಚೇತನ್ ಹಾರೈಕೆ

  ಗಿರೀಶ್ ಕಾಸರವಳ್ಳಿ, ರವಿಚೇತನ್ ಹಾರೈಕೆ

  ನೂತನ ದಂಪತಿಗಳಿಗೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ ರವಿಚೇತನ್ ಅವರು ಶುಭ ಹಾರೈಸಿದರು.

  ಬ್ಯಾಂಕ್ ಜನಾರ್ಧನ್, ರೂಪಿಕಾರಿಂದ ಶುಭಕಾಮನೆಗಳು

  ಬ್ಯಾಂಕ್ ಜನಾರ್ಧನ್, ರೂಪಿಕಾರಿಂದ ಶುಭಕಾಮನೆಗಳು

  ಹಾಸ್ಯನಟ ಬ್ಯಾಂಕ್ ಜನಾರ್ಧನ್ ಮತ್ತು ನಟಿ ರೂಪಿಕಾ ಅವರು ನೂತನ ದಂಪತಿಗಳಿಗೆ ಶುಭ ಕಾಮನೆಗಳನ್ನು ಕೋರಿದರು.

  ತಬ್ಲಾ ನಾಣಿ ಅವರಿಂದ ಶುಭ ಹಾರೈಕೆ

  ತಬ್ಲಾ ನಾಣಿ ಅವರಿಂದ ಶುಭ ಹಾರೈಕೆ

  ತಬ್ಲಾ ನಾಣಿ ಅವರು ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಮರೆಯದೆ ಊಟ ಮಾಡಿಕೊಂಡು ಹೋಗಿ ಸಾರ್ ಎನ್ನುತ್ತಿದ್ದಾರೆ ಹರೀಶ್ ರಾಜ್.

  ಜೈ ಜಗದೀಶ್ ಅವರಿಂದ ಬೆಸ್ಟ್ ವಿಷಶ್

  ಜೈ ಜಗದೀಶ್ ಅವರಿಂದ ಬೆಸ್ಟ್ ವಿಷಶ್

  ಜೈ ಜಗದೀಶ್ ಅವರು ನೂತನ ದಂಪತಿಗಳ ಜೊತೆ ಫೋಸು ಕೊಟ್ಟ ರೀತಿ.

  ನಿರ್ದೇಶಕ ನಾಗಣ್ಣ ಅವರಿಂದ ಶುಭ ಹಾರೈಕೆ

  ನಿರ್ದೇಶಕ ನಾಗಣ್ಣ ಅವರಿಂದ ಶುಭ ಹಾರೈಕೆ

  ಚಲನಚಿತ್ರ ನಟ ನಾಗಣ್ಣ ಅವರಿಂದ ನೂತನ ದಂಪತಿಗಳಿಗೆ ಶುಭ ಹಾರೈಕೆ.

  ಪವರ್ ಸ್ಟಾರ್ ಪುನೀತ್ ರಾಜ್ ರಿಂದ ಹೊಸ ಪವರ್

  ಪವರ್ ಸ್ಟಾರ್ ಪುನೀತ್ ರಾಜ್ ರಿಂದ ಹೊಸ ಪವರ್

  ಆರತಕ್ಷತೆಗೆ ಪವರ್ ಸ್ಟಾರ್ ಬಂದಿದ್ದಾರೆ ಎಂದರೆ ಹರೀಶ್ ರಾಜ್ ದಂಪತಿಗಳಿಗೆ ಅದಕ್ಕಿಂತಲೂ ಖುಷಿ ಉಂಟೇ?

  ಓಹ್ ಸುಧಾರಾಣಿ ಬಂದರು

  ಓಹ್ ಸುಧಾರಾಣಿ ಬಂದರು

  ಇತ್ತೀಚೆಗೆ ಮಾಧ್ಯಮಗಳಿಂದ ದೂರವಾಗಿದ್ದ ನಟಿ ಸುಧಾರಾಣಿ ಅವರು ಆರತಕ್ಷತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಗೆ.

  ಎಲ್ಲಿ ಒಂದು ಪೋಸ್ ಕೊಡಿ

  ಎಲ್ಲಿ ಒಂದು ಪೋಸ್ ಕೊಡಿ

  ಎಲ್ಲಿ ಇಬ್ಬರೂ ಒಂದು ಕ್ಲೋಸ್ ಆಗಿ ಒಂದು ಪೋಸ್ ಕೊಡಿ.

  English summary
  Kannada actor Harish Raj married Shruti Lokesh on the morning of August 20 at the Jasma Bhavan in Bangalore. The reception, held in the evening was an extravagant affair with stars like Puneeth Rajkumar, Jai Jagadish, Jayanthi, Sudharani turning up to bless the new couple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X