ನಟ ಇರ್ಫಾನ್ ಖಾನ್ ವಿಧಿವಶ: ಬಾಲಿವುಡ್ ಕಂಬನಿ ಮಿಡಿದಿದ್ದು ಹೀಗೆ

ಖ್ಯಾತ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ. ಸಿನಿಪ್ರೇಮಿಗಳಿಗೆ ಇದೊಂದು ಅರಗಿಸಿಕೊಳ್ಳಲಾರದ ಸುದ್ದಿ. ಕೊರೊನಾದಂತಹಾ ಸಂಕಷ್ಟದ ಸಮಯದಲ್ಲಿ ಇರ್ಫಾನ್ ಖಾನ್ ಇನ್ನಿಲ್ಲ ಎಂಬುದು ಗಾಯದ ಮೇಲೆ ಬರೆ.

Recommended Video

ಕ್ಯಾನ್ಸರ್ ಪೀಡಿತ ನಟನ ಪತ್ರದಲ್ಲಿ ಏನಿದೆ..? | FIlmibeat Kannada

ಇರ್ಫಾನ್ ಖಾನ್ ನಟನೆಗೆ ಮಾರುಹೋಗದವರಿಲ್ಲ. ಸಿನಿ ಪ್ರೇಕ್ಷಕರು ಮಾತ್ರವಲ್ಲ ಸಿನಿಮಾ ನಟರೂ ಸಹ ಇರ್ಫಾನ್ ಖಾನ್ ಅಭಿಮಾನಿಗಳೇ. ದಶಕಗಳಿಂದಲೂ ಸ್ಟಾರ್ ಪಟ್ಟದಲ್ಲಿ ಕುಳಿತವರು, ಹೊಸದಾಗಿ ಸಿನಿಮಾರಂಗಕ್ಕೆ ಧುಮುಕಿದವರು ಎಲ್ಲರೂ ಇರ್ಫಾನ್ ಖಾನ್ ನಟನೆಯನ್ನು ಹೊಗಳುವವರೇ.

ಇಂಥಹಾ ಇರ್ಫಾನ್ ಖಾನ್ ಇಂದು ವಿಧಿವಶರಾಗಿದ್ದಾರೆ. ಅವರ ತಾಯಿ ನಾಲ್ಕು ದಿನ ಹಿಂದೆಯಷ್ಟೆ ನಿಧನ ಹೊಂದಿದ್ದರು. ತಾಯಿಯ ಹಿಂದೆಯೇ ಸೆರಗು ಹಿಡಿದು ಹೊರಟುಹೋಗಿದ್ದಾರೆ 54 ರ ಹರೆಯದ ನಟ ಇರ್ಫಾನ್ ಖಾನ್.

ಇರ್ಫಾನ್ ಖಾನ್ ಅಗಲಿಕೆಗೆ ಇಡೀಯ ಬಾಲಿವುಡ್ ಕಂಬನಿ ಮಿಡಿದಿದೆ. ಅವರೊಬ್ಬ ಅಜಾತ ಶತ್ರು. ನಟನೆಯಿಂದ ಎಲ್ಲರನ್ನೂ ಪ್ರೇರೇಪಿಸಿದ್ದವರು. ಅವರ ಅಗಲಿಕೆಗೆ ಬಾಲಿವುಡ್ ನಟ-ನಟಿಯರು ಏನೆಂದಿದ್ದಾರೆ? ಮುಂದೆ ಓದಿ...

ಕಂಬನಿ ಮಿಡಿದ ಅಮಿತಾಬ್ ಬಚ್ಚನ್

ಕಂಬನಿ ಮಿಡಿದ ಅಮಿತಾಬ್ ಬಚ್ಚನ್

'ಇರ್ಫಾನ್ ಖಾನ್ ಅಗಲಿಕೆ ದೊಡ್ಡ ನಿರ್ವಾತವನ್ನು ಭಾರತೀಯ ಸಿನಿಮಾರಂಗದಲ್ಲಿ ಸೃಷ್ಟಿಸಲಿದೆ. ಅವರೊಬ್ಬ ಅತ್ಯದ್ಭುತ ಪ್ರತಿಭೆ, ಪರಿಪೂರ್ಣ ನಟ, ಅದ್ಭುತ ಸಹ ನಟ. ಅವರು ವಿಶ್ವ ಸಿನಿಮಾಕ್ಕೆ ನೀಡಿದ ಕೊಡುಗೆ ಅಳಿಸಲಸಾಧ್ಯ' ಎಂದು ಅಮಿತಾಬ್ ಹೇಳಿದ್ದಾರೆ.

ಸ್ಪೂರ್ತಿ ತುಂಬಿದ ನಟ ನೀವು: ಪ್ರಿಯಾಂಕಾ

ಸ್ಪೂರ್ತಿ ತುಂಬಿದ ನಟ ನೀವು: ಪ್ರಿಯಾಂಕಾ

ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದು, ನೀವು ಅಭಿನಯಿಸಿದ ಎಲ್ಲ ಪಾತ್ರಕ್ಕೂ ಜೀವ ತುಂಬಿದವರು, ನೀವು ಮುಟ್ಟಿದ್ದೆಲ್ಲವೂ ಮ್ಯಾಜಿಕ್. ನಿಮ್ಮ ಪ್ರತಿಭೆ ಅನೇಕರಿಗೆ ಮಾದರಿ ಮತ್ತು ನಮ್ಮಂಥಹಾ ಅನೇಕರಿಗೆ ಸ್ಪೂರ್ತಿ ತುಂಬಿದೆ. ನಿಮ್ಮನ್ನು ನಿಜವಾಗಿಯೂ ನಾವು ಮಿಸ್ ಮಾಡಿಕೊಳ್ಳುತ್ತೇವೆ. ಕುಟುಂಬಕ್ಕೆ ದುಖಃ ತುಂಬುವ ಶಕ್ತಿ ನೀಡಲಿ ಎಂದು ಪ್ರಿಯಾಂಕಾ ಹೇಳಿದ್ದಾರೆ.

ನಟ ಟೈಗರ್ ಶ್ರಾಫ್ ಕಂಬನಿ

ನಟ ಟೈಗರ್ ಶ್ರಾಫ್ ಕಂಬನಿ

ಉದೋನ್ಮುಖ ನಟ ಟೈಗರ್ ಶ್ರಾಫ್ ಸಹ ಇರ್ಫಾನ್ ಖಾನ್ ಅಗಲಿಕೆ ಬಗ್ಗೆ ಟ್ವೀಟ್ ಮಾಡಿದ್ದು, ತುಂಬಾ ಬೇಗನೆ ನಮ್ಮನ್ನು ಅಗಲಿ ಹೊರಟಿದ್ದೀರಿ. ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಭಗವಂತ ನೀಡಲೆಂದು ಆಶಿಸಿದ್ದಾರೆ.

ನಾನು ಅಭಿಮಾನಿಸುವ ನಟ ಇರ್ಫಾನ್: ಅಭಿಶೇಕ್ ಬಚ್ಚನ್

ನಾನು ಅಭಿಮಾನಿಸುವ ನಟ ಇರ್ಫಾನ್: ಅಭಿಶೇಕ್ ಬಚ್ಚನ್

ನಾನು ಅಭಿಮಾನಿಸುವ ನಟ ಇರ್ಫಾನ್ ಖಾನ್. ಅವರ ಅಭಿನಯದ ಪರಿಪೂರ್ಣೆತೆಗೆ ಹತ್ತಿರವಾದುದು. ಅವರೊಬ್ಬ ಅತ್ಯದ್ಭುತ ನಟ. ನಟನ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ನಟ ಅಭಿಶೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

ಕೈಹಿಡಿದು ಹಾಡಿದ್ದ ಹಾಡು ನೆನಪಿಸಿಕೊಂಡ ನಿರ್ದೇಶಕ

ಕೈಹಿಡಿದು ಹಾಡಿದ್ದ ಹಾಡು ನೆನಪಿಸಿಕೊಂಡ ನಿರ್ದೇಶಕ

ಇರ್ಫಾನ್ ಗೆ ಖಾಯಿಲೆ ಇದೆ ಎಂದು ಗೊತ್ತಾದಾಗ ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ಇರ್ಫಾನ್ ಕೈ ಹಿಡಿದು ಹಾಡಿದ್ದ ಹಾಡನ್ನು ಟ್ವಿಟ್ಟರ್‌ ನಲ್ಲಿ ನೆನಪು ಮಾಡಿಕೊಂಡಿದ್ದಾರೆ. ಹಾಡಿನ ಭಾವಾರ್ಥ ಹೀಗಿದೆ; ನಾನು ಹೃದಯದಿಂದ ಹೇಳಿದೆ ಖುಷಿ ಹುಡುಕಿಕೊಂಡು ಬಾ ಎಂದು, ಆದರೆ ನೀನು ನೋವು ತಂದೆ, ಅದೇ ಇರಲಿ ಬಿಡು, ಸಂತೋಶವಾಗಿ ಸ್ವೀಕರಿಸುವೆ'.

ಮಲ್ಲಿಕಾ ಶೆರಾವತ್ ಟ್ವೀಟ್

ಮಲ್ಲಿಕಾ ಶೆರಾವತ್ ಟ್ವೀಟ್

ಬಾಲಿವುಡ್‌ ನಿಂದ ದೂರವೇ ಉಳಿದಿರುವ ನಟಿ ಮಲ್ಲಿಕಾ ಶೆರಾವತ್ ಇರ್ಫಾನ್ ಖಾನ್ ಜೊತೆಗೆ ನಟಿಸಿದ್ದನ್ನು ಸ್ಮರಿಸಿಕೊಂಡಿದ್ದು, ಹಿಸ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು, ಅವರೊಬ್ಬ ಅತ್ಯದ್ಭುತ ನಟ, ಶ್ರೇಷ್ಠತೆಯನ್ನು ಮೀರಿದ ನಟ ಎಂದು ಹೊಗಳಿದ್ದಾರೆ.

More from Filmibeat

English summary
Actor Irfan Khan passes away today. Bollywood actors mourns on Irfan's death. Here is what stas said about his death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X