ಕಾಟೇರ ಅಪ್‌ಡೇಟ್: ಕಾಟೇರ ಬಳಿಕ ತರುಣ್ ಮತ್ತಷ್ಟು ಎತ್ತರಕ್ಕೆ ಏರುತ್ತಾರೆ ಎಂದ ಖಳನಟ ಜಗಪತಿ ಬಾಬು
ಈ ವರ್ಷಾಂತ್ಯದಲ್ಲಿ ಕನ್ನಡಿಗರು ಉಸಿರು ಬಿಗಿ ಹಿಡಿದು ಕಾಯುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾಕ್ಕಾಗಿ. ಡಿಸೆಂಬರ್ 29 ರಂದು ಚಿತ್ರಮಂದಿರಗಳಿಗೆ ಸಿನಿಮಾ ಲಗ್ಗೆಯಿಡುತ್ತಿದೆ. ಟ್ರೈಲರ್, ಹಾಡುಗಳಿಂದ ಈಗಾಗಲೇ ಸಿನಿಮಾ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಚಿತ್ರದಲ್ಲಿ ಕನ್ನಡಿಗರಲ್ಲದೆ ಬಹುಭಾಷ ನಟರು ನಟಿಸಿದ್ದು, ಅವರಲ್ಲಿ ನಟ ಜಗಪತಿ ಬಾಬು ಗಮನ ಸೆಳೆಯುತ್ತಿದ್ದಾರೆ.
ಬಹುಭಾಷಾ ನಟ ಜಗಪತಿ ಬಾಬು ನಾಯಕನಾಗಿ ತೆಲುಗು ಸಿನಿಲೋಕದಲ್ಲಿ ಮಿಂಚಿದ್ದವರು. ಆದರೆ, ಖಳನಾಯಕನಾದ ಮೇಲೆ ತೆಲುಗು ಒಂದೇ ಅಲ್ಲ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ನಟನಾಗಿ ಅವರ ವ್ಯಾಪ್ತಿ ತುಂಬಾನೇ ವಿಸ್ತಿರಿಸಿದೆ. ಈ ವರ್ಷ ಕೂಡ ಅವರ ನಟನೆಯ ಹಲವು ಸಿನಿಮಾಗಳು ಬಿಡುಗಡೆಯಾಗಿದ್ದು, 'ಸಲಾರ್'ನಲ್ಲಿ ರಾಜಮನ್ನಾರ್ ಆಗಿ ಮೆರೆದಿದ್ದು, 'ಕಾಟೇರ'ದಲ್ಲಿ ದೇವರಾಯ ಪಾತ್ರದಲ್ಲಿ ಖಡಕ್ ಲುಕ್ ನೀಡಿದ್ದಾರೆ.

ಸಲಾರ್ ಮುಗಿತು...ಈಗ ಕಾಟೇರ ಮೇಲೆ ಕಣ್ಣು
ನಟ ಜಗಪತಿ ಬಾಬು ಅಭಿನಯಿಸಿರುವ 'ಸಲಾರ್' ಬಿಡುಗಡೆಯಾಗಿದೆ. ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಜನವರಿಯಲ್ಲಿ ಮಹೇಶ್ ಬಾಬು ಜೊತೆಗೆ ನಟಿಸಿರುವ 'ಗುಂಟೂರು ಖಾರಂ' ಬಿಡುಗಡೆಯಾಗಲಿದೆ. ಈಗ ಅವರು ಕಾತುರದಿಂದ ಕಾಯುತ್ತಿರುವುದು ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಡಿಸೆಂಬರ್ 29 ರಂದು ಬಿಡುಗಡೆಯಾಗಲಿರುವ 'ಕಾಟೇರ' ಸಿನಿಮಾಕ್ಕಾಗಿ.
ಕಾಟೇರ ಸಿನಿಮಾ ಮೂಲಕ ನಟ ಜಗಪತಿ ಬಾಬು ಮೂರನೇ ಬಾರಿ ತರುಣದ ಕಿಶೋರ್ ಸುಧೀರ್ ಅವರೊಂದಿಗೆ ಕೈ ಜೋಡಿಸಿದ್ದಾರೆ. ಈ ಹಿಂದೆ ಬಚ್ಚನ್ ಮತ್ತು ರಾಬರ್ಟ್ ಸಿನಿಮಾಗಳಲ್ಲಿ ಖಳನಟನಾಗಿ ಜಗಪತಿ ಬಾಬು ಮಿಂಚಿದ್ದರು. ಇನ್ನು ಕಾಟೇರ ನಟ ದರ್ಶನ್ ಮತ್ತು ತರುಣ್ ಕಿಶೋರ್ ಸುಧೀರ್ ಅವರ ಕಾಂಬಿನೇಷನ್‌ನ ಎರಡನೇ ಸಿನಿಮಾ.
ಕಾಟೇರ ಬಳಿಕ ತರುಣ್ ಭವಿಷ್ಯ ಬದಲಾಗಲಿದೆ
ನಟ ಜಗಪತಿ ಬಾಬು ಸಿನಿ ಎಕ್ಸ್‌ಪ್ರೇಸ್ ಜೊತೆಗೆ ಕಾಟೇರ ಸಿನಿಮಾ ಮತ್ತು ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಕಡಿಮೆ ಮಾತನಾಡುವ ಅವರು, ನಿರ್ದೇಶಕ ತರುಣ್ ಸುಧೀರ್ ಮತ್ತು ನಟ ದರ್ಶನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಚಿತ್ರದ ಬಗ್ಗೆ ನನಗೆ ವಿಶ್ವಾಸವಿದೆ. ಎಲ್ಲ ಸವಾಲುಗಳನ್ನು ಎದುರಿಸಿ 'ಕಾಟೇರ' ಉತ್ತಮ ಪ್ರದರ್ಶನ ನೀಡಲಿದೆ. ತರುಣ್ ಅವರ ಶೈಲಿಯು ಯಾವಾಗಲೂ ನನಗೆ ಮೆಚ್ಚುಗೆಯಾಗಯತ್ತದೆ. ಅವರು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ. ಕಾಟೇರಾ ನಂತರ, ತರುಣ್ಮ, ಮತ್ತಷ್ಟು ಎತ್ತರಕ್ಕೆ ಏರುತ್ತಾನೆ ಎಂದು ನನಗೆ ಖಾತ್ರಿಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, ನಟ ದರ್ಶನ್ ಜೊತೆ ಎರಡು ಚಿತ್ರಗಳಲ್ಲಿ ಕೆಲಸ ಮಾಡಿದ ಖುಷಿಯ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ತರುಣ್ ಅವರ ಪ್ರತಿಭೆ ಮತ್ತು ಪ್ರಾಮಾಣಿಕತೆಯ ಜೊತೆಗೆ ದರ್ಶನ್ ಅವರ ಸ್ವಭಾವವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ "ಕನ್ನಡ ಪ್ರೇಕ್ಷಕರು ಚಲನಚಿತ್ರಗಳನ್ನು ಚಲನಚಿತ್ರಗಳಾಗಿ ಮತ್ತು ತಾರೆಯರನ್ನು ನಿಜವಾದ ಸ್ಟಾರ್‌ಗಳಂತೆ ನೋಡುತ್ತಾರೆ" ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಕಾಟೇರ ಸಿನಿಮಾ ಹಳ್ಳಿಯ ಜೀವನ ಮತ್ತು ನೈಜ್ಯ ವಿಷಯಗಳ ಮೇಲೆ ತೆಗೆದಿರುವ ಚಿತ್ರ ಎಂದಿರುವ ಜಗಪತಿ ಬಾಬು, ಚಿತ್ರದಲ್ಲಿ ದೇವರಾಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರು, ತಮಗೆ ಸಮಯ ಸಿಗುತ್ತಿಲ್ಲ ಎಂದೂ ಕೇಳಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಅವರ ಹಿಂದಿ ಚಿತ್ರವೂ ತೆರೆಗೆ ಬರುತ್ತಿದೆ.


Click it and Unblock the Notifications











